More

    ಐಪಿಎಸ್ ಅಧಿಕಾರಿಯನ್ನು ಮದುವೆಯಾದ ಶಿಕ್ಷಣ ಸಚಿವ!

    ಪಂಜಾಬ್: ಆಪ್​ ಶಾಸಕ ಹಾಗೂ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್, ಈ ತಿಂಗಳ ಕೊನೆಯಲ್ಲಿ ಐಪಿಎಸ್ ಅಧಿಕಾರಿ ಜ್ಯೋತಿ ಯಾದವ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ದಂಪತಿಗಳು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿರುವ ಬೈನ್ಸ್ ಅವರು ಪ್ರಸ್ತುತ ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.

    ಪಂಜಾಬ್ ಅಸೆಂಬ್ಲಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವನ್ ಅವರು “ಮುಂಬರುವ ದಿನಗಳಲ್ಲಿ ತಮ್ಮ ಜೀವನದ ಹೊಸ ಪ್ರಯಾಣವನ್ನು ಪ್ರಾರಂಭಿಸಲಿರುವ” ಬೈನ್ಸ್ ಮತ್ತು ಯಾದವ್ ಅವರನ್ನು ಅಭಿನಂದಿಸಿದ್ದಾರೆ.

    ಇದನ್ನೂ ಓದಿ: ಅನ್ಯಾಯ ಸರಿಪಡಿಸಲು ಅವಕಾಶ: ಬಿಜೆಪಿ ಸೇರಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೆ

    ವೃತ್ತಿಯಲ್ಲಿ ವಕೀಲರಾಗಿರುವ 32 ವರ್ಷದ ಹರ್ಜೋತ್ ಬೈನ್ಸ್, ಆನಂದಪುರ ಸಾಹಿಬ್‌ನ ಗಂಭೀರ್‌ಪುರ ಗ್ರಾಮದವರು. 2017ರ ಚುನಾವಣೆಯಲ್ಲಿ ಸಾಹ್ನೇವಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅದಷ್ಟೇ ಅಲ್ಲದೇ ಈ ಹಿಂದೆ ಬೈನ್ಸ್ ಈ ಹಿಂದೆ ರಾಜ್ಯದಲ್ಲಿ ಎಎಪಿಯ ಯುವ ಘಟಕವನ್ನು ಮುನ್ನಡೆಸಿದ್ದರು.

    ಅವರು 2014ರಲ್ಲಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದಿಂದ ತಮ್ಮ BA LLB (ಹಾನರ್ಸ್) ಪೂರ್ಣಗೊಳಿಸಿದರು. ಅವರು 2018 ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನಲ್ಲಿ ಪ್ರಮಾಣಪತ್ರವನ್ನು ಗಳಿಸಿದರು.

    ಐಪಿಎಸ್​ ಅಧಿಕಾರಿ ಜ್ಯೋತಿ ಯಾದವ್, ಪಂಜಾಬ್-ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಮಾನ್ಸಾ ಜಿಲ್ಲೆಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ.

    ಇದನ್ನೂ ಓದಿ: ಬೀದಿಗೆ ಬಂದ ಲೇಡಿ ಐಪಿಎಸ್-ಐಎಎಸ್ ಜಗಳ: ರೋಹಿಣಿ ಸಿಂಧೂರಿ-ಡಿ.ರೂಪಾ ವಾಕ್ಸಮರ; ಇಲ್ಲಿದೆ ಪೂರ್ತಿ ವಿವರ

    ಹರಿಯಾಣದ ಗುರುಗ್ರಾಮ್‌ನಿಂದ ಬಂದ ಜ್ಯೋತಿ ಯಾದವ್, ಕಳೆದ ವರ್ಷ ಆಪ್​ ಶಾಸಕ ರಾಜಿಂದರ್‌ಪಾಲ್ ಕೌರ್ ಅವರೊಂದಿಗೆ ಮಾಡಿದ್ದ ಸಾರ್ವಜನಿಕ ವಾಗ್ವಾದದ ನಂತರ ಜನರ ಗಮನಕ್ಕೆ ಬಿದ್ದಿದ್ದರು. ಐಪಿಎಸ್ ಅಧಿಕಾರಿಯು ತನಗೆ ಮಾಹಿತಿ ನೀಡದೆ ತನ್ನ ವಿಧಾನಸಭಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಆಪ್​ ಶಾಸಕ ರಾಜಿಂದರ್‌ಪಾಲ್ ಕೌರ್ ಆರೋಪಿಸಿದ್ದರು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts