ದೆಹಲಿ ಮೆಟ್ರೋದಲ್ಲಿ ಸೀಟಿಗಾಗಿ ಬಡಿದಾಡಿಕೊಂಡ ಪುರುಷರು; ವಿಡಿಯೋ ವೈರಲ್

Delhi Metro
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಜೀವನಾಡಿ ಎಂದೇ ಕರೆಸಿಕೊಳ್ಳುವ ಮೆಟ್ರೋ ಹಲವು ವಿಚಾರಗಳಿಗೆ ದೇಶದ ಜನತೆಯ ಗಮನ ಸೆಳೆಯುತ್ತಿದ್ದು, ಇದೀಗ ಹೊಸ ವಿಚಾರ ಒಂದರಲ್ಲಿ ಇಬ್ಬರು ವ್ಯಕ್ತಿಗಳ ನಡುವಿನ ಹೊಡೆದಾಟಕ್ಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಇಬ್ಬರು ವ್ಯಕ್ತಿಗಳ ನಡುವಿನ ಹೊಡೆದಾಟದ ವಿಡಿಯೋ ಎಲ್ಲೆಡೆ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೀಡಾಗಿದೆ. ದೆಹಲಿ ಮೆಟ್ರೋದಲ್ಲಿ ಒಂದು ಸಾಮಾನ್ಯ ದಿನ. ಸೀಟಿಗಾಗಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಗಳಿಬ್ಬರ ನಡುವೆ ಕಳಿತುಕೊಳ್ಳುವ ಆಸನದ ವಿಚಾರವಾಗಿ ಶುರುವಾಗುವ ಗಲಾಟೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತದೆ. ಇದಾದ ಬಳಿಕ ಇಬ್ಬರ ನಡುವೆ ಹೊಡೆದಾಟವಾಗಿದ್ದು ಕೆಲವರು ಗಲಾಟೆಯನ್ನು ಬಿಡಿಸಲು ಮುಂದಾದರೆ ಹಲವರು ತಮ್ಮ ಸುತ್ತ ನಡೆಯುತ್ತಿದ್ದ ತಮಾಷೆಯನ್ನು ನೋಡುತ್ತಾ ಮೊಬೈಲ್​ ಫೋನಿನಲ್ಲಿ ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ನೋಡಬಹುದಾಗಿದೆ.

ಇತ್ತ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಹಲವರು ಜಗಳದ ಕುರಿತು ಕಮೆಂಟ್​ ಮಾಡಿದ್ದು, ಬೆಂಗಳೂರು ಮೆಟ್ರೋದಲ್ಲಿ ಈ ರೀತಿಯ ಘಟನೆಗಳು ಯಾಕೆ ಕಾಣಸಿಗುವುದಿಲ್ಲ ಎಂದು ಕಮೆಂಟ್​ ಮಾಡಿದ್ದರೆ. ಇನ್ನು ಕೆಲವರು ಇವರು ಅನಿಮಲ್​ ಸಿನಿಮಾ ನೋಡಿದ್ದರು ಎಂದು ಕಾಣುತ್ತದೆ ಅದಕ್ಕಾಗಿ ಈ ರೀತಿ ಹೊಡೆದಾಡುತ್ತಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net