Divorce case: ಅಶ್ಲೀಲ ವೀಡಿಯೋಗಳ ಚಟಕ್ಕೆ ಬಿದ್ದ ಹೆಂಡತಿ..ಆಕೆ ಲೈಂಗಿಕ ಒತ್ತಾಸೆಗೆ ಬೇಸತ್ತ ಪತಿ! ಹೈಕೋರ್ಟ್​ ತೀರ್ಪು ಏನಾಯ್ತು ಗೊತ್ತಾ?

high court
Published on

ಚಂಡೀಗಢ: ಅಶ್ಲೀಲ ವೀಡಿಯೋಗಳ ಚಟಕ್ಕೆ ಬಿದ್ದ ಹೆಂಡತಿ ಅದರಂತೆಯೇ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದು, ಅದು ಅಸಾಧ್ಯವೆನಿಸಿ ಪತಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಛೇದನದ ತೀರ್ಪಿನ(Divorce case) ವಿರುದ್ಧ ಪತ್ನಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್​ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.

ಹರಿಯಾಣದ ಜೋಡಿ 2017 ರಲ್ಲಿ ವಿವಾಹವಾಗಿದ್ದರು. ಆರಂಭದಲ್ಲಿ ಇವರಿಬ್ಬರ ಸಂಬಂಧ ಚೆನ್ನಾಗಿತ್ತು, ಆದರೆ ನಂತರದಲ್ಲಿ ಪತಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನ ಅರ್ಜಿಯಲ್ಲಿ, ಪತ್ನಿ ಮೊಬೈಲ್ ಗೇಮ್ಸ್ ಮತ್ತು ಪೋರ್ನ್ ವಿಡಿಯೋಗಳಿಗೆ ಸಂಪೂರ್ಣವಾಗಿ ವ್ಯಸನಿಯಾಗಿದ್ದಾಳೆ. ರಾತ್ರಿ ವೇಳೆ ಅಸಾಧ್ಯವಾದ ರೀತಿಯಲ್ಲಿ ಲೈಂಗಿಕ ಕ್ರಿಯೆ ನಡೆಸುವಂತೆ ಕಿರುಕುಳ ನೀಡುತ್ತಾಳೆ ಎಂದು ವಿವರಿಸಿದ್ದ. ಹೀಗಾಗಿ ತನಗೆ ಪತ್ನಿಯಿಂದ ವಿಚ್ಛೇದನ ನೀಡಬೇಕು ಎಂದು ಕೋರಿಕೊಂಡಿದ್ದ.

ಪತಿಯ ಮನವಿ ಪರಿಗಣಿಸಿ ಕೌಟುಂಬಿಕ ನ್ಯಾಯಾಲಯ ಈ ವರ್ಷ ಜುಲೈನಲ್ಲಿ ಇಬ್ಬರಿಗೂ ವಿಚ್ಛೇದನ ನೀಡಿತ್ತು. ಆದರೆ ತೀರ್ಪನ್ನು ಪತ್ನಿ ಪಂಜಾಬ್ ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಸುಧೀರ್ ಸಿಂಗ್ ಮತ್ತು ನ್ಯಾಯಮೂರ್ತಿ ಜಸ್ಜಿತ್ ಸಿಂಗ್ ಬೇಡಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ ಇಬ್ಬರಿಗೂ ವಿಚ್ಛೇದನ ನೀಡುವುದು ಸರಿ ಎಂದು ತೀರ್ಪು ನೀಡಿತು. ಈ ವಿಚ್ಛೇದನ ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net