ಪುತ್ತಿಗೆ ಚಿಕ್ಕಮೇಳದ ತಿರುಗಾಟ ಸಮಾಪ್ತಿ

New Project (25)
Published on

ಮೂಡುಬಿದಿರೆ: ಶ್ರೀ ಕ್ಷೇತ್ರ ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದ ದೇವರ ಹರಿಕೆ ಸೇವಾ ಚಿಕ್ಕಮೇಳ(ಪುತ್ತಿಗೆ ಚಿಕ್ಕಮೇಳ) ಯಶಸ್ವಿಯಾಗಿ 36ನೇ ವರ್ಷದ ತಿರುಗಾಟ ಪೂರ್ಣಗೊಳಿಸಿದೆ.

ಈ ವರ್ಷದ ತಿರುಗಾಟದಲ್ಲಿ ಮೇಳ ಮೂಡುಬಿದಿರೆ ಹಾಗೂ ಸುತ್ತಮುತ್ತಲಿನ ಪರಿಸರ ಮತ್ತು ಕಾರ್ಕಳ ವಠಾರದಲ್ಲಿ ಒಟ್ಟು 3304 ಮನೆಗಳಲ್ಲಿ ಹರಕೆ ಸೇವಾ ಯಕ್ಷಗಾನ ಕಾರ್ಯಕ್ರಮ ನಡೆಸುವ ಮೂಲಕ ಸಾಧನೆ ಮಾಡಿದೆ. ತಿರುಗಾಟದ ಅಂತಿಮ ಹರಕೆ ಸೇವಾ ಆಟ ಸೋಮವಾರ ದೀಪಾವಳಿ ಅಮಾವಾಸ್ಯೆ ದಿನ ಶ್ರೀ ಕ್ಷೇತ್ರ ಪುತ್ತಿಗೆ ದೇವರ ಸಾನ್ನಿಧ್ಯದಲ್ಲಿ ನಡೆಯಿತು. ದೇವರ ಹರಕೆ ಸೇವೆ ಮತ್ತು ಯಕ್ಷಗಾನ ಕಲೆಯ ಪುನರುತ್ಥಾನಕ್ಕೆ ಪುತ್ತಿಗೆ ಚಿಕ್ಕಮೇಳ ನೀಡುತ್ತಿರುವ ಕೊಡುಗೆಗೆ ಭಕ್ತರು ಮತ್ತು ಕಲಾರಾಧಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net