More

    VIDEO| ತಾಂತ್ರಿಕ ದೋಷದಿಂದ ಮಂಗಳೂರು-ದುಬೈ ವಿಮಾನ ಹಾರಾಟ ವಿಳಂಬ; ಪ್ರಯಾಣಿಕರು ಕೆಂಡಾಮಂಡಲ

    ಮಂಗಳೂರು: ದುಬೈಗೆ ತೆರಳಬೇಕಿದ್ದ ಏರ್​ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಟೇಕಾಫ್​ ಆಗದೆ ಪ್ರಯಾಣಿಕರು ಪರದಾಡಿದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಸೋಮವಾರ ರಾತ್ರಿ 11:15ಕ್ಕೆ ಟೇಕಾಫ್​ ಆಗಬೇಕಿದ್ದ ವಿಮಾನವು ಮಂಗಳವಾರ ಮಧ್ಯಾಹ್ನ 12:20ಕ್ಕೆ ಹೊರಟ್ಟಿದ್ದು, ಸಂಸ್ಥೆ ವಿರುದ್ಧ ಪ್ರಯಾಣಿಕರು ಹೌಹಾರಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಸೋಮವಾರ ರಾತ್ರಿ 11:15ಕ್ಕೆ ಮಂಗಳೂರಿನಿಂದ ದುಬೈಗೆ ಟೇಕಾಫ್​ ಆಗಬೇಕಿದ್ದ ವಿಮಾನವು ತಾಂತ್ರಿಕ ದೋಷದಿಂದ ಹಾರಾಟ ನಡೆಸಲಿಲ್ಲ. ಈ ಕುರಿತು ಪ್ರಯಾಣಿಕರಲ್ಲಿ ಮೊದಲಿಗೆ ವಿನಂತಿಸಿಕೊಂಡ ಕಂಪನಿಯೂ ಬದಲಿ ವಿಮಾನವನ್ನು ವ್ಯವಸ್ಥೆ ಮಾಡುವುದಾಗಿ ಹೇಳಿತ್ತು.

    ಇದನ್ನೂ ಓದಿ: ಬಿಜೆಪಿಯ ರಾಜಕೀಯ ದುರುದ್ದೇಶವು ಜನತೆಯನ್ನು ಬಲಿಪಶು ಮಾಡುತ್ತಿದೆ: ಕಾಂಗ್ರೆಸ್​

    ಆದರೆ, ರಾತ್ರಿ ಪೂರ್ತಿ ಏರ್​ಪೋರ್ಟ್​ ಲಾಂಜ್​ನಲ್ಲೇ ಕಾಲ ಕಳೆದ ಪ್ರಯಾಣಿಕರು ಬೆಳಗ್ಗೆ 9 ಘಂಟೆಯಾದರೂ ಸಹ ಕಂಪನಿಯೂ ಬದಲಿ ವಿಮಾನ ವ್ಯವಸ್ಥೆ ಮಾಡದಿರುವುದನ್ನು ಕಂಡು ಏರ್​ ಇಂಡಿಯಾ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ. ಈ ವೇಳೆ ಕಂಪನಿ ಸಿಬ್ಬಂದಿ ಹಾಗೂ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ.

    ಬಳಿಕ ಮಧ್ಯಾಹ್ನ 12:20ರ ಸುಮಾರಿಗೆ ಏರ್​ ಇಂಡಿಯಾ ಸಿಬ್ಬಂದಿ ಬದಲಿ ವಿಮಾನದ ವ್ಯವಸ್ಥೆ ಮಾಡಿದ್ದು, ಅದರಲ್ಲಿ 130ಕ್ಕೂ ಹೆಚ್ಚಿನ ಪ್ರಯಾಣಿಕರನ್ನು ದುಬೈಗೆ ಕಳುಹಿಸಿಕೊಡಲಾಗಿದೆ. ದುಬೈಗೆ ತೆರಳುವುದು ತಡವಾಗಿದ್ದರಿಂದ ಕೆಲ ಪ್ರಯಾಣಿಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಅಂತಹವರು ಏರ್​ ಇಂಡಿಯಾ ಸಂಸ್ಥೆ ಕಡೆಯಿಂದ ವಿವರಣೆ ಪತ್ರವನ್ನು ಪಡೆದು ತೆರಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts