More

    ಚೀನಾದ ಜನ ಪ್ರಧಾನಿ ಮೋದಿಗೆ ಇಟ್ಟ ನಿಕ್​ನೇಮ್ ಏನು ಗೊತ್ತಾ?!

    ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಸಂಬಂಧ ಅನೇಕ ವರ್ಷಗಳಿಂದ ಹದಗೆಡುತ್ತಾ ಬಂದಿದೆ. 2020ರಿಂದ ನಡೆಯುತ್ತಿರುವ LAC ವಿವಾದ, ಅಮೆರಿಕದ ಜೊತೆಗಿನ ಭಾರತದ ಗಾಢವಾದ ಸ್ನೇಹ ಮತ್ತು ಬೆಳೆಯುತ್ತಿರುವ ಜಾಗತಿಕ ಪ್ರಭಾವದೊಂದಿಗೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​ಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಆಡಳಿತ ಶೈಲಿ ಸಾಕಷ್ಟು ಸಮಸ್ಯೆಗಳನ್ನು ತಂದಿಟ್ಟಿದೆ.

    ಆದರೆ ಚೀನಾ ಸರ್ಕಾರಕ್ಕಿಂತ ಭಿನ್ನವಾಗಿ, ಅಲ್ಲಿನ ಜನರು ಪ್ರಧಾನಿ ಮೋದಿ ಮತ್ತು ಭಾರತದ ಬಗ್ಗೆ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದಾರೆ. ಚೀನಾದ ಪತ್ರಕರ್ತ ಮು ಸನ್ಶನ್ ‘ದಿ ಡಿಪ್ಲೊಮ್ಯಾಟ್’ ನಲ್ಲಿ ಲೇಖನ ಪ್ರಕಟಿಸಿದಾಗ ಈ ಎಲ್ಲಾ ವಿಷಯಗಳು ಬೆಳಕಿಗೆ ಬಂದಿವೆ. ಭಾರತದ ಬಗ್ಗೆ ಚೀನಾದ ಜನರ ಅಭಿಪ್ರಾಯವೇನು ಮತ್ತು ಅಲ್ಲಿನ ಜನರು ಪ್ರಧಾನಿ ಮೋದಿಯವರನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಮು ಸನ್ಶನ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಅಂದಹಾಗೆ ಚೀನಾದಲ್ಲಿ ಪ್ರಧಾನಿ ಮೋದಿಗೆ ಲಾವೊಷಿಯಾನ್ ಎಂದು ಕರೆಯುತ್ತಾರೆ.

    ಪ್ರಧಾನಿ ಮೋದಿಯ ಚೈನೀಸ್ ನಿಕ್​ನೇಮ್ ಅರ್ಥವೇನು?

    ಚೀನಾದ ಪತ್ರಕರ್ತ ಮು ಸನ್ಶನ್ ಅವರು ‘ದಿ ಡಿಪ್ಲೋಮ್ಯಾಟ್’ ನಲ್ಲಿ ತಮ್ಮ ಲೇಖನದಲ್ಲಿ ”ನರೇಂದ್ರ ಮೋದಿ ಅವರು ಚೀನಾದ ಜನರಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅಲ್ಲಿನ ಜನರು ಅವರ ಬಗ್ಗೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಚೀನಾದ ಜನರು ಪ್ರಧಾನಿ ಮೋದಿಗೆ ಅಡ್ಡಹೆಸರುಗಳನ್ನು ಸಹ ಇಟ್ಟಿದ್ದಾರೆ’ ಎಂದು ಬರೆದಿದ್ದಾರೆ. ಚು ಸನ್ಶನ್ ಪ್ರಕಾರ, ಚೀನಾದ ಜನರಲ್ಲಿ ಮೋದಿ ಹೆಸರು ‘ಲಾವೋಷಿಯನ್’ ಆಗಿ ಮಾರ್ಪಟ್ಟಿದೆ. ಚೀನೀ ಭಾಷೆಯಲ್ಲಿ, ‘ಲಾವೊಷಿಯಾನ್’ ಎಂದರೆ ಕೆಲವು ಅಸಾಧಾರಣ ಶಕ್ತಿಗಳಿರುವ ತನ್ನ ಸಂಸ್ಕೃತಿಗೆ ಬದ್ಧನಾಗಿರುವ ವಯಸ್ಸಾದ ಅನುಭವಿ ವ್ಯಕ್ತಿ ಎಂದು. ಈ ಅಡ್ಡಹೆಸರಿನ ಅರ್ಥ ತಿಳಿದರೆ, ನರೇಂದ್ರ ಮೋದಿಯವರ ಬಗ್ಗೆ ಅಲ್ಲಿನ ಜನರು ಏನು ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ನೀವು ನಿರ್ಣಯಿಸಬಹುದು.

    ‘ದಿ ಡಿಪ್ಲೊಮ್ಯಾಟ್’ ನಲ್ಲಿ, ಚೀನಾದ ಪತ್ರಕರ್ತ ಮು ಚುನ್ಶನ್ ಅವರು ಚೀನಾದ ಸಾಮಾಜಿಕ ಮಾಧ್ಯಮಕ್ಕೆ ಲಿಂಕ್ ಆಗಿರುವ ಬಗ್ಗೆ ಬರೆದಿದ್ದು ಚೀನೀ ಜನರು ಈ ವೇದಿಕೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಭಾರತ ಮತ್ತು ಚೀನಾ ನಡುವಿನ ಸಂಬಂಧವು ಉತ್ತಮವಾಗಿರುತ್ತದೆ ಎಂದು ಚೀನಾದ ಜನರು ನಂಬುತ್ತಾರೆ. ಆದರೆ ಭಾರತವು ಅಮೆರಿಕಗೆ ಹತ್ತಿರವಾಗುವುದನ್ನು ಅವರು ಬಯಸುವುದಿಲ್ಲ ಎಂದು ಚು ಸನ್ಶನ್ ಬರೆದಿದ್ದಾರೆ.

    ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದರೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಈಗ ಚೀನಾವನ್ನು ಹತ್ತಿಕ್ಕಲು ಬಯಸುತ್ತಿರುವಂತೆ ಅದನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತವೆ ಎಂದು ಚೀನಿಯರು ನಂಬುತ್ತಾರೆ ಎಂಬ ವಿಚಾಎ ಈ ಲೇಖನದಲ್ಲಿ ಹೇಳಲ್ಪಟ್ಟಿದೆ. ‘ದಿ ಡಿಪ್ಲೊಮ್ಯಾಟ್’ನಲ್ಲಿನ ಲೇಖನದ ಪ್ರಕಾರ, ಚೀನಾ, ಭಾರತ ಮತ್ತು ರಷ್ಯಾ ನಡುವಿನ ಸಹಕಾರವನ್ನು ಬಲಪಡಿಸುವುದು ಪಶ್ಚಿಮದಿಂದ ಒತ್ತಡಕ್ಕೆ ಕಾರಣವಾಗಬಹುದು ಎಂದು ಚೀನಾದ ಜನರು ನಂಬುತ್ತಾರೆ. ಅವರ ಪ್ರಕಾರ ಭಾರತವೂ ಪಶ್ಚಿಮವನ್ನು ಸಂಪೂರ್ಣವಾಗಿ ನಂಬುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts