More

    ಇದು ಬಿಳಿ ಜಿಂಕೆ ಮರಿ ನಾ? ಅರಣ್ಯ ಅಧಿಕಾರಿಯ ಪೋಸ್ಟ್​ ಫುಲ್​ ವೈರಲ್!

    ನವದೆಹಲಿ: ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್, ಮಚ್ಚೆಯುಳ್ಳ ಬಿಳಿ ಜಿಂಕೆಯ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಅಲ್ಬೈನೋ ಜಿಂಕೆ ಸೋಮವಾರ ಬೆಳಗ್ಗೆ ಕಾಣಿಸಿಕೊಂಡಿದೆ. ಈ ಅಪರೂಪದ ಬಿಳಿ ಜಿಂಕೆ ಮರಿಯ ಛಾಯಾಚಿತ್ರ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅಂದ ಹಾಗೆ ಅಲ್ಬೈನೋ ಎಂದರೆ ಬಿಳಿ ಚರ್ಮ, ಹೊಂದಿರುವುದಕ್ಕೆ ಕರೆಯುತ್ತಾರೆ. ಇದು ಅಪರೂಪದ ಸ್ಥಿತಿಯಾಗಿದ್ದು ಇದು ಆಫ್ರಿಕನ್ನರಲ್ಲೂ ಕಂಡುಬರುತ್ತದೆ.

    ಬಿಳಿ ಜಿಂಕೆ ತನ್ನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುವ ಬಗ್ಗೆ ಕಸ್ವಾನ್ ಗಮನಿಸಿದ್ದಾರೆ. “ಪ್ರಕೃತಿಯಲ್ಲಿ ವಿನಾಯಿತಿಗಳಿಲ್ಲ. ಅದು ಹೊಂದಿಕೊಳ್ಳುವುದು ಕಷ್ಟ”ಎಂದು ಅವರು ಟ್ವೀಟ್ ಮಾಡಿದ್ದಾರೆ. 15 ವರ್ಷಗಳ ಹಿಂದೆ ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಕಾಣಿಸಿಕೊಂಡ ಇಂತಹ ಜಿಂಕೆಯನ್ನು ಐಎಫ್‌ಎಸ್ ಅಧಿಕಾರಿ ಸುಸಂತ ನಂದಾ ನೆನಪಿಸಿಕೊಂಡಿದ್ದಾರೆ. “ಚಿನ್ನದ ಜಿಂಕೆ ರಾಮಾಯಣದ ಭಾಗವಾಗಿತ್ತು. @aakashbadhawan ಅವರು ಹಂಚಿಕೊಂಡ ಬೆಳ್ಳಿ ಜಿಂಕೆ ಇಲ್ಲಿದೆ. 15 ವರ್ಷಗಳ ಹಿಂದೆ ಅಂಗುಲ್ ಜಿಲ್ಲೆಯ ಲಬಂಗಿ ಅತಿಥಿ ಗೃಹದಲ್ಲಿ ಒಂದನ್ನು ನೋಡಿದ್ದೆ” ಎಂದು ನಂದಾ ಬರೆದಿದ್ದಾರೆ.

    ಕೆಲವು ಬಳಕೆದಾರರು ಅದನ್ನು ನೋಡಿ ಆಶ್ಚರ್ಯಚಕಿತರಾಗಿದ್ದರೆ, ಇತರರು ಕ್ರೂರ ಪ್ರಾಣಿಗಳ ಕಣ್ಣಿಗೆ ಸುಲಭವಾಗಿ ಬೀಳುವುದರಿಂದ ಅದು ಎದುರಿಸಬಹುದಾದ ತೊಂದರೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ, “”ಬಹಳ ಅಪರೂಪ” ಎಂದು ಬರೆದಿದ್ದರೆ ಇನ್ನೊಬ್ಬರು ‘ಅದ್ಭುತ’ ಎಂದು ಬರೆದಿದ್ದಾರೆ.

    ಅಲ್ಬೈನೋ ಪ್ರಾಣಿಗಳಲ್ಲಿ ಮೆಲನಿನ್​ ಎನ್ನುವ ಚರ್ಮಕ್ಕೆ ಬಣ್ಣ ನೀಡುವ ಪದಾರ್ಥವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಇರುವುದಿಲ್ಲ. ಸಾಮಾನ್ಯವಾಗಿ ಅವು ಮೆಲನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಎರಡೂ ಪೋಷಕರಿಂದ ರೂಪಾಂತರಗೊಂಡ ಜೀನ್‌ಗಳನ್ನು ಪಡೆದುಕೊಳ್ಳುತ್ತವೆ.fe

    ಮೆಲನಿನ್ ವರ್ಣದ್ರವ್ಯವು ಚರ್ಮ, ತುಪ್ಪಳ ಮತ್ತು ಕಣ್ಣುಗಳ ಬಣ್ಣವನ್ನು ನಿರ್ಧರಿಸುತ್ತದೆ. ಅಲ್ಬೈನೋ ಪ್ರಾಣಿಗಳು ಪರಭಕ್ಷಕಗಳ ಸುಲಭ ಬೇಟೆಗೆ ಬೀಳುತ್ತವೆ. ಹೀಗಾಗಿ ಇವು ಕಾಣಿಸಿಕೊಳ್ಳುವುದು ಭಾರಿ ಅಪರೂಪ. ಹುಲ್ಲಿನ ನಡುವೆ ಅಥವಾ ಇತರ ಕಾಡಿನ ವಾತಾವರಣದಲ್ಲಿ ಮರೆಯಾಗುವ ಸಾಮರ್ಥ್ಯದ ಕೊರತೆಯಿಂದಾಗಿ ಅವು ಬದುಕುವುದು ಕಷ್ಟಕರವಾಗಿದೆ ಎಂದು ನ್ಯಾಟ್ ಜಿಯೋ, ತನ್ನ ವರದಿಯಲ್ಲಿ ಹೇಳಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts