More

    ಸಂಬಳ ನೀಡಲು ಟಿಟಿಡಿ ಆಸ್ತಿ ಮಾರಾಟ ವಿರೋಧಿಸಿ ಆನ್​ಲೈನ್​ ಅಭಿಯಾನ

    ತಿರುಪತಿ: ಕರೊನಾದಿಂದಾಗಿ ದೇಗುಲಕ್ಕೆ ಭಕ್ತರ ಆಗಮನ ನಿರ್ಬಂಧಿಸಿದ್ದರಿಂದ ತಿರುಪತಿ ತಿರುಮಲ ದೇವಸ್ವಂ ಮಂಡಳಿ ಭಾರಿ ಸಂಕಷ್ಟದಲ್ಲಿದೆ.
    ಟಿಟಿಡಿಯಲ್ಲಿ ಕಾಯಂ ಹಾಗೂ ಗುತ್ತಿಗೆ ಆಧಾರದ ನೌಕರರು ಸೇರಿ 22,000ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರ ಸಂಬಳಕ್ಕೆ ಪ್ರತಿ ತಿಂಗಳು ಅಂದಾಜು 110 ಕೋಟಿ ರೂ.ಗಳ ಅಗತ್ಯವಿದೆ.

    ಕಳೆದ ಮಾರ್ಚ್​ 22ರಿಂದ ದೇಗುಲದ ಬಾಗಿಲು ಮುಚ್ಚಿದ್ದು, ಅರ್ಚಕರು ನಿತ್ಯ ಪೂಜೆಯನ್ನಷ್ಟೇ ನೆರವೇರಿಸುತ್ತಿದ್ದಾರೆ. ದೇವಸ್ಥಾನದ ಕಾಯಂ ಸಿಬ್ಬಂದಿಗೂ ಕೆಲಸವಿಲ್ಲದಂತಾಗಿದೆ. ದೇಗುಲದ 7,500 ಸಿಬ್ಬಂದಿಗೆ ಶೇ.50 ಸಂಬಳವನ್ನಷ್ಟೇ ನೀಡಲಾಗುತ್ತಿದೆ.

    ಇದನ್ನೂ ಓದಿ; ಲಾಕ್​ಡೌನ್​ ಸಮಯದಲ್ಲಿ ಸರ್ಕಾರದ ನಿರ್ದೇಶನ ಪಾಲಿಸದ ತಿರುಪತಿ ದೇಗುಲ ಮಂಡಳಿ, ಕಾರ್ಮಿಕ ಸಂಘಟನೆಗಳ ಆಕ್ರೋಶ 

    ಜೂನ್ ವೇಳೆಗೂ ದೇಗುಲ ಪುನಾರಂಭವಾಗದಿದ್ದರೆ, ಸಂಬಳ ನೀಡುವುದು ಕಷ್ಟವಾಗಲಿದೆ. ಇದಕ್ಕಾಗಿ ದೇಗುಲ ಕೆಲ ಆಸ್ತಿಗಳನ್ನು ಮಾರಲು ಟಿಟಿಡಿ ಮುಂದಾಗಿದೆ. ಅದರಿಮದ ಅಂದಾಜು 500 ಕೋಟಿ ರೂ. ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಆಸ್ತಿ ಮಾರಾಟದ ವಿರುದ್ಧ ಆನ್​ಲೈನ್​ನಲ್ಲಿ ‘STOP SELLING TIRUMALA TIRUPATHI PROPERTIES’ ಅಭಿಯಾನ ನಡೆಸಲಾಗುತ್ತಿದೆ.

    ಹಿಂದು ಧಾರ್ಮಿಕ ದತ್ತಿ ಅಥವಾ ಆಸ್ತಿಗಳ ಮಾರಾಟಕ್ಕೆ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಮುಸ್ಲಿಮರ ಧಾರ್ಮಿಕ ಸ್ವತ್ತು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ (ವಕ್ಫ್​ ಮಂಡಳಿ) ಅಂತೆಯೇ ಕ್ರೈಸ್ತರು ಕೂಡ ತಾವೇ ನಿರ್ವಹಹಿಸುತ್ತಾರೆ. ಆದರೆ, ಹಿಂದುಗಳ ಧಾರ್ಮಿಕ ಸ್ವತ್ತು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಇಲ್ಲವೆಂದು ಅಭಿಯಾನದಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ; ಸಿಬ್ಬಂದಿಗೆ ಸಂಬಳ ನೀಡಲು ಜಮೀನು ಮಾರಾಟಕ್ಕೆ ಮುಂದಾದ ತಿರುಪತಿ ದೇಗುಲ ಮಂಡಳಿ 

    ಈ ಅಭಿಯಾನಕ್ಕೆ 57,600 ಜನರು ಈಗಾಗಲೇ ಸಹಿ ಹಾಕಿದ್ದಾರೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ತಿಳಿಸಲಾಗಿದೆ.
    ಆನ್​ಲೈನ್​ ಅಭಿಯಾನದ ಲಿಂಕ್​ ಇಲ್ಲಿದೆ……….
    https://bit.ly/2XtZwFY

    ವುಹಾನ್​ ವೈರಸ್ ಕರೊನಾ​ಗೆ ಚೀನಿಯರಿಂದಲೇ ಮದ್ದು, ಲಸಿಕೆ ಯಶಸ್ವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts