More

  ಮಹಿಳೆಯನ್ನು ಸಂಪೂರ್ಣವಾಗಿ ನುಂಗಿದ 16 ಅಡಿ ಉದ್ದದ ಹೆಬ್ಬಾವು! ಭಯಭೀತರಾದ ಸ್ಥಳೀಯ ನಿವಾಸಿಗಳು

  ಮಕಾಸ್ಸರ್: 16 ಅಡಿ ಉದ್ದದ ಬೃಹತ್​ ಹೆಬ್ಬಾವೊಂದು ಮಹಿಳೆಯನ್ನು ಸಂಪೂರ್ಣವಾಗಿ ನುಂಗಿದ ಆಘಾತಕಾರಿ ಘಟನೆಯೊಂದು ಮಧ್ಯ ಇಂಡೋನೇಷ್ಯಾದ ಮಕಾಸ್ಸರ್​ನಲ್ಲಿ ವರದಿಯಾಗಿದೆ. ಹೆಬ್ಬಾವಿನ ಹೊಟ್ಟೆಯೊಳಗೆ ಮಹಿಳೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಹತ್ಯೆಗೈದು ಮೃತದೇಹ ಐದಾರು ತುಂಡು ಮಾಡಿ ಮೋರಿಗೆ ಎಸೆದಿದ್ದ ಆರೋಪಿ ಬಂಧನ

  ಮೃತ ಮಹಿಳೆಯನ್ನು 45 ವರ್ಷದ ಫರೀದಾ ಎಂದು ಗುರುತಿಸಲಾಗಿದ್ದು, ಗುರುವಾರ (ಜೂ.06) ರಾತ್ರಿ ಮನೆಯಿಂದ ಹೊರಹೋದವರು ಹಲವು ಗಂಟೆಗಳು ಕಳೆದರು ಸಹ ಹಿಂತಿರುಗದೆ ಹೋಗಿದ್ದು, ಕುಟುಂಬಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿತು. ನಾಲ್ಕು ಮಕ್ಕಳ ತಾಯಿಯನ್ನು ಹುಡುಕಿಕೊಂಡು ಹೋದ ಸ್ಥಳೀಯರಿಗೆ, ಬೃಹತ್​ ಹೆಬ್ಬಾವೊಂದು ಕಾಣಿಸಿದ್ದು, ಅದರ ಹೊಟ್ಟೆ ಊದಿಕೊಂಡಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಿತು.

  ಮಹಿಳೆಗೆ ಸಂಬಂಧಿಸಿದ ಕೆಲವು ವಸ್ತುಗಳು ಸಹ ಅದೇ ಸ್ಥಳದಲ್ಲಿ ಪತ್ತೆಯಾದ ಕಾರಣ, ಸ್ಥಳೀಯರು ಆಕೆಯನ್ನು ಹೆಬ್ಬಾವು ನುಂಗಿರಬಹುದು ಎಂದು ಊಹಿಸಿ, ಹಾವಿನ ಹೊಟ್ಟೆಯನ್ನು ಕತ್ತರಿಸಿದ್ದಾರೆ. ತಕ್ಷಣವೇ ಫರೀದಾ ಅವರ ತಲೆ ಹೊರಬಂದದ್ದನ್ನು ಗಮನಿಸಿದ ಕುಟುಂಬಸ್ಥರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಂತಹ ಘಟನೆಗಳನ್ನು ಅತ್ಯಂತ ಅಪರೂಪವೆಂದೇ ಹೇಳಿದರು ಕೂಡ ಕಳೆದ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹೆಬ್ಬಾವುಗಳ ಬಾಯಿಗೆ ಅನೇಕ ಜನರು ತುತ್ತಾಗಿದ್ದಾರೆ,(ಏಜೆನ್ಸೀಸ್).

  ನಾಚಿಕೆಯಾಗಬೇಕು ನಿಮಗೆ… ಶಾಹೀನ್ ಅಫ್ರಿದಿ ವರ್ತನೆಗೆ ಛೀಮಾರಿ ಹಾಕಿದ ಕ್ರಿಕೆಟ್ ಅಭಿಮಾನಿಗಳು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts