More

    ಹೊಸ ಮದುವೆ, ಹೊಸ ಅಪಾರ್ಟ್​ಮೆಂಟ್​, ಹೊಸ ಬದುಕು… ಆದರೆ, ಮುಗಿಯುತ್ತಲೇ ಇಲ್ಲ ಹನಿಮೂನ್​..!

    ದುಬೈ: ಹೊಸದಾಗಿ ಮದುವೆಯಾದ ಜೋಡಿ ಹೊಸ ಅಪಾರ್ಟ್​ಮೆಂಟ್​ನಲ್ಲಿ ಹೊಸ ಬದುಕು ಸಾಗಿಸಲು ಎಲ್ಲವನ್ನೂ ಅಣಿಯಾಗಿಸಿತ್ತು. ಜತೆಯಾಗಿ ದಿನಕಳೆಯಲು ಉತ್ಸುಕವಾಗಿತ್ತು. ಅದಕ್ಕೂ ಮುನ್ನ ಹನಿಮೂನ್​ ಮುಗಿಸಿಕೊಂಡು ಬರೋಣವೆಂದು ಹೊರಟಿತು. ಆದರೆ, ಎಡವಟ್ಟಾಗಿದ್ದು ಅಲ್ಲೇ.

    ಈಜಿಪ್ತ್​ ನಾಗರಿಕರಾದ ಖಾಲೀದ್​ ಮೊಕ್ತಾರ್​ ಹಾಗೂ ಪೆರಿಹನ್​ ಅಬೌಜೀದ್​ ಕಳೆದ ಮಾರ್ಚ್​ 6 ರಂದು ಕೈರೋದಲ್ಲಿ ಮದುವೆಯಾದರು. ಇಬ್ಬರೂ ದುಬೈನಲ್ಲಿ ಉದ್ಯೋಗದಲ್ಲಿದ್ದು, ಅಲ್ಲಿಯೇ ಬಹುಕಾಲದಿಂದ ನೆಲೆ ಕಂಡುಕೊಂಡಿದ್ದರು. ಹೀಗಾಗಿ ಅಲ್ಲಿಯೇ ಹೊಸ ಅಪಾರ್ಟ್​ಮೆಂಟ್​ನಲ್ಲಿ ಹೊಸ ಬದುಕನ್ನು ಆರಂಭಿಸಲು ಬಯಸಿದ್ದರು. ಅದಕ್ಕಾಗಿ ಎಲ್ಲವನ್ನೂ ಸಿದ್ಧಗೊಳಿಸಿದ್ದರು. ಯಾವಾಗ ಆ ಮನೆಗೆ ಹೋಗುತ್ತೇವೋ ಎಂದು ಕಾದಿದ್ದರು.

    ಇದನ್ನೂ ಓದಿ; ಊರಿಗೆ ತೆರಳಿದವರು ಕಾಡಿಗೆ ನುಗ್ಗಿದರೇ…! ಅರಣ್ಯಕ್ಕೆ ಕಂಟಕವಾದ ಕೋವಿಡ್​ ಕಾಲಮಾನ 

    ಮದುವೆ ಬಳಿಕ ಕೈರೋದಿಂದ ಮೆಕ್ಸಿಕೋಗೆ ಹನಿಮೂನ್​ಗೆ ತೆರಳಿದರು. ಮಾರ್ಚ್​ 19ಕ್ಕೆ ಟರ್ಕಿಯ ವಿಮಾನವನ್ನೇರಿದರು. ಅಲ್ಲಿ ದುಬೈ ಮಾರ್ಗವಾಗಿ ಬಹ್ರೇನ್​ಗೆ ತೆರಳುವ ವಿಮಾನವನ್ನು ಹತ್ತಬೇಕಿತ್ತು. ಮೆಕ್ಸಿಕೋದಿಂದ ಟರ್ಕಿ ವಿಮಾನ ಏರುವವರೆಗೆ ಎಲ್ಲವೂ ಸರಿಯಾಗಿತ್ತು. ವಿಮಾನದಲ್ಲಿದ್ದಾಗಲೇ ದುಬೈಗೆ ವಿದೇಶಿ ಪ್ರಜೆಗಳ ಪ್ರವೇಶ ನಿರ್ಬಂಧಿಸಿರುವ ಮಾಹಿತಿ ಅವರಿಗೆ ಗೆಳೆಯನಿಂದ ತಿಳಿಯಿತು. ಟರ್ಕಿಯಲ್ಲಿ ಇಳಿದ ಬಳಿಕ ಅದು ನಿಜವೂ ಆಯಿತು.

    ಟರ್ಕಿಯಿಂದ ದುಬೈಗೆ ತೆರಳುವ ವಿಮಾನ ರದ್ದಾಗಿತ್ತು. ಅವರ ಬೋರ್ಡಿಂಗ್​ ಪಾಸ್​ಗಳನ್ನು ಕಸಿದುಕೊಳ್ಳಲಾಯಿತು. ಇತ್ತ ಟರ್ಕಿಯಲ್ಲಿ ಇರಲು ವೀಸಾ ಕೂಡ ಇಲ್ಲ. ಅತ್ತ ದುಬೈ ಪ್ರವೇಶಕ್ಕೆ ಅವಕಾಶವೂ ಇಲ್ಲ. ಹೀಗಾಗಿ ವೀಸಾ ಇಲ್ಲದೇ, ಯಾವ ದೇಶ ತಮ್ಮನ್ನು ಕರೆಸಿಕೊಳ್ಳಲಿದೆ ಎಂದು ಹುಡುಕುತ್ತಿದ್ದಾಗ ದ್ವೀಪರಾಷ್ಟ್ರ ಮಾಲ್ಡೀವ್ಸ್​ಗೆ ತೆರಳುವ ಅವಕಾಶವಿರುವುದು ಗೊತ್ತಾಯಿತು.

    ಇದನ್ನೂ ಓದಿ; ಆಘಾತಕಾರಿ… 100 ಸ್ಮಾರ್ಟ್​ ಸಿಟಿ ಯೋಜನೆಗಳಲ್ಲಿ ಆರೋಗ್ಯ ಕ್ಷೇತ್ರ ಲೆಕ್ಕಕ್ಕೇ ಇಲ್ಲ 

    ಅಲ್ಲಿಗೆ ಅವರ ಎರಡನೇ ಸುತ್ತಿನ ಹನಿಮೂನ್​ ಆರಂಭವಾಯಿತು. ಇಲ್ಲಿಗೆ ಬರುತ್ತಿದ್ದಂತೆ ಮಾಲ್ಡೀವ್ಸ್​ ಕೂಡ ಮಾ.27ರಂದು ಅಂತಾರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಿತು. ಜತೆಗೆ ಅವರಿದ್ದ ರೆಸಾರ್ಟ್​ ಕೂಡ ಬಂದ್​ ಆಯಿತು. ಅಲ್ಲಿಂದ ರೆಸಾರ್ಟ್​ನಿಂದ ರೆಸಾರ್ಟ್​ಗೆ ತೆರಳುವುದೇ ಅವರ ಕಾಯಕವಾಯಿತು. ಇದೀಗ ಕ್ವಾರಂಟೈನ್​ ವ್ಯವಸ್ಥೆಗಾಗಿ ಸರ್ಕಾರವೇ ಗುರುತಿಸಿರುವ ರೆಸಾರ್ಟ್​ನಲ್ಲಿ ಇತರ 60-70 ಜನರೊಂದಿಗೆ ಇದ್ದಾರೆ. ಆದರೆ, ಇಲ್ಲಿ ವಾಸ್ತವ್ಯಕ್ಕೆ ಕಡಿಮೆ ಹಣ ಪಡೆಯಲಾಗುತ್ತಿದೆ ಎಂಬುದಷ್ಟೇ ಅವರ ಖುಷಿ.

    ಅಂತಾರಾಷ್ಟ್ರೀಯ ವಿಮಾನ ಸಂಚಾರ ಯಾವಾಗ ಆರಂಭವಾಗುತ್ತೆ? ಅದರಲ್ಲೂ ದುಬೈ ಸರ್ಕಾರ ವಿದೇಶಿಗರ ಆಗಮನಕ್ಕೆ ಅವಕಾಶ ಯಾವಾಗ ನೀಡುತ್ತೆ ಎಂಬುದು ಖಚಿತವಾಗದೇ ಅವರ ಹನಿಮೂನ್​ಗೆ ತೆರೆ ಬೀಳುವಂತೆ ಕಾಣುತ್ತಿಲ್ಲ….! ಆದರೆ, ಪತ್ನಿ ಜತೆಗಿರುವುದು ಈ ಸಂದರ್ಭದ ಅತ್ಯಂತ ಖುಷಿಯ ಹಾಗೂ ಪ್ರಶಸ್ತ ಸಂಗತಿ ಎನ್ನುತ್ತಾನೆ ಖಾಲೀದ್​.

    ಸಂಬಳ ನೀಡಲು ಟಿಟಿಡಿ ಆಸ್ತಿ ಮಾರಾಟ ವಿರೋಧಿಸಿ ಆನ್​ಲೈನ್​ ಅಭಿಯಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts