

ಶ್ರೀನಗರ: 2019ರ ಫೆ.14ರಂದು ಉಗ್ರರು ನಡೆಸಿದ್ದ ಪುಲ್ವಾಮಾ ದಾಳಿ ರೀತಿಯ ಉಗ್ರರ ದಾಳಿಯನ್ನು ಭದ್ರತಾ ಪಡೆ ಸಿಬ್ಬಂದಿ ಬುಧವಾರ ರಾತ್ರಿ ವಿಫಲಗೊಳಿಸಿದ್ದಾರೆ.
ಸಿಕ್ಕ ಖಚಿತ ಮಾಹಿತಿಯನ್ನು ಆಧರಿಸಿ ರಾಜಪೋರಾದ ಅವಿಗುಂಡ್ ಬಳಿಯ ಚೆಕ್ಪೋಸ್ಟ್ನಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅದರಲ್ಲಿ 20 ಕೆ.ಜಿ. ಸುಧಾರಿತ ಸ್ಫೋಟ ಇರುವುದು ಪತ್ತೆಯಾಯಿತು. ವಶಕ್ಕೆ ಪಡೆಯುವಷ್ಟರಲ್ಲಿ ವಾಹನದ ಚಾಲಕ ಗುಂಡಿನ ದಾಳಿ ನಡೆಸುತ್ತಾ, ಕತ್ತಲಲ್ಲಿ ಪರಾರಿಯಾದ ಎನ್ನಲಾಗಿದೆ.
ಪರಾರಿಯಾಗಿರುವ ಕಾರಿನ ಚಾಲಕ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಉಗ್ರನಿರಬಹುದು ಎಂದು ಶಂಕಿಸಲಾಗಿದೆ.
ಕಾರಿನ ಹಿಂಬದಿಯಲ್ಲಿ ಡ್ರಮ್ವೊಂದರಲ್ಲಿ ಸ್ಫೋಟಕಗಳನ್ನು ಅಡಗಿಸಿಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿ, ಸಂಭಾವ್ಯ ಉಗ್ರರ ದಾಳಿಯನ್ನು ವಿಫಲಗೊಳಿಸಿತು ಎನ್ನಲಾಗಿದೆ.
ಕಾರಿಗೆ ನಕಲಿ ನಂಬರ್ ಪ್ಲೇಟ್ ಲಗತ್ತಿಸಲಾಗಿತ್ತು. ಕಥುವಾ ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟಿರುವ ಯಾವುದೋ ಸ್ಕೂಟರ್ನ ನೋಂದಣಿ ಸಂಖ್ಯೆಯನ್ನು ಬಳಸಲಾಗಿತ್ತು ಎನ್ನಲಾಗಿದೆ. ವಾಹನವನ್ನು ಸದ್ಯ ರಾಷ್ಟ್ರೀಯ ತನಿಖಾ ದಳ (ಎನ್ಐಎ) ವಶಕ್ಕೆ ಪಡೆದುಕೊಂಡಿದೆ.