ಮನುಷ್ಯರಿಗೆ ಒಂದಲ್ಲ ಎರಡು ಹೃದಯಗಳಿವೆ ಎಂಬುದು ತಿಳಿದಿದೆಯೇ? ಇಲ್ಲಿದೆ ಉಪಯುಕ್ತ ಮಾಹಿತಿ... Pump Blood

Pump Blood
Published on

Pump Blood : ಹೃದಯದ ಬಗ್ಗೆ ಯೋಚಿಸುವಾಗ ಎದೆಯಲ್ಲಿ ನಿರಂತರವಾಗಿ ಬಡಿಯುವ ಒಂದು ಅಂಗದ ಬಗ್ಗೆ ಮಾತ್ರ ನಾವು ಯೋಚನೆ ಮಾಡುತ್ತೇವೆ. ಆದರೆ ತಜ್ಞರು ಹೇಳುವಂತೆ ದೇಹದಲ್ಲಿ ಮತ್ತೊಂದು ಹೃದಯವಿದೆ, ಅದು ಆರೋಗ್ಯಕ್ಕೆ ಬಹಳ ಮುಖ್ಯ. ಅಯ್ಯೋ ನಾನು ಒಂದು ಹೃದಯದ ಬಗ್ಗೆ ಕೇಳಿದ್ದೇನೆ ಇದ್ಯಾವುದು ಎರಡನೇ ಹೃದಯ ಅನ್ನೋ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಅಂದಹಾಗೆ, ಎರಡನೇ ಹೃದಯವು ಕಾಲುಗಳಲ್ಲಿದೆ. ಅದನ್ನು ಸ್ಕೆಲಿಟಲ್​ ಮಸಲ್ಸ್​ ಅಂತಾ ಕರೆಯುತ್ತಾರೆ. ವೈದ್ಯಕೀಯ ವಿಜ್ಞಾನದಲ್ಲಿ, ಸ್ಕೆಲಿಟಲ್​ ಮಸಲ್ಸ್​ ಹೆಚ್ಚಾಗಿ ಎರಡನೇ ಹೃದಯ ಎಂದು ಕರೆಯಲಾಗುತ್ತದೆ. ಏಕೆಂದರೆ, ಹೃದಯವು ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುತ್ತದೆ. ಆದರೆ, ಕಾಲುಗಳಂತಹ ದೇಹದ ಕೆಳಗಿನ ಭಾಗಗಳನ್ನು ತಲುಪುವ ರಕ್ತವು ಗುರುತ್ವಾಕರ್ಷಣೆಯ ವಿರುದ್ಧ ಮತ್ತೆ ಹೃದಯಕ್ಕೆ ಹಿಂತಿರುಗಲು ಶ್ರಮಿಸಬೇಕಾಗುತ್ತದೆ. ಹಾಗಾದರೆ, ಸ್ಕೆಲಿಟಲ್​ ಮಸಲ್ಸ್​ ಅನ್ನು ಎರಡನೇ ಹೃದಯವೆಂದು ಏಕೆ ಕರೆಯುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ನಮ್ಮ ದೇಹದಲ್ಲಿ ಸ್ಕೆಲಿಟಲ್​ ಮಸಲ್ಸ್ ಪಾತ್ರ ಮುಖ್ಯವಾಗುತ್ತದೆ. ನೀವು ನಡೆಯುವಾಗ, ಓಡುವಾಗ ಅಥವಾ ನಿಮ್ಮ ಕಾಲುಗಳನ್ನು ಸ್ವಲ್ಪ ಚಲಿಸಿದಾಗ, ಈ ಸ್ನಾಯುಗಳು ಸಂಕುಚಿತಗೊಳ್ಳುತ್ತವೆ. ಈ ಸಂಕೋಚನವು ರಕ್ತನಾಳಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ರಕ್ತವನ್ನು ಮೇಲಕ್ಕೆ ಮತ್ತು ಹೃದಯದ ಕಡೆಗೆ ಪಂಪ್ ಮಾಡುತ್ತದೆ. ಇದು ಹೃದಯವು ರಕ್ತವನ್ನು ಪಂಪ್ ಮಾಡುವ ವಿಧಾನಕ್ಕೆ ಹೋಲುತ್ತದೆ. ಈ ಪ್ರಕ್ರಿಯೆಯನ್ನು ಸ್ನಾಯು ಪಂಪ್ ಕಾರ್ಯವಿಧಾನ ( Muscle pump mechanism ) ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ, ಅವುಗಳನ್ನು ಎರಡನೇ ಹೃದಯ ಎಂದು ಕರೆಯಲಾಗುತ್ತದೆ.

ಮೇಯೊ ಕ್ಲಿನಿಕ್ ನಡೆಸಿದ ಅಧ್ಯಯನದ ಪ್ರಕಾರ ಕಡಿಮೆ ಸ್ನಾಯು ಪಂಪ್ ಕಾರ್ಯವಿಧಾನ ಚಟುವಟಿಕೆಯನ್ನು ಹೊಂದಿರುವ ಜನರು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ. ಈ ಕೊರತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವು ಬಹಿರಂಗಪಡಿಸಿದೆ. 2020 ರಲ್ಲಿ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನಾ ಪ್ರಬಂಧದ ಪ್ರಕಾರ, ಸ್ನಾಯು ಪಂಪ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ಹೃದಯಾಘಾತ ಸೇರಿದಂತೆ ಅನೇಕ ರೋಗಗಳ ಅಪಾಯವಿದೆ.

ಈ ಎರಡನೇ ಹೃದಯವು ಆರೋಗ್ಯಕ್ಕೆ ಅತ್ಯಗತ್ಯ. ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ರಕ್ತ ಹೆಪ್ಪುಗಟ್ಟುವಿಕೆ, ಊತ, ನೋವು ಮತ್ತು ಕಾಲುಗಳಲ್ಲಿ ಉಬ್ಬಿರುವ ರಕ್ತನಾಳಗಳಂತಹ ಸಮಸ್ಯೆಗಳು ಉದ್ಭವಿಸಬಹುದು. ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ನಿಲ್ಲುವುದು ಈ ಸಮಸ್ಯೆಗಳನ್ನು ಇನ್ನಷ್ಟು ಹದಗೆಡಿಸಬಹುದು. ರಕ್ತ ಪರಿಚಲನೆಯಲ್ಲಿನ ಅಡಚಣೆಗಳು ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಹೆಚ್ಚಿಸಬಹುದು. ಇದು ಶ್ವಾಸಕೋಶ ಮತ್ತು ಹೃದಯವನ್ನು ತಲುಪಿದರೆ ಮಾರಕವಾಗಬಹುದು. ಆದ್ದರಿಂದ, ಸುಮ್ಮನೇ ಒಂದೇ ಕಡೆ ಕುಳಿತುಕೊಳ್ಳಬಾರದು. ನಡೆಯುವ ಅಥವಾ ಜಾಗಿಂಗ್​ ಮಾಡುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು. ಈ ಅಭ್ಯಾಸ ಹೃದಯದ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net