More

    ಪುಷ್ಪ 2 ಸಿನಿಮಾದ ಐಟಂ ಹಾಡಿಗೆ ಸಮಂತಾ ಬದಲಿಗೆ ಎಂಟ್ರಿ ಕೋಡ್ತಾರೆ ಕನ್ನಡದ ಸ್ಟಾರ್ ಹೀರೋಯಿನ್..

    ಹೈದ್ರಾಬಾದ್​​:  ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಬರ್ಝರಿ ಸಕ್ಸಸ್​ ಕಂಡಿತ್ತು. ಪುಷ್ಪ 2 ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ಒಂದು ವಿಶೇಷ ಹಾಡಿಗೆ ಸಮಂತಾ ಸೊಂಟ ಬಳುಕಿಸಿದ್ದರು.  ಆದರೆ ಪಾರ್ಟ್​​ 2 ನಲ್ಲಿ ಸಮಂತಾ ಬದಲಾಗಿ ಕನ್ನಡದ ಸ್ಟಾರ್​​ ನಟಿಯೊಬ್ಬರು ಎಂಟ್ರೊ ಕೋಡ್ತಾರೆ ಎನ್ನಲಾಗಿದೆ.

    ಪುಷ್ಪ 2 ಸಿನಿಮಾದ ಐಟಂ ಹಾಡಿಗೆ ಸಮಂತಾ ಬದಲಿಗೆ ಎಂಟ್ರಿ ಕೋಡ್ತಾರೆ ಕನ್ನಡದ ಸ್ಟಾರ್ ಹೀರೋಯಿನ್..

    ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪುಷ್ಪ 2 ಈ ಸಿನಿಮಾದ ಮೇಲೆ ಈಗಾಗಲೇ ಭಾರೀ ನಿರೀಕ್ಷೆಗಳಿವೆ. ಈ ಚಿತ್ರ ಹಿಂದಿನ ಬ್ಲಾಕ್ ಬಸ್ಟರ್ ಹಿಟ್ ಪುಷ್ಪಾ ಚಿತ್ರದ ಮುಂದುವರಿದ ಭಾಗವಾಗಿರಲಿದೆ. ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ, ಫಹಾದ್ ಫಾಜಿಲ್, ಸುನೀಲ್ ಮತ್ತು ಅನಸೂಯಾ ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದಿಂದ ಬಿಡುಗಡೆಯಾಗಿರುವ ಬನ್ನಿ ಫಸ್ಟ್ ಲುಕ್ ಪೋಸ್ಟರ್ ಮತ್ತಷ್ಟು ಹೈಪ್ ಹೆಚ್ಚಿಸಿದೆ. ಹಾಗಾಗಿ ಈ ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯವನ್ನು ಬಹಳ ಎಚ್ಚರಿಕೆಯಿಂದ ಪ್ಲಾನ್ ಮಾಡುತ್ತಿದ್ದಾರೆ ನಿರ್ಮಾಪಕರು.ಪುಷ್ಪ 2 ಸಿನಿಮಾದ ಐಟಂ ಹಾಡಿಗೆ ಸಮಂತಾ ಬದಲಿಗೆ ಎಂಟ್ರಿ ಕೋಡ್ತಾರೆ ಕನ್ನಡದ ಸ್ಟಾರ್ ಹೀರೋಯಿನ್..

    ಈ ವರ್ಷದ ಆಗಸ್ಟ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ. ಈ ಕ್ರಮದಲ್ಲಿ ಕೆಲವು ದಿನಗಳಿಂದ ಈ ಸಿನಿಮಾಗೆ ಸಂಬಂಧಿಸಿದ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಳ್ಳಿ ಹಾಕಲಾಗುತ್ತಿದೆ. ಅದರಲ್ಲೂ ಈ ಸಿನಿಮಾದ ಸ್ಪೆಷಲ್ ಸಾಂಗ್ ದಿನೇ ದಿನೇ ಚರ್ಚೆಯಾಗುತ್ತಿದೆ. ಇದೀಗ ಮತ್ತೊಂದು ಇಂಟರೆಸ್ಟಿಂಗ್ ವಿಷಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

    ಪುಷ್ಪ 2 ಸಿನಿಮಾದ ಐಟಂ ಹಾಡಿಗೆ ಸಮಂತಾ ಬದಲಿಗೆ ಎಂಟ್ರಿ ಕೋಡ್ತಾರೆ ಕನ್ನಡದ ಸ್ಟಾರ್ ಹೀರೋಯಿನ್..

    ಸದ್ಯದ ಮಾಹಿತಿ ಪ್ರಕಾರ, ಈ ಸಿನಿಮಾದಲ್ಲಿ ವಿಶೇಷ ಹಾಡು ಇರಲಿದೆಯಂತೆ. ಈ ಹಾಡಿಗೆ ಮತ್ತೊಮ್ಮೆ ಸಮಂತಾ ಅವರನ್ನು ಸಂಪರ್ಕಿಸಲಾಗುತ್ತಿದೆ ಎಂಬ ಮಾತು ಕೇಳಿಬಂದಿದೆ. ಈ ಹಿಂದೆ ಮೊದಲ ಭಾಗದಲ್ಲಿ ಊ ಅಂತಾವಾ ಮಾವ.. ಉಹು ಅಂತಾವಾ.. ಹಾಡಿನಲ್ಲಿ ಸ್ಯಾಮ್ ಸೊಂಟ ಬಳುಕಿಸಿದ್ದರು. ಈಗ ಸ್ಯಾಮ್ ಬದಲಿಗೆ ಯುವ ನಾಯಕಿ ಶ್ರೀಲೀಲಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

    sreeleela

    ಶ್ರೀಲೀಲಾ  ಸತತ ಹಿಟ್ ಚಿತ್ರಗಳನ್ನು ಪಡೆದು ಸ್ಟಾರ್ ಡಮ್ ಗಳಿಸಿರುವ ಈ ಚೆಲುವೆ ಇದೀಗ ಪುಷ್ಪ 2 ಚಿತ್ರಕ್ಕಾಗಿ ಸ್ಪೆಷಲ್ ಸಾಂಗ್ ಮಾಡಲಿದ್ದಾರಂತೆ. ಶ್ರೀಲೀಲಾ ನೃತ್ಯಕ್ಕೆ ಕ್ರೇಜ್ ಇರುವುದು ಗೊತ್ತೇ ಇದೆ.  ಆದರೆ ಈಗ ಪುಷ್ಪ 2 ರಲ್ಲಿನ ಕಾಣಿಸಿಕೊಳ್ಳುತ್ತಾರಾ ಎನ್ನುವ ಬಗ್ಗೆ  ಯಾವುದೇ ಸ್ಪಷ್ಟತೆ  ಇಲ್ಲ.

    ಅಕ್ಕ- ತಂಗಿ ಇಬ್ಬರು ಪ್ರೆಗ್ನೆಂಟ್​; ನಟಿ ಮನೆಯಲ್ಲಿ ಡಬಲ್ ಸಂಭ್ರಮ​

    ಪತ್ನಿ-ಮಗುವಿನ ಕಣ್ಣೇದುರಿಗೆ ನರಳಾಡಿ ಪ್ರಾಣಬಿಟ್ಟ ಪತಿ

    ‘ಸುದೀಪ್‌ ಅವರು ದೇವ್ರಾ? ಕಿಚ್ಚನ ಬಗ್ಗೆ ಮಾತಾಡಿ ಫುಲ್ ಟ್ರೋಲ್..ವಿವಾದ ಬಳಿಕ ಕೈ ಮುಗಿದು ಕ್ಷಮೆ ಕೇಳಿದ ರಕ್ಷಕ್ ಬುಲೆಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts