More

    ನಾಲ್ವರ ಪ್ರಯಾಣಕ್ಕೆ ಇಡೀ ವಿಮಾನವನ್ನೇ ಬುಕ್​ ಮಾಡಿದ…!

    ನವದೆಹಲಿ: ಭೋಪಾಲ್​ನಿಂದ ದೆಹಲಿಗೆ ತೆರಳಬೇಕಿದ್ದ ನಾಲ್ವರ ಸುರಕ್ಷತೆಗಾಗಿ ಕುಟುಂಬವೊಂದು ಇಡೀ ವಿಮಾನವನ್ನೇ ಬುಕ್​ ಮಾಡಿತ್ತು. ಸಾಮಾನ್ಯವಾಗಿ ಬಾಡಿಗೆ ಉದ್ದೇಶಕ್ಕೆ ಲಘು ವಿಮಾನಗಳನ್ನು ಬಳಸಲಾಗುತ್ತದೆಯಾದರೂ, ಇವರು ಸಾಗಿದ್ದು ಮಾತ್ರ 180 ಸೀಟು ಸಾಮರ್ಥ್ಯದ ಏರ್​ಬಸ್​ 320 ವಿಮಾನದಲ್ಲಿ.

    ಭೋಪಾಲ್​ ವಿಮಾನ ನಿಲ್ದಾಣಕ್ಕೆ ಮಹಾರಾಜ ಭೋಜ್​ ಹೆಸರನ್ನಿಡಲಾಗಿದೆ. ಮಹಾರಾಜನ ಶ್ರೀಮಂತಿಕೆ ಹೊಂದಿದ ಕುಟುಂಬ ಇದಾಗಿರಬಹುದೇನೋ? ಇಷ್ಟಕ್ಕೂ ನಾಲ್ವರನ್ನು ಕರೆದೊಯ್ಯಲು ಏರ್​ಬಸ್​-320 ವಿಮಾನ ದೆಹಲಿಯಿಂದ ಕೇವಲ ಸಿಬ್ಬಂದಿಯನ್ನು ಹೊತ್ತು ಬಂದಿತ್ತು. ಭೋಪಾಲ್​ನಿಂದ ಮಡದಿ, ಇಬ್ಬರು ಮಕ್ಕಳು ಹಾಗೂ ದಾದಿಯನ್ನು ಹೊತ್ತು ಸಾಗಿತು.

    ಇದನ್ನೂ ಓದಿ; ಎಸ್​ಎಸ್​ಎಲ್​ಸಿ ಪರೀಕ್ಷೆ ರದ್ದಾಗಲ್ಲ…. ಗೊಂದಲ ಮಾಡ್ಕೊಬೇಡಿ, ಚೆನ್ನಾಗಿ ಓದ್ಕೊಳಿ..

    ಕೋವಿಡ್​ ಕಾಲಮಾನದಲ್ಲಿ ಮಡದಿ, ಮಕ್ಕಳ ಸುರಕ್ಷತೆಗಾಗಿ ಈ ಕ್ರಮ ಕೈಗೊಂಡಿರಬಹುದು. ಇದಕ್ಕಾಗಿ 10 ಲಕ್ಷ ರೂ. ವೆಚ್ಚವಾಗಿರಬಹುದು ಎಂದು ಅಂದಾಜಿಸಲಾಗಿದೆ.
    ದೆಹಲಿಯಿಂದ 9.05ಕ್ಕೆ ಹೊರಟ ವಿಮಾನ 10.30ಕ್ಕೆ ಭೋಪಾಲ್​ ತಲುಪಿದೆ. ಭೋಪಾಲ್​ನಿಂದ 11.30ಕ್ಕೆ ಹೊರಟು 12.55ಕ್ಕೆ ದೆಹಲಿಗೆ ಆಗಮಿಸಿದೆ ಎಮದು ವಿಮಾನ ನಿಲ್ದಾಣಾಧಿಕಾರಿಗಳು ತಿಳಿಸಿದ್ದಾರೆ.

    ಈ ಅವಧಿಯಲ್ಲಿ ಜನದಟ್ಟಣೆ ನಡುವೆ ಪ್ರಯಾಣಿಸಲು ಇಚ್ಛಿಸಿದ ಅತಿ ಶ್ರೀಮಂತ ಕುಟುಂಬಗಳು ವಿಶೇಷ ವಿಮಾನ ಬಳಸುತ್ತಿವೆ. ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್​ ಆದ ಮರುದಿನ ಯುರೋಪ್​ನಿಂದ ಮುಂಬೈಗೆ ಮೂವರು ವಿಶೇಷ ವಿಮಾನದಲ್ಲಿ ಆಗಮಿಸಿದ್ದರು. ಇದಕ್ಕಾಗಿ ಅಂದಾಜು 80 ಲಕ್ಷ ರೂ. ವೆಚ್ಚವಾಗಿರಬಹುದು ಎಮದು ಅಂದಾಜಿಸಲಾಗಿದೆ.

    ಇದನ್ನೂ ಓದಿ; ‘ನೋ ಸೀಟ್​’ ಇರುತ್ತಿದ್ದ ಜಾಗದಲ್ಲಿ ಬಂದಿವೆ ‘ ಫಾರ್​ ಸೇಲ್​ ‘ ಬೋರ್ಡ್​ಗಳು 

    ಕಳೆದ ಮೂರು ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣವೂ ಕೂಡ ಮುರು ವಿಶೇಷ ಅಥವಾ ಬಾಡಿಗೆ ವಿಮಾನಗಳನ್ನು ನಿರ್ವಹಿಸಿದೆ. ಬಾಡಿಗೆ ವಿಮಾನಗಳನ್ನು ಪ್ರತಿ ಗಂಟೆ ಅವಧಿಗೆ ದರ ನಿಗದಿ ಪಡಿಸಲಾಗುತ್ತದೆ. ವಿಮಾನದ ಇಂಧನದ ಬೆಲೆ ಆಧರಿಸಿ ಈ ದರ ನಿಗದಿಯಾಗುತ್ತದೆ. ಒಂದು ತಾಸಿನ ಪ್ರಯಾಣಕ್ಕೆ 4-6 ಲಕ್ಷ ರೂ. ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.

    ಹೊಸ ಮದುವೆ, ಹೊಸ ಅಪಾರ್ಟ್​ಮೆಂಟ್​, ಹೊಸ ಬದುಕು… ಆದರೆ, ಮುಗಿಯುತ್ತಲೇ ಇಲ್ಲ ಹನಿಮೂನ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts