VIDEO: ಪಂಜಾಬ್ ಪಾಳಯದಲ್ಲಿ ಅನಿಲ್ ಕುಂಬ್ಳೆ ಕನ್ನಡ ಹಾಡು, ಅಭಿಮಾನಿಗಳು ಫುಲ್ ಖುಷ್

anil kumble for web
Published on

ದುಬೈ: 14ನೇ ಆವೃತ್ತಿಯ ಐಪಿಎಲ್ ಭಾಗ-2ಕ್ಕೆ ದಿನಗಣನೆ ಆರಂಭಗೊಂಡಿದೆ. ಈಗಾಗಲೇ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಅಭ್ಯಾಸದ ಬಳಿಕ ಹೋಟೆಲ್‌ನಲ್ಲಿ ಬಿಡುವಿನ ವೇಳೆ ಆಟಗಾರರು ಮನರಂಜನೆಯಲ್ಲಿ ತೊಡಗಿವೆ. ಮಂಗಳವಾರ ಪಂಜಾಬ್ ಕಿಂಗ್ಸ್ ತಂಡದ ಆಟಗಾರರಿಗೆ ಹೋಟೆಲ್‌ನಲ್ಲೇ ಸಂಗೀತ ಕಾರ್ಯಕ್ರಮದ ಏರ್ಪಡಿಸಲಾಗಿತ್ತು. ಈ ವೇಳೆ ತಂಡದ ಮುಖ್ಯಕೋಚ್ ಅನಿಲ್ ಕುಂಬ್ಳೆ ಹಿಂದಿ ಹಾಗೂ ಕನ್ನಡ ಹಾಡು ಹೇಳುವ ಮೂಲಕ ಗಮನಸೆಳೆದರು. ಡಾ.ವಿಷ್ಣುವರ್ಧನ್ ಅಭಿನಯದ ‘ದೇವರ ಗುಡಿ’ ಸಿನಿಮಾದ ಮಾಮರವೆಲ್ಲೊ...ಕೋಗಿಲೆ ಎಲ್ಲೋ ಹಾಡನ್ನು ಹಾಡುವ ಮೂಲಕ ಸಹ ಆಟಗಾರರನ್ನು ರಂಜಿಸಿದ್ದಾರೆ. ಬ್ಯಾಟಿಂಗ್ ಕೋಚ್ ವಾಸೀಂ ಜಾಫರ್ ಜತೆಗೂಡಿ ಹಿಂದಿ ಹಾಡೊಂದನ್ನು ಹೇಳಿದರು...

ಪಂಜಾಬ್ ಕಿಂಗ್ಸ್ ತಂಡದ ಇನ್‌ಸ್ಟಾಗ್ರಾಂ ಪುಟದಲ್ಲಿ ಅನಿಲ್ ಕುಂಬ್ಳೆ ಹಾಡಿರುವ ವಿಡಿಯೋವನ್ನು ಪ್ರಕಟಿಸಲಾಗಿದೆ. ಜಾಫರ್ ಜತೆಗೂಡಿ ಕಿಶೋರ್ ಕುಮಾರ್ ಅವರ ಕಭಿ ಅಲ್ವಿದಾ ನಾ ಕೆನ್ಹಾ ಹಾಡನ್ನು ಹೇಳಿದ್ದಾರೆ. ಅನಿಲ್ ಕುಂಬ್ಳೆ ಅಲ್ಲದೆ, ತಂಡದ ಸಹ ಆಟಗಾರರು ಕೂಡ ಹಾಡನ್ನು ಹೇಳುವ ಮೂಲಕ ಭರ್ಜರಿಯಾಗಿ ರಂಜಿಸಿದರು. ಐಪಿಎಲ್‌ನ ಎರಡನೇ ಭಾಗವಾಗಿ ಪಂಜಾಬ್ ತಂಡ ಸೆ.21 ರಂದು ರಾಜಸ್ಥಾನ ರಾಯಲ್ಸ್ ತಂಡದ ಎದುರು ಅಭಿಯಾನ ಆರಂಭಿಸಲಿದೆ.

ಪಂಜಾಬ್ ತಂಡ ಲೀಗ್‌ನಲ್ಲಿ ಇದುವರೆಗೂ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಪ್ಲೇಆ್ ಹಂತಕ್ಕೇರಲು ಮುಂದಿನ 6 ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net