ಕರೊನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಆರ್‌ಸಿಬಿ ಸಿದ್ಧತೆ ಹೇಗಿದೆ ಗೊತ್ತೇ?

rcb team for web
Published on

ನವದೆಹಲಿ: ಆರ್‌ಸಿಬಿ ತಂಡದ ಆಟಗಾರರು ಸೋಮವಾರ (ಸೆ.20) ನಡೆಯಲಿರುವ ಕೆಕೆಆರ್ ಎದುರಿನ ಪಂದ್ಯದಲ್ಲಿ ತಿಳಿ ನೀಲಿ ಬಣ್ಣದ ಜೆರ್ಸಿ ಧರಿಸಲಿದ್ದಾರೆ. ಆರ್‌ಸಿಬಿ ತಂಡದ ಆಟಗಾರರು ಪ್ರತಿವರ್ಷ ‘ಗೋ ಗ್ರೀನ್’ ಅಭಿಯಾನದಡಿ ಪಂದ್ಯವೊಂದರಲ್ಲಿ ಹಸಿರು ಜೆರ್ಸಿ ತೊಟ್ಟು ಆಡುತ್ತಿದ್ದರು. ಈ ವರ್ಷ ಕೋವಿಡ್ ವಾರಿಯರ್ಸ್‌ಗೆ ಗೌರವ ಸಲ್ಲಿಸುವ ಸಲುವಾಗಿ ನೀಲಿ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. ಮಂಗಳವಾರ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಯಿತು.

ನಾಯಕ ವಿರಾಟ್ ಕೊಹ್ಲಿ ಸಲಹೆಯಂತೆ ಫ್ರಾಂಚೈಸಿ ಈ ಬಣ್ಣವನ್ನು ಆಯ್ದುಕೊಂಡಿದೆ. ಕೋವಿಡ್ ವಾರಿಯರ್ಸ್‌ ತೊಡುವ ಪಿಪಿಇ ಕಿಟ್ ಬಣ್ಣಕ್ಕೆ ಹೋಲುವ ತಿಳಿ ನೀಲಿ ಬಣ್ಣದ ಜೆರ್ಸಿ ತೊಟ್ಟು ಆಡಲಿದ್ದಾರೆ. ಗೀವ್ ಇಂಡಿಯಾ ಫೌಂಡೇಷನ್ ಜತೆಗೆ ಕೈಜೋಡಿಸಿರುವ ಆರ್‌ಸಿಬಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ 100 ಆಕ್ಸಿಜನ್ ಘಟಕಗಳ ಸ್ಥಾಪನೆಗೆ ನೆರವು ನೀಡಿದೆ. ಭಾರತೀಯ ವೈದ್ಯಕೀಯ ಕ್ಷೇತ್ರಕ್ಕೆ ಸುಮಾರು 75 ಕೋಟಿ ರೂ. ವ್ಯಯಿಸಲು ಆರ್‌ಸಿಬಿಯ ಡಿಯಾಗೊ ಇಂಡಿಯಾ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net