ಚೊಚ್ಚಲ ಹೆರಿಗೆಯಲ್ಲೇ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ..!

Four Babies
Published on

ಪೆರಿಂಥಲ್​ಮನ್ನ (ಮಲಪ್ಪುರಂ): ಮೊದಲ ಪ್ರಸವದಲ್ಲೇ ಮಹಿಳೆಯೊಬ್ಬಳು ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ವಂಶೋದ್ಧಾರಕರನ್ನು ಪಲಕ್ಕಾಡ್​ನ ಛಲಾವರ ಮೂಲದ ದಂಪತಿ ಮುಸ್ತಾಫ ಮತ್ತು ಮುಬೀನಾ ಸಂತಸದಿಂದಲೇ ಬರಮಾಡಿಕೊಂಡಿದ್ದಾರೆ.

ಮುಸ್ತಾಫ ದಂಪತಿ ಕಳೆದ ವರ್ಷ ಮದುವೆಯಾಗಿದ್ದಾರೆ. ಗರ್ಭಾವಸ್ಥೆಯ ಆರಂಭದಲ್ಲೇ ಮಬೀನಾ ನಾಲ್ಕು ಮಕ್ಕಳ ತಾಯಿ ಆಗಲಿದ್ದಾರೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ಪೆರಿಂಥಲ್​ಮನ್ನದ ಮೌಲಾನಾ ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ. ಅಬ್ದುಲ್​ ವಾಹಾಬ್​ ಅವರ ಬಳಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು.

ಗರ್ಭಾವತಿಯಾಗಿ 8 ತಿಂಗಳು ಕಳೆದ ಬಳಿಕ ಸಿ-ಸೆಕ್ಷನ್​ ಸರ್ಜರಿ ಮೂಲಕ ನಾಲ್ಕು ಮಕ್ಕಳಿಗೆ ಮಬೀನಾ ಜನ್ಮ ನೀಡಿದ್ದಾರೆ. ಪ್ರತಿ ಮಗು 1100 ರಿಂದ 1600 ಗ್ರಾಂ ತೂಗುತ್ತಿದ್ದೆ. ಸದ್ಯ ಮಕ್ಕಳಿಗೆ ನಿಯೋ ಬ್ಲೆಸ್ ವಿಭಾಗದಲ್ಲಿ ವಿಶೇಷ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಎಲ್ಲ ಮಕ್ಕಳು ಸಹ ಆರೋಗ್ಯವಾಗಿದ್ದಾರೆಂದು ನಿಯೋ ಬ್ಲೆಸ್​ ವಿಭಾಗದ ಉಸ್ತುವಾರಿ ಡಾ. ಜಯಚಂದ್ರ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net