More

    ಟ್ರಾಲಿ ಬ್ಯಾಗ್​ ಎಳ್ಕೊಂಡು ಬರ್ತಿದ್ದವಳ ಮೇಲೆ ಸಂಶಯಗೊಂಡು ಬ್ಯಾಗ್ ಓಪನ್​ ಮಾಡಿಸಿದ ಪೊಲೀಸರಿಗೆ ಕಾದಿತ್ತು ಶಾಕ್​!

    ಲಖನೌ: ಪ್ರಿಯಕರನ ಕತ್ತು ಸೀಳಿ ಕೊಲೆ ಮಾಡಿ, ಮೃತದೇಹವನ್ನು ಟ್ರಾಲಿ ಬ್ಯಾಗ್​ನಲ್ಲು ತುಂಬಿ ಸಾಗಿಸುತ್ತಿದ್ದ ಆರೋಪಿ ಮಹಿಳೆಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಭಾನುವಾರ ಘಾಜಿಯಾಬಾದ್​ನಲ್ಲಿ ನಡೆದಿದೆ.

    ಕೊಲೆಯಾದ ಪ್ರಿಯಕರನ್ನು 22 ವರ್ಷದ ಫಿರೋಜ್​ ಎಂದು ಗುರುತಿಸಲಾಗಿದೆ. ಈತ ವೃತ್ತಿಯಲ್ಲಿ ಕ್ಷೌರಿಕನಾಗಿದ್ದ. 36 ವರ್ಷದ ಪ್ರೇಯಸಿ ಪ್ರೀತಿ ಶರ್ಮಾ ಎಂಬಾಕೆಯಿಂದ ಬರ್ಬರವಾಗಿ ಹತ್ಯೆಯಾಗಿದ್ದಾನೆ. ಮದುವೆ ಆಗಲು ನಿಕಾರಿಸಿದ್ದಕ್ಕೆ ಪ್ರೀತಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

    ಪ್ರೀತಿ ಮತ್ತು ಫಿರೋಜ್​ ಕಳೆದ 4 ವರ್ಷಗಳಿಂದ ಒಟ್ಟಿಗೆ ಬಾಳುತ್ತಿದ್ದರು ಅಂದರೆ, ಲಿವಿಂಗ್​ ಟುಗೆದರ್​ನಲ್ಲಿದ್ದು. ಪ್ರೀತಿಗೆ ಈಗಾಗಲೇ ಮದುವೆ ಆಗಿದ್ದು, ಮಕ್ಕಳ ಸಾವಿನ ಬಳಿಕ ಗಂಡನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ವೇಳೆ ಆಕೆಗೆ ಫಿರೋಜ್​ ಪರಿಚಯವಾಗಿದೆ. ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ, ಪ್ರೀತಿ ಮದುವೆ ಆಗುವಂತೆ ದುಂಬಾಲು ಬಿದ್ದಾಗ, ಮದುವೆ ಆಗಲು ಫಿರೋಜ್​ ನಿರಾಕರಿಸುತ್ತಿದ್ದ. ಕೋಮುಗಲಭೆಗೆ ಕಾರಣವಾಗಬಹುದು ಎಂಬ ಕಾರಣ ನೀಡಿ ಮದುವೆಗೆ ನಿರಾಕರಿಸುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಾಗ, ತಾಳ್ಮೆ ಕಳೆದುಕೊಂಡ ಪ್ರೀತಿ, ರೇಜರ್​ ತೆಗೆದುಕೊಂಡು ಫಿರೋಜ್​ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಬಳಿಕ ದೊಡ್ಡದಾಗ ಟ್ರಾಲಿ ಬ್ಯಾಗ್​ ತೆಗೆದುಕೊಂಡು ಮೃಹದೇಹವನ್ನು ಒಳಗೆ ತುಂಬಿಕೊಂಡಿದ್ದಾಳೆ. ಅದನ್ನು ಬೀಸಾಡಿ ಬರಲು ಹೋದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

    ಸುಮಾರು ಒಂದು ದಿನಗಳ ಕಾಲ ಮೃತದೇಹವಿದ್ದ ಬ್ಯಾಗ್​ ಅನ್ನು ಅಪಾರ್ಟ್​ಮೆಂಟ್​ ಒಳಗೆ ಇಟ್ಟಿದ್ದಳು. ಜನಜಂಗುಳಿ ಇರುವ ಪ್ರದೇಶದಲ್ಲಿ ಎಸೆದು ಬರಲು ಯತ್ನಿಸುತ್ತಿದ್ದಳು. ಆದರೆ, ಅದೇ ಏರಿಯಾದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಅನುಮಾನಗೊಂಡು ಆಕೆಯನ್ನು ತಡೆದು ಪ್ರಶ್ನಿಸಿದ್ದಾರೆ. ಅಲ್ಲದೆ, ಬ್ಯಾಗ್​ ಓಪನ್​ ಮಾಡುವಂತೆ ಕೇಳಿದ್ದಾರೆ. ಮೃತದೇಹ ಇದ್ದುದ್ದನ್ನು ನೋಡಿ ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರಂಭದಲ್ಲಿ ಇದೊಂದು ಅಪಘಾತ ಎಂದು ಹೇಳಿದ್ದ ಪ್ರೀತಿ, ಕೊನೆಗೆ ತಪ್ಪು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

    ಸಾಧನೆ ಮಾಡ್ಬೇಕು ಅಂತ ಮನೆ ಬಿಟ್ಟು ಹೋಗಿ ಅಡ್ಡದಾರಿ ಹಿಡಿದಿದ್ದ ಮಾರಿಮುತ್ತು ಮೊಮ್ಮಗಳ ಜೀವನ ಬದಲಾಗಿದ್ಹೇಗೆ?

    ಕಮಲ್​ ಹಾಸನ್​ ವಿರುದ್ಧ ಗಂಭೀರ ಆರೋಪ ಮಾಡಿದ ಖ್ಯಾತ ಕಿರುತೆರೆ ಕಲಾವಿದೆ: ಅಭಿಮಾನಿಗಳಿಗೆ ಶಾಕ್​!

    ಮಸೀದಿಯೊಳಗೆ ವಧು ಎಂಟ್ರಿ: ತನ್ನ ಮದುವೆಗೆ ತಾನೇ ಬಂದು ಇತಿಹಾಸ ಸೃಷ್ಟಿಸಿದ ಮದುಮಗಳು- ಪರ, ವಿರೋಧ ಚರ್ಚೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts