More

    ಬ್ಯಾಂಕಾಕ್​ಗೆ ಪುಷ್ಪ 2 ತಂಡ; ಮೊದಲ ಶೆಡ್ಯುಲ್​ನಲ್ಲಿ ಆ್ಯಕ್ಷನ್ ಸನ್ನಿವೇಶಗಳ ಚಿತ್ರೀಕರಣ

    ‘ಪುಷ್ಪ ದಿ ರೈಸ್’ ಚಿತ್ರದ ಯಶಸ್ಸಿನ ಬಳಿಕ ‘ಪುಷ್ಪ ದಿ ರೂಲ್’ ಪ್ರಾರಂಭಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಅಂತೂ 11 ತಿಂಗಳ ಬಳಿಕ ‘ಪುಷ್ಪ 2’ ಮೊದಲ ಶೆಡ್ಯುಲ್ ಚಿತ್ರೀಕರಣ ಪ್ರಾರಂಭವಾಗಲಿದೆ. ನ. 14ರಿಂದ ಬ್ಯಾಂಕಾಕ್​ನಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಸದ್ಯ ಅಲ್ಲು ಅರ್ಜುನ್ ಗೆಳೆಯನ ಮದುವೆಯಲ್ಲಿ ಭಾಗವಹಿಸಲು ಕುಟುಂಬ ಸಮೇತ ದಕ್ಷಿಣ ಆಫ್ರಿಕಾದಲ್ಲಿದ್ದಾರೆ. ಅಲ್ಲಿಂದ ವಾಪಸ್ಸಾದ ಬಳಿಕ ನ. 13ರಂದು ಬ್ಯಾಂಕಾಕ್​ಗೆ ತೆರಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಚಿತ್ರತಂಡ ಬ್ಯಾಂಕಾಕ್​ಗೆ ತೆರಳಿದ್ದು, ಚಿತ್ರೀಕರಣಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆಯಂತೆ.

    ಸುಮಾರು 15 ದಿನಗಳ ಕಾಲ ಬ್ಯಾಂಕಾಕ್ ಸುತ್ತಮುತ್ತಲಿನ ಕಾಡುಗಳಲ್ಲಿ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದ್ದು, ಆ ಬಳಿಕ ಚಿತ್ರತಂಡ ಭಾರತಕ್ಕೆ ವಾಪಸ್ಸಾಗಲಿದೆ. ನಂತರ ನಾಯಕ ಅಲ್ಲು ಅರ್ಜುನ್, ರಷಿಯಾದಲ್ಲಿ ಬಿಡುಗಡೆಗೆ ಸಿದ್ದವಾಗಿರುವ ‘ಪುಷ್ಪ’ ಚಿತ್ರದ ಪ್ರಚಾರಕ್ಕೆ ಹೋಗಲಿದ್ದಾರಂತೆ. ಅಲ್ಲಿಂದ ವಾಪಸ್ಸಾದ ಬಳಿಕ ಹೈದರಾಬಾದ್​ನಲ್ಲಿ ನಡೆಯಲಿರುವ ಹೊಸ ಶೆಡ್ಯುಲ್​ಗೆ ನಾಯಕಿ ರಶ್ಮಿಕಾ ಮಂದಣ್ಣ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಇದೆಲ್ಲದರ ನಡುವೆ ಇದೇ ತಿಂಗಳಂತ್ಯಕ್ಕೆ ಚಿತ್ರದ ಪೋಸ್ಟರ್ ಟೀಸರ್ ಬಿಡುಗಡೆ ಮಾಡುವ ಆಲೋಚನೆಯೂ ಇದೆಯಂತೆ. ಆದರೆ ಸದ್ಯಕ್ಕಿನ್ನೂ ಆ ಕುರಿತು ಚಿತ್ರತಂಡ ಅಧಿಕೃತಿ ಮಾಹಿತಿ ನೀಡಿಲ್ಲ.

    2021ರ ಡಿಸೆಂಬರ್ 17ರಂದು ‘ಪುಷ್ಪ’ ಬಿಡುಗಡೆಯಾಗಿತ್ತು. ಈಗ 11 ತಿಂಗಳ ಬಳಿಕ ಚಿತ್ರೀಕರಣ ಪ್ರಾರಂಭಿಸುತ್ತಿದ್ದು, ಮುಂದಿನ ವರ್ಷದಂತ್ಯಕ್ಕೆ ‘ಪುಷ್ಪ ದಿ ರೂಲ್’ ರಿಲೀಸ್ ಮಾಡುವ ಸಾಧ್ಯತೆಯಿದೆ. ಮೊದಲ ಭಾಗಕ್ಕಿಂತ ದೊಡ್ಡ ಮಟ್ಟದಲ್ಲಿ, ಹೆಚ್ಚು ಬಜೆಟ್​ನಲ್ಲಿ ‘ಪುಷ್ಪ 2’ ಬಿಡುಗಡೆಯಾಗಲಿದ್ದು, ಪ್ರಾರಂಭದಿಂದಲೇ ಚಿತ್ರತಂಡ ಮೆಗಾ ಪ್ಲ್ಯಾನ್​ ಮಾಡಿಕೊಂಡಿದೆ. ಅದರಂತೆ ಇದೇ ಡಿ. 16ರಂದು ವಿಶ್ವದಾದ್ಯಂತ ಜೇಮ್ಸ್​​ ಕ್ಯಾಮರಾನ್ ನಿರ್ದೇಶನದ ‘ಅವತಾರ್ 2’ ಬಿಡುಗಡೆಯಾಗಲಿದ್ದು, ಆ ಚಿತ್ರದ ಜತೆಗೆ 25 ಭಾಷೆಗಳಲ್ಲಿ ‘ಪುಷ್ಪ 2’ ಟೀಸರ್​ರಿಲೀಸ್ ಮಾಡಲು ಚಿತ್ರತಂಡ ಯೋಚಿಸಿದೆ ಎನ್ನಲಾಗಿದೆ. –ಏಜೆನ್ಸೀಸ್

    ಸುನೀಲ್​ ಶೆಟ್ಟಿ ಜತೆ ಹಿಂದಿ ವೆಬ್​ ಸೀರಿಸ್​ನಲ್ಲಿ ‘ಗಾಳಿಪಟ’ದ ಭಾವನಾ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts