ಕೊಪ್ಪಳ: ಅಪ್ಪು ನಿಧನರಾದ ಬಳಿಕ ಅವರ ಮೇಲೆ ಅಭಿಮಾನಿಗಳಿಗೆ ಇದ್ದ ಗೌರವ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅಪ್ಪು ಅವರು ಮಾಡಿದ ಸಾಮಾಜಿಕ ಕೆಲಸಗಳಿಂದ ಅವರಿಗೆ ಹಲವರು ದೇವರ ಸ್ಥಾನವನ್ನೇ ನೀಡಿದ್ದಾರೆ. ಕೇವಲ ಬೀದಿಗಳಲ್ಲಿ, ಥಿಯೇಟರ್ಗಳಲ್ಲಿ, ದೇವಸ್ಥಾನಗಳಲ್ಲಿ, ಅಲ್ಲದೇ ಮನೆಯಲ್ಲಿಯೂ ದೇವರ ಫೋಟೋ ಜೊತೆಗೆ ಪುನೀತ್ ಅವರ ಫೋಟೋ ಇಟ್ಟು ಪೂಜೆ ಮಾಡಿತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹೌದು, ಊರುಗಳ ಜಾತ್ರೆಗಳಲ್ಲಿ, ದೇವರ ಉತ್ಸವಗಳಲ್ಲೂ ದೇವರಿಗಿಂತ ಹೆಚ್ಚು ಅಪ್ಪು ಅವರ ಫೋಟೋಗಳು ರಾರಾಜಿಸುತ್ತವೆ.