More

    ವುಹಾನ್​ ವೈರಸ್ ಕರೊನಾ​ಗೆ ಚೀನಿಯರಿಂದಲೇ ಮದ್ದು, ಲಸಿಕೆ ಯಶಸ್ವಿ

    ನವದೆಹಲಿ: ಅಮೆರಿಕದ ಮಾಡೆರ್ನಾ ಕಂಪನಿ ಕರೊನಾ ನಿಗ್ರಹಕ್ಕಾಗಿ ಸಂಶೋಧಿಸುತ್ತಿರುವ ಲಸಿಕೆ ಮಾನವರ ಮೇಲೆ ಆರಂಭಿಕ ಹಂತದಲ್ಲಿ ಯಶಸ್ಸು ಕಂಡ ಬಂದ ಬೆನ್ನಲ್ಲೇ ಚೀನಿ ಕಂಪನಿ ಕೂಡ ಇದೇ ಸಾಲಿಗೆ ಸೇರಿದೆ.

    ಮಾನವರ ಮೇಲೆ ಕರೊನಾ ಲಸಿಕೆ ಪ್ರಯೋಗ (ಕ್ಲಿನಿಕಲ್​ ಟ್ರಯಲ್ಸ್​)ಯಶಸ್ವಿಯಾಗಿದೆ ಎಂದು ಚೀನಾದ ಕ್ಯಾನ್​ಸಿನೋ ಬಯಾಲಾಜಿಕಲ್ಸ್​ ಕಂಪನಿ ಹೇಳಿಕೊಂಡಿದೆ. ಲಸಿಕೆಯು ಮಾನವರ ಬಳಕೆಗೆ ಸುರಕ್ಷಿತವಾಗಿದೆ ಹಾಗೂ ಕರೊನಾ ವೈರಸ್​ನಿಂದ ದೇಹವನ್ನು ಕಾಪಾಡಬಲ್ಲುದು ಎಂದು ಪ್ರಯೋಗದ ಫಲಿತಾಂಶದ ಮೂಲಕ ತಿಳಿದು ಬಂದಿದೆ ಎಂದು ತಿಳಿಸಿದೆ.

    ಸದ್ಯ ಜಗತ್ತಿನಲ್ಲಿ 100ಕ್ಕೂ ಅಧಿಕ ಕಂಪನಿಗಳು ಕೋವಿಡ್​19 ಕಾಯಿಲೆಗೆ ಲಸಿಕೆ ಕಂಡುಹಿಡಿಯುವಲ್ಲಿ ನಿರತವಾಗಿವೆ. ಕೆಲ ಕಂಪನಿಗಳು ಹೊಸದಾಗಿ ಲಸಿಕೆ ಸಂಶೋಧನೆ ನಡೆಸಿದ್ದರೆ, ಕೆಲ ಕಂಪನಿಗಳು ಈಗಿರುವ ಲಸಿಕೆಗಳನ್ನೇ ಮಾರ್ಪಾಡು ಮಾಡುವಲ್ಲಿ ತೊಡಗಿವೆ.

    ಇದನ್ನೂ ಓದಿ; ಕರೊನಾ ಲಸಿಕೆ ಸಂಶೋಧನೆಯಲ್ಲಿ ಜಗತ್ತಿನ ಗಮನ ಸೆಳೆದ ಥಾಯ್ಲೆಂಡ್​ 

    ಭಾರತದಲ್ಲಿ ಝೈಡಸ್​ ಕ್ಯಾಡಿಯಾ, ಸಿರಂ ಇನ್​ಸ್ಟಿಟ್ಯೂಟ್​, ಬಯಾಲಾಜಿಕಲ್​ ಇ, ಭಾರತ್​ ಬಯೋಟೆಕ್​, ಇಂಡಿಯನ್​ ಇಮ್ಯುನೋಲಾಜಿಕಲ್ಸ್​ ಹಾಗೂ ಮಿನ್​ವಾಕ್ಸ್​ ಕಂಪನಿಗಳು ಲಸಿಕೆ ಸಂಶೋಧನೆಯಲ್ಲಿ ನಿರತವಾಗಿವೆ.

    ಚೀನಾದ ಕ್ಯಾನ್​ಸಿನೋ ಬಯಾಲಾಜಿಕಲ್ಸ್​ ಕಂಪನಿ ತನ್ನ ಲಸಿಕೆಯು ಮಾನವ ದೇಹದಲ್ಲಿ ಕರೊನಾ ವೈರಸ್​ ವ್ಯಾಪಿಸುವುದನ್ನು ನಿಗ್ರಹಿಸಲು ಪ್ರತಿರೋಧಕ ಶಕ್ತಿಯನ್ನು ಉತ್ಪಾದಿಸುವಲ್ಲಿ ಶಕ್ತವಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.

    ವಿವಿಧ ಪ್ರಯೋಗಾಲಯದ ಮಟ್ಟದಲ್ಲಿ 18 ರಿಂದ 60 ವರ್ಷ ವಯಸ್ಸಿನ 108 ಜನರ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿತ್ತು. ಲಸಿಕೆಯ ಸಿಂಗಲ್​ ಡೋಸ್​ ಪಡೆದವರ ದೇಹದಲ್ಲಿ ಪ್ರತಿಕಾಯಗಳು ಉತ್ಪಾದನೆಯಾಗಿವೆ. 28 ದಿನಗಳಲ್ಲಿ ಇವುಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪಿತ್ತು ಎಂದು ಕಂಪನಿ ಹೇಳಿದೆ.

    ಇದನ್ನೂ ಓದಿ; ಪರಮಾಣು ಪರೀಕ್ಷೆಗೆ ಸಜ್ಜಾಗುತ್ತಿದೆಯೇ ಅಮೆರಿಕ? 

    ಇದು ಆರಂಭಿಕ ಹಂತದ ಪರೀಕ್ಷೆಯಾಗಿದ್ದು, ಮುಂದಿನ ಹಂತದಲ್ಲಿ ಸಾವಿರಾರು ಜನರ ಮೇಲೆ ಪ್ರಯೋಗಿಸಿ ಇದರ ಪರಿಣಾಮಕಾರಿ ಗುಣವನ್ನು ಕಂಡುಕೊಳ್ಳಲಾಗುತ್ತದೆ. ಲಸಿಕೆ ಪಡೆದ ಶೇ.81 ಜನರಲ್ಲಿ ಒಂದಿಲ್ಲೊಂದು ಅಡ್ಡ ಪರಿಣಾಮ ಕಂಡುಬಂದಿದೆ. ಕೆಲವರಲ್ಲಿ ಕೆಂಪು ಗುಳ್ಳೆಗಳಾಗಿದ್ದರೆ, ಊದಿಕೊಂಡಿರುವುದು, ತುರಿಕೆ ಉಂಟಾಗಿದೆ. ಇದಲ್ಲದೆ, ಜ್ವರ, ಸ್ನಾಯು ಸೆಳೆತ ಹಾಗೂ ತಲೆನೋವು ಕೂಡ ಕಾಣಿಸಿಕೊಂಡಿದೆ ಎಂದು ಕಂಪನಿ ಮಾಹಿತಿ ನೀಡಿದೆ.

    ಕರೊನಾ ಲಸಿಕೆ ಎಲ್ಲೇ ಸಂಶೋಧಿಸಲ್ಪಟ್ಟರೂ ಇಲ್ಲಿ ಉತ್ಪಾದನೆ ಖಚಿತ, ಭಾರತದ ಬಳಿಯಲ್ಲೇ ಇರಲಿದೆ ಕೀಲಿ ಕೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts