ಸುನೀಲ್​ ಶೆಟ್ಟಿ ಜತೆ ಹಿಂದಿ ವೆಬ್​ ಸೀರಿಸ್​ನಲ್ಲಿ 'ಗಾಳಿಪಟ'ದ ಭಾವನಾ..

Bhavana F
Published on

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನ ಸೂಪರ್ ಹಿಟ್​ ಸಿನಿಮಾಗಳಲ್ಲೊಂದಾದ 'ಗಾಳಿಪಟ'ದಲ್ಲಿ ಅಭಿನಯಿಸಿ ಗಮನ ಸೆಳೆದಿದ್ದ ನಟಿ ಭಾವನಾ ರಾವ್ ಬಾಲಿವುಡ್​ನ ಖ್ಯಾತ ನಟ ಸುನೀಲ್​ ಶೆಟ್ಟಿ ಜತೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಅರ್ಥಾತ್, ಹಿಂದಿಯಲ್ಲಿ ಬಿಡುಗಡೆಗೆ ಸಜ್ಜಾಗಿರುವ 'ಧಾರಾವಿ ಬ್ಯಾಂಕ್' ವೆಬ್ ಸೀರೀಸ್​ನಲ್ಲಿ ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಜೊತೆ ಭಾವನಾ ರಾವ್ ಅಭಿನಯಿಸಿದ್ದಾರೆ. 'ಇಂದೋರಿ ಇಶ್ಕ್', 'ಹಾಫ್ ಟಿಕೆಟ್' ಸಿನಿಮಾ ಖ್ಯಾತಿಯ ಸಮಿತ್ ಕಕ್ಕಡ್ 'ಧಾರಾವಿ ಬ್ಯಾಂಕ್' ವೆಬ್ ಸೀರೀಸ್ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮುಖ್ಯಪಾತ್ರಗಳಲ್ಲಿ ಸುನೀಲ್ ಶೆಟ್ಟಿ ಹಾಗೂ ವಿವೇಕ್ ಒಬೆರಾಯ್ ನಟಿಸಿದ್ದಾರೆ.

ಹಿಂದಿಯಲ್ಲಿ ಇದು ನನ್ನ ಮೊದಲ ವೆಬ್ ಸೀರೀಸ್. ಇದರಲ್ಲಿ ಸುನೀಲ್ ಶೆಟ್ಟಿ ಮಗಳಾಗಿ ನಟಿಸಿದ್ದು, ಲಾಯರ್ ಪಾತ್ರ ನಿರ್ವಹಿಸಿದ್ದೇನೆ. ಒಟ್ಟು ಹತ್ತು ಸಂಚಿಕೆಗಳಿದ್ದು, ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ. ನ. 19ರಂದು MX ಪ್ಲೇಯರ್​ನಲ್ಲಿ ಈ ವೆಬ್ ಸೀರೀಸ್ ಬಿಡುಗಡೆ ಆಯಾಗಲಿದೆ ಎಂದು ಭಾವನಾ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಭಾವನಾ ರಾವ್ ನಟನೆಯ 'ಹೊಂದಿಸಿ ಬರೆಯಿರಿ', 'ಗ್ರೇ ಗೇಮ್ಸ್' ಬಿಡುಗಡೆಗೆ ರೆಡಿಯಾಗಿದ್ದು, ಇವುಗಳ ಜೊತೆ ಇನ್ನೂ ಮೂರ್ನಾಲ್ಕು ಸಿನಿಮಾಗಳು ಅವರ ಕೈಯಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net