

ಹೈದರಾಬಾದ್ (ತೆಲಂಗಾಣ): ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ 2: ದಿ ರೂಲ್'(Pushpa-2) ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಉತ್ಸುಕರಾಗಿದ್ದಾರೆ. ಇದರ ನಡುವೆ ನಿರ್ಮಾಪಕ ರವಿಶಂಕರ್ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಗ್ಗೆ ಆಸಕ್ತಿದಾಯಕ ಅಪ್ಡೇಟ್ ಹಂಚಿಕೊಂಡಿದ್ದಾರೆ.
'ಪುಷ್ಪಾ 2: ದಿ ರೂಲ್' ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಲಿದೆ. ನಾವು ಮೊದಲು ಡಿಸೆಂಬರ್ 6 ಬಿಡುಗಡೆ ಮಾಡಬೇಕು ಎಂದುಕೊಂಡಿದ್ದವು. ಆದರೆ ಈಗ ನಾವು ಡಿಸೆಂಬರ್ 5 ರಂದು ಅಂದರೆ ಒಂದು ದಿನ ಮೊದಲೇ ಚಿತ್ರಮಂದಿರಗಳಿಗೆ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ನಾವು ಈ ಚಿತ್ರವನ್ನು ಪ್ರಪಂಚದಾದ್ಯಂತ ಸುಮಾರು 11,500 ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ವಿದೇಶಗಳಲ್ಲಿ 5000 ಸ್ಕ್ರೀನ್ಗಳಲ್ಲಿ ಬಿಡುಗಡೆಯಾದರೆ, ಭಾರತದಲ್ಲಿ 6500 ಸ್ಕ್ರೀನ್ಗಳಲ್ಲಿ ಚಿತ್ರವು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ. ಇನ್ನು ಭಾರತೀಯ ಸಿನಿಮಾ ಇಷ್ಟೊಂದು ಸ್ಕ್ರೀನ್ಗಳ ಮೇಲೆ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂದು ಇಂಡಸ್ಟ್ರಿ ಮೂಲಗಳು ಅಭಿಪ್ರಾಯಪಡುತ್ತಿವೆ.
ಇನ್ನು 'ಪುಷ್ಪಾ 2: ದಿ ರೂಲ್' 6 ಭಾಷೆಗಳಲ್ಲಿ ಅಂದರೆ, ತೆಲುಗು, ಕನ್ನಡ ತಮಿಳು, ಮಲಯಾಳಂ, ಹಿಂದಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಥಿಯೇಟರ್ಗಳಲ್ಲಿ ಬರಲು ಸಿದ್ಧವಾಗಿದೆ.