ಪಡುಮಲೆಯಲ್ಲಿ ಪೂಮಾಣಿ ನೇಮೋತ್ಸವ

Ism_Pumani Nemotsava
Published on

ಪುತ್ತೂರು ಗ್ರಾಮಾಂತರ: ಪಡುವನ್ನೂರು ಗ್ರಾಮದ ಪಡುಮಲೆ ಪೂಮಾಣಿ&ಕಿನ್ನಿಮಾಣಿ(ಉಳ್ಳಾಕುಲು), ವ್ಯ್ರಾ ಚಾಮುಂಡಿ (ರಾಜನ್​ ದೈವ) ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಅಂಗವಾಗಿ ಶುಕ್ರವಾರ ಪೂಮಾಣಿ ದೈವದ ನೇಮೋತ್ಸವ ನಡೆಯಿತು.

ಸಂಪ್ರದಾಯದಂತೆ ಬೆಳಗ್ಗೆ ದೈವಸ್ಥಾನದಿಂದ ಮುಡಿ ಇಡುವ ಕಲ್ಲಿನಲ್ಲಿಗೆ ದೈವಗಳ ಬಿಲ್ಲು&ಬಾಣ, ಆಯುಧಗಳನ್ನು ಪಲ್ಲಕ್ಕಿಯಲ್ಲಿ ಕೊಂಡೊಯ್ದು ಅಲ್ಲಿ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಪೂಮಾಣಿ ದೈವವು ಅಲ್ಲಿ ಕುದುರೆಯನ್ನೇರಿ ದೈವಸ್ಥಾನಕ್ಕೆ ಬಂದು ನೇಮೋತ್ಸವ ಆರಂಭಗೊಂಡಿತು. ದೈವದ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ದೈವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿರಾಜ್​ ಶೆಟ್ಟಿ ಅಣಿಲೆ, ಸದಸ್ಯರಾದ ದಯಾ ವಿ.ರೈ ಬೆಳ್ಳಿಪ್ಪಾಡಿ, ರವಿರಾಜ್​ ರೈ ಸಜಂಕಾಡಿ, ಶಶಿಧರ್​ ರೈ ಕುತ್ಯಾಳ, ಶ್ರೀಧರ ನಾಯ್ಕ ನೇರ್ಲಪಾಡಿ, ವಿಶ್ವನಾಥ ಪೂಜಾರಿ ಪೂಜಾರಿಮೂಲೆ, ತರವಾಡು ಕುಟುಂಬಗಳ ಪ್ರಮುಖರಾದ ಕೃಷ್ಣ ರೈ ಕುದ್ಕಾಡಿ, ಪುರಂದರ ರೈ ಕುದ್ಕಾಡಿ, ಸೇನವರಾದ ನಾರಾಯಣ ರಾವ್​ ಪಡುಮಲೆ, ಉದಯಕುಮಾರ್​ ಪಡುಮಲೆ, ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್​ ರೈ ಕಟ್ಟಾವು, ಜನಾರ್ದನ ಪೂಜಾರಿ ಪದಡ್ಕ, ಜತೆ ಕಾರ್ಯದರ್ಶಿ ಸುರೇಶ್​ ರೈ ಪಲ್ಲತ್ತಾರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net