ಲಾಹೋರ್: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ 2024ರ ಟೂರ್ನಿಯ ಮೊದಲ ಹಂತದಲ್ಲೇ ಗೇಟ್ ಪಾಸ್ ಪಡೆದ ಪಾಕಿಸ್ತಾನ, ಟೂರ್ನಿಯ ಪೂರ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ವ್ಯಾಪಕ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿತ್ತು. ಪಾಕ್ ತಂಡದಲ್ಲಿ ಯಾವುದೂ ಸರಿಯಿಲ್ಲ ಎಂದು ದೂಷಿಸಿದ್ದ ಮಾಜಿ ಆಟಗಾರರು, ಬಾಬರ್ ಅಜಂರ ನಾಯಕತ್ವದ ವಿರುದ್ಧ ಕಿಡಿಕಾರಿದ್ದರು. ಇದೆಲ್ಲದರ ಮಧ್ಯೆ ವೇಗಿ ಶಾಹೀನ್ ಆಫ್ರಿದಿ ಬಗ್ಗೆ ಮ್ಯಾನೇಜ್ಮೆಂಟ್ನಿಂದ ಅಪಸ್ವರ ಕೇಳಿಬಂದಿತ್ತು. ಟೀಮ್ನ ಬ್ಯಾಟಿಂಗ್ ಕೋಚ್ ಮೊಹಮ್ಮದ್ ಯೂಸಫ್ ಅವರಿಗೆ ಗೌರವ ಕೊಡದೆ, ಅಸಡ್ಡೆಯಿಂದ ಮಾತನಾಡಿಸಿದ್ದ ಶಾಹೀದ್ ಬಗ್ಗೆ ಪಿಸಿಬಿಯಲ್ಲಿ ದೂರು ನೀಡಲಾಗಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಯುವ ಆಟಗಾರನಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಇದನ್ನೂ ಓದಿ: ತುಂಗಾ-2 ಪೊಲೀಸ್ ಡಿಟೆಕ್ಟಿವ್ ಶ್ವಾನದ ನೆರವಿನಿಂದ ಆರೇ ಗಂಟೆಯಲ್ಲಿ ಪತ್ತೆಯಾದ ಕೊಲೆ ಕೇಸ್
ವರದಿಗಳ ಪ್ರಕಾರ, ಗುರುವಾರ (ಜು.11) ಇಂಗ್ಲೆಂಡ್ ವಿರುದ್ಧದ ಟಿ20 ಟೂರ್ ವೇಳೆ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಶಾಹೀನ್, ಬ್ಯಾಟಿಂಗ್ ಕೋಚ್ ಯೂಸಫ್ ಮಾರ್ಗದರ್ಶನದಲ್ಲಿ ಕಲಿಯಬೇಕಿತ್ತು. ಈ ವಿಚಾರದಲ್ಲಿ ಅವರ ಮಾತನ್ನು ದಿಕ್ಕರಿಸಿದ್ದ ಆಫ್ರಿದಿ, ಕೋಚ್ ಜತೆಗೆ ಕೆಲ ಸಮಯ ವಾಗ್ವಾದ ನಡೆಸಿದ್ದರು. ಬಳಿಕ ಇದು ತನಗೆ ತೊಂದರೆಯಾಗಬಹುದು ಎಂಬ ನಿಟ್ಟಿನಲ್ಲಿ ಕ್ಷಮೆಯಾಚಿಸಿದ್ದರು. ಇದನ್ನೆಲ್ಲಾ ನೆನಪಿನಲ್ಲಿಟ್ಟುಕೊಂಡಿದ್ದ ಯೂಸಫ್, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ಮೊಹ್ಸಿನ್ ನಖ್ವಿ ಬಳಿ ದೂರಿದ್ದರು. ಶಾಹೀನ್ ಆಫ್ರಿದಿ ನಡೆಯನ್ನು ಖಂಡಿಸಿರುವ ಬ್ಯಾಟರ್, ವಿಕೆಟ್‌ಕೀಪರ್ ಆಗಿದ್ದ ಅತೀಕ್-ಉಜ್-ಜಮಾನ್, ನೀನು ಮೊದಲ ದೊಡ್ಡವರಿಗೆ ಗೌರವ ಕೊಡುವುದನ್ನು ಕಲಿತುಕೊಳ್ಳುವುದು ಒಳಿತು ಎಂದಿದ್ದಾರೆ.
ಯೂಸಫ್ ನಮ್ಮ ತಂಡದವರು. ಅವರಿಗೆ ಅವರದ್ದೇ ಆದ ಜವಾಬ್ದಾರಿಗಳು ಇವೆ. ನೆಟ್ಸ್ನಲ್ಲಿ ಆಡುವ ಪ್ರತಿಯೊಬ್ಬರಿಗೂ ಸಲಹೆ ನೀಡುವ ಅಧಿಕಾರ ಅವರಿಗಿದೆ. ಪದೇ ಪದೇ ನೋ ಬಾಲ್ಗಳನ್ನು ಮಾಡುತ್ತ ಕುಳಿತರೆ, ನಿಮಗೆ ಅದೇ ಅಭ್ಯಾಸವಾಗುತ್ತದೆಯೇ ವಿನಃ ನೀವು ಆ ತಪ್ಪನ್ನು ಪಂದ್ಯದಲ್ಲಿಯೂ ಅನುಸರಿಸುತ್ತೀರಾ! ಇದೇ ಕಾರಣಕ್ಕೆ ಯೂಸಫ್ ನೋ ಬಾಲ್ ಮಾಡಬೇಡಿ, ಸರಿಪಡಿಸಿಕೊಳ್ಳಿ ಎಂದಿದ್ದಾರೆ. ಅಷ್ಟಕ್ಕೆ ಹೀಗೆಲ್ಲಾ ನಡೆದುಕೊಳ್ಳುವುದು ಸ್ವಲ್ಪವೂ ಸರಿಯಲ್ಲ. ನಿಮ್ಮ ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು ಮೊದಲು ಎಂದು ಗರಂ ಆಗಿ ಹೇಳಿದ್ದಾರೆ.
ಇದನ್ನೂ ಓದಿ: ಕರಾವಳಿ ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಭಾರೀ ಮಳೆ, ಮಲೆನಾಡಿನಂತಾದ ಸಿಲಿಕಾನ್ ಸಿಟಿ..!
ಕೋಚ್ ಆದ ಯೂಸಫ್ ಅವರು ನೀಡಿರುವ ದೂರಿನಲ್ಲಿ ಶಾಹೀನ್ ಮನಬಂದಂತೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಸತ್ಯಾಸತ್ಯತೆ ಬಗ್ಗೆ ನನಗೆ ಸ್ಪಷ್ಟವಿಲ್ಲ. ಅಸಲಿಗೆ ಆಫ್ರಿದಿ ಮಾತನಾಡಿದ್ದಾನೋ ಇಲ್ಲವೋ ಅದು ಗೊತ್ತಿಲ್ಲ. ಅಕಸ್ಮಾತ್ ಆತ ಬೈದಿದ್ದಾರೆ ಖಂಡಿತ ಇದಕ್ಕೆ ನನ್ನ ಅಕ್ಷೇಪಣೆ ಇದ್ದೇ ಇದೆ. ಗೌರವ ಎಂದರೆ ಏನು? ಅದರ ಅರ್ಥವೇನು? ಎಂಬುದನ್ನು ಮೊದಲು ಕಲಿಯುವುದು ಒಳ್ಳೆಯದು. ನಿನ್ನ ಕೋಚ್ ಹೀಗಿರಬೇಕು ಎಂದು ಬುದ್ಧಿ ಹೇಳಿದ್ರೆ, ಅವರ ಮುಂದೆ ಹೆಚ್ಚು ಮಾತನಾಡದೆ ತಲೆಬಗ್ಗಿಸಿ, ನೆಟ್ಸ್ನಲ್ಲಿ ನೋ ಬಾಲ್ ಮಾಡದಂತೆ ಎಚ್ಚರವಹಿಸಬೇಕು ಎಂದು ಖಾರವಾಗಿ ನುಡಿದಿದ್ದಾರೆ,(ಏಜೆನ್ಸೀಸ್).
ಪಾಕಿಸ್ತಾನದಲ್ಲಿ ಜಸ್ಪ್ರೀತ್ ಬುಮ್ರಾ! ಮಾಜಿ ಕ್ರಿಕೆಟಿಗ ವಾಸೀಮ್ ಅಕ್ರಂ ಹಂಚಿಕೊಂಡ ವಿಡಿಯೋ ಸಿಕ್ಕಾಪಟ್ಟೆ ವೈರಲ್