More

    ಲಿಂಗ ದೀಕ್ಷೆ ಪಡೆದ ರಷ್ಯನ್​ ದಂಪತಿ! ಅವರಿಬ್ಬರ ಹೊಸ ಹೆಸರು ಹೀಗಿವೆ…

    ಬೆಂಗಳೂರು: ಭಾರತೀಯ ಪರಂಪರೆಗೆ ಮನ ಸೋಲುವ ಅನೇಕ ವಿದೇಶಿಗರನ್ನು ನಾವು ಕಂಡಿರುತ್ತೇವೆ. ಅವರಲ್ಲಿ ಕೆಲವೇ ಕೆಲವರು ಹಿಂದೂ ಧರ್ಮಕ್ಕೆ ಮತಾಂತರ ಆಗುವವರು ಅಪರೂಪ. ಅದರಲ್ಲೂ ‘ನಾನು ಇಂತಹದ್ದೇ ಪಂಥದ ಅನುಯಾಯಿ ಆಗಬೇಕು’ ಎಂದು ಬಂದು ದೀಕ್ಷೆ ಪಡೆಯುವುದು ಇನ್ನೂ ಅಪರೂಪ. ಇಂತಹ ಅಪರೂಪದಲ್ಲಿ ಅಪರೂಪದ ಘಟನೆ ನಿನ್ನೆ ನಡೆದಿದ್ದು ರಷ್ಯನ್ ದಂಪತಿ ಜಗದ್ಗುರುಗಳಿಂದ ದೀಕ್ಷೆ ಪಡೆದಿದ್ದಾರೆ.

    ಇದನ್ನೂ ಓದಿ: ಬಸವಕಲ್ಯಾಣದಲ್ಲಿ ಲಿಂಗಾಯತ ಮಹಾ ಅಧಿವೇಶನ 

    ರಷ್ಯನ್ ದಂಪತಿ
    ರಷ್ಯನ್ ದಂಪತಿ

    ರಷ್ಯಾದ ಮಾಸ್ಕೋದಲ್ಲಿ ನೆಲೆಸಿರುವ ದಿಮಾ ಮತ್ತು ಸ್ವೆಟಾ ದಂಪತಿ 2023ರ ಮಾ.10ರಂದು ಕಾಶಿ ಜಂಗಮವಾಡಿ ಮಠಕ್ಕೆ ಆಗಮಿಸಿ ಶ್ರೀ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಂದ ಇಷ್ಟಲಿಂಗ ದೀಕ್ಷೆ ಹಾಗೂ ಮಂತ್ರ ದೀಕ್ಷೆ ಸ್ವೀಕರಿಸಿದರು. ರಷ್ಯಾ ನಿವಾಸಿ ದಿನೇಶ್ ಅವರ ಮಾರ್ಗದರ್ಶನದ ಮೇರೆಗೆ ಇಬ್ಬರೂ ಇಲ್ಲಿಗೆ ಆಗಮಿಸಿದ್ದಾರೆ.

    ಇದನ್ನೂ ಓದಿ: ವೀರಶೈವ ಧರ್ಮ ಇದು ವಿಶ್ವಧರ್ಮ. ಮಾನವ ಕಲ್ಯಾಣವನ್ನು ಬಯಸಿದ ಮಾನವ ಧರ್ಮ- ಚನ್ನವೀರಶ್ರೀ 

    ರಷ್ಯನ್ ದಂಪತಿ ಲಿಂಗದೀಕ್ಷೆ ಪಡೆಯುತ್ತಿರುವುದು
    ರಷ್ಯನ್ ದಂಪತಿ ಲಿಂಗದೀಕ್ಷೆ ಪಡೆಯುತ್ತಿರುವುದು

    ಮಹಾಸ್ವಾಮೀಜಿ, ಇಬ್ಬರಿಗೂ ವಿಧಿವತ್ತಾಗಿ ದೀಕ್ಷೆ ನೀಡಿದ್ದು ಅವರ ನಿರೀಕ್ಷೆಯಂತೆ ಶ್ರೀ ದಿಮಿಗೆ ಧರ್ಮೇಶ ಮತ್ತು ಸ್ವೆಟಾಗೆ ಸವಿತಾ ಎಂದು ಮರುನಾಮಕರಣ ಮಾಡಿದ್ದಾರೆ. ಈ ಜನರು 4 ದಿನಗಳ ಕಾಲ ಕಾಶಿಯಲ್ಲಿ ತಂಗಿದ್ದು ತಮ್ಮ ಆರಾಧನಾ ವಿಧಾನ ಹಾಗೂ ಶಿವಯೋಗ ವಿಧಾನಕ್ಕಾಗಿ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts