IPL 2023 | ಚೆನ್ನೈ ಎದುರು ಗೆಲುವಿನ ನಗೆ ಬೀರಿದ ಪಂಜಾಬ್​

CSK vs PBKS
Published on

ಚೆನ್ನೈ: ಆರಂಭಿಕ ಪ್ರಭ್​ಸಿಮ್ರಾನ್​ ಸಿಂಗ್​, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ ಲಿಯಾಮ್ ಲಿವಿಂಗ್​ಸ್ಟನ್​ ಉಪಯುಕ್ತ ಆಟದ ಫಲವಾಗಿ ಪಂಜಾಬ್​ ಕಿಂಗ್ಸ್​ 4 ವಿಕೆಟ್​ಗಳ ಜಯ ಸಾಧಿಸಿದೆ.

ಚೆನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್​ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 200 ರನ್​ ಗಳಿಸಿತ್ತು.

ಅಬ್ಬರಿಸಿದ ಕಾನ್​ವೇ

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಚೆನ್ನೈ ತಂಡವು ಆರಂಭಿಕರಾದ ಡೆವೊನ್​ ಕಾನ್​ವೇ(92 ರನ್​, 52 ಎಸೆತ, 16 ಬೌಂಡರಿ, 1 ಸಿಕ್ಸರ್​), ಋತುರಾಜ್​ ಗಾಯಕ್ವಾಡ್​(37 ರನ್​, 31 ಎಸೆತ, 4 ಬೌಂಡರಿ, 1 ಸಿಕ್ಸರ್​) ಸ್ಪೋಟಕ ಆರಂಭಿಕ ಜೊತೆಯಾಟದ ಫಲವಾಗಿ 4 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 200 ರನ್​ ಗಳಿಸಿತ್ತು.

ಪಂಜಾಬ್​ ಪರ ಅರ್ಷ್​ದೀಪ್​ ಸಿಂಗ್​(4-0-37-1), ಸ್ಯಾಮ್​ ಕರ್ರನ್​(4-0-46-1), ರಾಹುಲ್​ ಚಹರ್​(4-0-35-1), ಸಿಕಂದರ್​ ರಾಜಾ(3-0-31-1), ಕಗಿಸೋ ರಬಾಡ(4-0-34-0), ಲಿಯಾಮ್​ ಲಿವಿಂಗ್​ಸ್ಟನ್​(1-0-16-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ದಿಟ್ಟ ಚೇಸಿಂಗ್

ಗುರಿ ಬೆನ್ನತ್ತಿದ್ದ ಪಂಜಾಬ್​ ಕಿಂಗ್ಸ್​ ತಂಡವು ಆರಂಭಿಕ ಪ್ರಭ್​ಸಿಮ್ರಾನ್​ ಸಿಂಗ್(40 ರನ್​, 24 ಎಸೆತ, 4 ಬೌಂಡರಿ, 2 ಸಿಕ್ಸರ್​)​, ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ ಲಿಯಾಮ್ ಲಿವಿಂಗ್​ಸ್ಟನ್(40 ರನ್​, 24 ಎಸೆತ, 1 ಬೌಂಡರಿ, 4 ಸಿಕ್ಸರ್​), ಜಿತೇಶ್​ ಶರ್ಮಾ(21ರನ್​, 10 ಎಸೆತ, 2 ಬೌಂಡರಿ, 1 ಸಿಕ್ಸರ್​) ದಿಟ್ಟ ಚೇಸಿಂಗ್​ ಫಲವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 201 ರನ್​ ಗಳಿಸಿ ಗೆಲುವಿನ ನಗೆ ಬೀರಿದೆ.

ಚೆನ್ನೈ ಪರ ತುಷಾರ್​ ದೇಶಪಾಂಡೆ(4-0-49-3), ರವೀಂದ್ರ ಜಡೇಜಾ(4-0-32-2), ಮತೀಷ ಪತಿರಾಣಾ(4-0-32-1), ಮಹೀಶ್​ ತೀಕ್ಷ್ಣ(4-0-36-0), ಆಕಾಶ್​ ಸಿಂಗ್(3-0-35-0), ಮೊಯಿನ್​ ಅಲಿ(1-0-10-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net