

ಇದನ್ನೂ ಓದಿ: ಮರ್ಡರ್ ಮಿಸ್ಟ್ರಿ ಕಥೆ ಹೇಳ್ತಾರಂತೆ ವಸಿಷ್ಠ ಬಂಟನೂರು!
ಈ ಹಾಡುಗಳನ್ನು ಬಿಡುಗಡೆ ಮಾಡಿದವರು ಶರಣ್. 'ಚಿತ್ರರಂಗಕ್ಕೆ ಬರುವುದಕ್ಕೆ ಮುಂಚೆ ವಾದ್ಯಗೋಷ್ಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದಕಾರಣ ಸಂಗೀತದಿಂದ ನಟನಾದೆ ಎಂದು ಹೇಳಬಹುದು. ನಾನು ೧೦೦ ಚಿತ್ರಗಳ ನಂತರ ನಾಯಕನಾಗಿ ಬಡ್ತಿ ಪಡೆದುಕೊಂಡೆ. ರವಿ ಅವರು ೧೫೦ ಸಿನಿಮಾ ನಂತರ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ನನ್ನ ರೆಕಾರ್ಡ್‌ನ್ನು ಪ್ರಾಮಾಣಿಕವಾಗಿ ಮುರಿದಿದ್ದಾರೆ. ಅವರ ಶಾಲೆಯಲ್ಲಿ ಜಿಮ್ ತರಬೇತಿ ಪಡೆದುಕೊಂಡಿದ್ದೇನೆ. ಶಾಲೆಯಲ್ಲಿ ಅವರು ತುಂಬ ಶಿಸ್ತಿನ ಮಾಸ್ಟರ್. ಇಂದು ಹೌಸ್‌ಫುಲ್ ಆಗಿರುವಂತೆ, ಚಿತ್ರಮಂದಿರವು ತುಂಬಲಿ' ಎಂದು ತಂಡಕ್ಕೆ ಶುಭಹಾರೈಸಿದರು.
'ಪತಿ ಮತ್ತು ಪತ್ನಿ ಇದ್ದರೆ ಅದನ್ನು ಸಂಸಾರ ಎಂದು ಕರೆಯುವುದುಂಟು. ಅಲ್ಲಿ ಮುನಿಸು, ಜಗಳ, ಕೋಪ, ತಾಪ ಎಲ್ಲವು ಇರುತ್ತದೆ. ಇಬ್ಬರ ನಡುವೆ ಒಡಕು ಮೂಡಿದಾಗ ಅದನ್ನು ಸರಿಪಡಿಸಿಕೊಂಡು ಹೋಗುವುದೇ ಜೀವನ ಎಂದು ಚಿತ್ರದಲ್ಲಿ ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಡಬ್ಬಿಂಗ್ ಕೊನೆ ಹಂತಕ್ಕೆ ಬಂದಿದೆ' ಎನ್ನುತ್ತಾರೆ ನಿರ್ದೇಶಕ ಅಮರನಾಥ್.
'ಪ್ರಾರಂಭದಲ್ಲಿ ಫ್ಯಾಮಿಲಿ ಚಿತ್ರವಾಗಿರುವುದರಿಂದ ಹಾಡು ಬೇಡ ಅಂದುಕೊಂಡಿದ್ದೆವು. ಮುಂದೆ ನಾಲ್ಕು ಗೀತೆಗಳು ಹುಟ್ಟಿಕೊಂಡವು. ಗಂಡ ಲೇಟಾಗಿ ಬಂದರೆ, ಪಿಜ್ಜಾ ತರೆದೆ ಇದ್ದಾಗ ಡೈವರ್ಸ್ ಕೊಡುವುದು. ಇಂತಹ ಸಣ್ಣ ಸಣ್ಣ ಕಾರಣಗಳಿಗೆ ಸಂಸಾರ ವಿಕೋಪಕ್ಕೆ ಹೋಗುತ್ತದೆ. ಅದನ್ನೆ ಚಿತ್ರಕತೆಯಲ್ಲಿ ಮಸೇಜ್ ಮೂಲಕ ಹೇಳಲಾಗಿದೆ. ಇದರ ಕುರಿತಂತೆ ಹಾಡನ್ನು ಸೇರಿಸಲಾಗಿದೆ. ಜಿಮ್ ರವಿ ಅಫೀಶಿಯಲ್ ಯೂಟ್ಯೂಬ್‌ದಲ್ಲಿ ಹಾಡುಗಳನ್ನು ನೋಡಬಹುದು' ಎಂದರು.
ನಾಯಕಿ ಅಪೂರ್ವ, ಸಂಗೀತ ಸಂಯೋಜಕ ಶ್ರೀಧರ್ ಸಂಭ್ರಮ್, ಅರಗಣಿ ಸಂಸ್ಥೆಯ ಮಾಲೀಕ ಟಿ.ವೆಂಕಟೇಶ್, 'ಒಗ್ಗರಣೆ ಡಬ್ಬಿ' ಮುರಳಿ, ಕಾರ್ಪೋರೇಟರ್ ಮೋಹನ್‌ಕುಮಾರ್ ಮುಂತಾದವರು ಉಪಸ್ತಿತರಿದ್ದರು.