ಬಹುಸಂಸ್ಕೃತಿ ಉತ್ಸವದಲ್ಲಿ ನಾಡಿನ ಸಾಂಸ್ಕೃತಿಕ ವೈವಿಧ್ಯತೆಯ ಅನಾವರಣ

blank

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕೊಂಕಣಿಯ ಬೈಲಾ ಹಾಡು ಹಾಗೂ ನೃತ್ಯ, ಕೊಡವರ ಉಮ್ಮತ್ತಾಟ್ ನೃತ್ಯ, ತುಳುವಿನ ಕೊರಗರ ಡೋಲು – ಕೊಳಲಿನ ನಿನಾದದೊಂದಿಗೆ ಕುಣಿತ, ದುಡಿ ಕುಣಿತ, ಬ್ಯಾರಿ ಹುಡುಗರ ದಫ್….
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ ಮತ್ತು ಯಕ್ಷಗಾನ ಅಕಾಡೆಮಿ, ದ.ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಿದ ಬಹುಸಂಸ್ಕೃತಿ ಉತ್ಸವವು ನಾಡಿನ ಸಾಂಸ್ಕೃತಿಕ ವೈವಿಧ್ಯತೆಯ ಅನಾವರಣಕ್ಕೆ ಸಾಕ್ಷಿಯಾಯಿತು. ವಿವಿಧ ಅಕಾಡೆಮಿಗಳ ತಂಡಗಳಿಂದ ಕರಾವಳಿಯ ಸಾಂಸ್ಕೃತಿಕ ವೈಭವ ಪ್ರದರ್ಶನಗೊಂಡಿತು.
ಸುವರ್ಣ ಕರ್ನಾಟಕ ಸಂಭ್ರಮವನ್ನು ಬಿಂಬಿಸುವ ನೃತ್ಯಗಳು ಬೆಳಗ್ಗಿನಿಂದ ಸಂಜೆಯವರೆಗೂ ಪುರಭವನದ ವೇದಿಕೆಯಲ್ಲಿ ನಡೆಯಿತು. ಮೈಮ್ ರಾಮದಾಸ್ ಅವರ ತುಳು ಹಾಡುಗಳು, ಫಯಾಜ್ ಅವರ ಬ್ಯಾರಿ, ಝೀನಾರವರ ಬೈಲಾ ಹಾಗೂ ಜ್ಯೋತಿ ಜೋಗಿಯವರ ಜನಪದ ಹಾಡುಗಳ ಸೊಗಸಿಗೆ ಕಲಾಭಿಮಾನಿಗಳು ಮಾರುಹೋದರು.
ೋಡಿ ಮಾಡಿದ ಸಿದ್ಧಿ ಸಮುದಾಯದ ನೃತ್ಯ ವೈಭವ!
ಸಿದ್ಧಿ ಸಮುದಾಯ ತಂಡವು ಪ್ರದರ್ಶಿಸಿದ ನೃತ್ಯ ವೈಭವವನ್ನು ಸೇರಿದ್ದ ಶಾಲಾ ಕಾಲೇಜು ಮಕ್ಕಳ ಜತೆಗೆ ಇತರ ಪ್ರೇಕ್ಷಕರು ಬೆರಗುಕಣ್ಣುಗಳಿಂದ ವೀಕ್ಷಿಸಿದರು. ಮಡಕೆಯನ್ನು ಹೋಲುವ ‘ಗುಮ್ಮಟೆ’ ಡೋಲು ಬಾರಿಸಿಕೊಂಡು ಮೂವರು ಕಲಾವಿದರು ಹಾಡು ಹೇಳುತ್ತಿದ್ದರೆ, ಆಕರ್ಷಕ ಉಡುಗೆ ತೊಡುಗೆಗಳನ್ನು ತೊಟ್ಟ ಐದು ಮಂದಿ ಮಹಿಳೆಯರ ನೃತ್ಯ ನೋಡುಗರನ್ನು ಮೋಡಿಗೊಳಿಸಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು, ಸಮಾಜದಲ್ಲಿ ಪ್ರೀತಿ, ವಿಶ್ವಾಸದ ವಾತಾವರಣ ಕಡಿಮೆಯಾಗಿ ಪರಸ್ಪರ ಜನರು ಅನುಮಾನದಿಂದ ನೋಡುವ ಇಂದಿನ ಕಾಲಘಟ್ಟದಲ್ಲಿ ವಿವಿಧ ಸಂಸ್ಕೃತಿಗಳನ್ನು ಪರಿಚಯಿಸುವಂತಹ ಕಾರ್ಯಕ್ರಮಗಳ ಮೂಲಕ ಬಲಿಷ್ಟ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದರು.
ವಿದೇಶಗಳಲ್ಲಿ ವರ್ಷದಲ್ಲಿ ಒಂದೆರಡು ಹಬ್ಬಗಳನ್ನು ಮಾತ್ರ ಆಚರಿಸಲಾಗುತ್ತದೆ. ಆದರೆ ಭಾರತದಲ್ಲಿ ಪ್ರತಿದಿನವೂ ಹಬ್ಬವೇ. ಉತ್ಸವಗಳು ನಮ್ಮ ವ್ಯಕ್ತಿತ್ವ ಬೆಳೆಸಲು ಸಾಕಷ್ಟು ಸಹಕಾರಿಯಾಗುತ್ತವೆ. ಕಲೆ, ಸಂಸ್ಕೃತಿನ್ನು ಉತ್ಸವಕ್ಕಷ್ಟೇ ಸೀಮಿತಗೊಳಿಸದೆ ಯುವಕರಿಗೆ ಅದನ್ನು ಹಿರಿಯರು ಅರ್ಥೈಸಬೇಕು. ಇಂತಹ ಉತ್ಸವಗಳಲ್ಲಿ ಪೋಷಕರೂ ಪಾಲ್ಗೊಳ್ಳಬೇಕು ಎಂದು ಅವರು ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಮಹೇಶ್ ನಾಚಯ್ಯ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಂಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಉಡುಪಿ ಎಸ್ಪಿ ಡಾ.ಅರುಣ್ ಮತ್ತಿತರರಿದ್ದರು.‘ಕರ್ನಾಟಕಕ್ಕೆ ಒಡನಾಡಿ ಭಾಷಾ ಸಮುದಾಯಗಳ ಕೊಡುಗೆ’ ಎಂಬ ವಿಷಯದಲ್ಲಿ ಆಯ್ದ ವಿದ್ಯಾರ್ಥಿಗಳು ವಿಚಾರ ಮಂಡಿಸಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಅಕಾಡೆಮಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ಕಾಲೇಜು ಮಕ್ಕಳಿಗಾಗಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Share This Article

ವಿಪರೀತ ಬೆನ್ನು ನೋವು ಇದೆಯಾ? ಮಲಗುವಾಗ ನೀವಿದನ್ನು ಮಾಡಿದ್ರೆ ಸಾಕು ಉತ್ತಮ ಪರಿಹಾರ ಸಿಗುತ್ತೆ! Back Pain

Back Pain : ಬೆನ್ನುನೋವು ಅಥವಾ ಬೆನ್ನುಮೂಳೆಯಲ್ಲಿ ನೋವು ಇದ್ದರೆ, ನೀವು ಕೆಲವು ಆಸನಗಳನ್ನು ಮಾಡಿದರೆ…

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…