More

    ಕರೊನಾ ಲಸಿಕೆ ಎಲ್ಲೇ ಸಂಶೋಧಿಸಲ್ಪಟ್ಟರೂ ಇಲ್ಲಿ ಉತ್ಪಾದನೆ ಖಚಿತ, ಭಾರತದ ಬಳಿಯಲ್ಲೇ ಇರಲಿದೆ ಕೀಲಿ ಕೈ

    ಔಷಧ ಕ್ಷೇತ್ರದಲ್ಲಿ ಭಾರತ ಪಾರಮ್ಯ ಮೆರೆದಿದೆ ಎಂಬುದು ತಿಳಿದಿರುವ ಸಂಗತಿ. ಅದರಲ್ಲೂ ಕಳೆದ ಕೆಲ ದಶಕಗಳಿಂದ ಜಗತ್ತಿನಾದ್ಯಂತ ಬಳಕೆಯಾಗುವ ಲಸಿಕೆಯ ಶೇ.60ರಿಂದ 70 ರಷ್ಟು ಭಾರತದಲ್ಲಿಯೇ ತಯಾರಾಗುತ್ತದೆ…!

    ಅದರಲ್ಲೂ ಮುಖ್ಯವಾದ ಇನ್ನೊಂದು ಸಂಗತಿ ಎಂದರೆ ಲಸಿಕೆಗಳ ತಯಾರಿಕೆಯಲ್ಲಿ ಪುಣೆಯ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಏಕೆಂದರೆ, ಪ್ರತಿ ವರ್ಷ 1.5 ಬಿಲಿಯನ್​ ( 150 ಕೋಟಿ) ಡೋಸ್​ ಲಸಿಕೆಯನ್ನು ತಯಾರಿಸುತ್ತದೆ. 150 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿಕೊಂಡಿದ್ದು, ಜಗತ್ತಿನಲ್ಲಿಯೇ ಲಸಿಕೆ ಉತ್ಪಾದನೆಯ ಅತಿ ದೊಡ್ಡ ಸಂಸ್ಥೆಯೂ ಇದಾಗಿದೆ.

    ಕೋವಿಡ್​ಗೆ ಲಸಿಕೆ ಸಂಶೋಧನೆಯಲ್ಲಿ ಸದ್ಯ ಮುಂಚೂಣಿಯಲ್ಲಿರುವ ಅಮೆರಿಕದ ಸಂಸ್ಥೆ ಇಲ್ಲಿ ಔಷಧ ಉತ್ಪಾದನೆ ಮಾಡಲಿದೆ. ಅದರಲ್ಲಿ, ಮುಕ್ಕಾಲು ಪಾಲು ಔಷಧ ಅಮೆರಿಕದ ಪಾಲಾದರೂ, ಕೆಲ ಮಿಲಿಯನ್​ ಡೋಸ್​ಗಳನ್ನು ಕಂಪನಿ ಭಾರತಕ್ಕೆಂದೇ ಉಳಿಸಿಕೊಳ್ಳಲಿದೆ. ಹೀಗಾಗಿ ಭಾರತಕ್ಕೆ ಲಸಿಕೆ ದೊರೆಯುವುದು ಪಕ್ಕಾ ಎನ್ನಬಹುದು.

    ಇದನ್ನೂ ಓದಿ; ಪರಮಾಣು ಪರೀಕ್ಷೆಗೆ ಸಜ್ಜಾಗುತ್ತಿದೆಯೇ ಅಮೆರಿಕ? 

    ಈಗಾಗಲೇ ಲಸಿಕೆ ಸಂಶೋಧನೆಯಲ್ಲಿ ಪೈಪೋಟಿಯಲ್ಲಿ ತೊಡಗಿರುವ ಅನೇಕ ಕಂಪನಿಗಳು ಸಿರಂ ಇನ್​ಸ್ಟಿಟ್ಯೂಟ್​ನೊಂದಿಗೆ ತಯಾರಿಕೆ ಒಪ್ಪಂದ ಮಾಡಿಕೊಂಡಿವೆ. ಹೀಗಾಗಿ ಯಾವುದೇ ಸಂಶೋಧನೆ ಯಶಸ್ವಿಯಾದರೂ ಅದರ ಉತ್ಪಾದನೆ ಇಲ್ಲಿ ನಡೆಯಲಿದೆ. ಒಂದು ವೇಳೆ ಒಪ್ಪಂದ ಮಾಡಿಕೊಳ್ಳದ ಕಂಪನಿಯ ಲಸಿಕೆ ಯಶಸ್ವಿಯಾದರೂ ಇಲ್ಲಿನ ಬೃಹತ್​ ಉತ್ಪಾದನಾ ಸಾಮರ್ಥ್ಯವನ್ನು ಬಳಸಿಕೊಳ್ಳುವುದಂತೂ ಖಚಿತವಾಗಿದೆ.

    ಹೀಗಾಗಿ, ಇಡೀ ಪುಣೆಯೇ ಲಾಕ್​ಡೌನ್​ನಲ್ಲಿ ಬಂಧಿಯಾಗಿರುವಾಗ ಸಿರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಸಂಸ್ಥೆಯಲ್ಲಿ ಇನ್ನಿಲ್ಲದ ಚಟುವಟಿಕೆಗಳು ನಡೆಯುತ್ತಿವೆ. ನೂರಾರು ಬಸ್​ಗಳು ಕಾರ್ಮಿಕರನ್ನು ಹೊತ್ತು ಬರುತ್ತಿವೆ.

    ಸಿರಂ ಇನ್​ಸ್ಟಿಟ್ಯೂಟ್​ ಸೈರಸ್​ ಪೂನಾವಾಲಾ ಕುಟುಂಬ ಒಡೆತನದ ಖಾಸಗಿ ಸಂಸ್ಥೆಯಾದರೂ, ಸ್ವತಃ ಕೇಂದ್ರ ಸರ್ಕಾರವೇ ಇಲ್ಲಿನ ಚಟುವಟಿಕೆಗಳನ್ನು ದಿನವೂ ಗಮನಿಸುತ್ತಿದೆ. ಪ್ರತಿಯೊಂದರ ಮೇಲೆ ನಿಗಾವಹಿಸಿದೆ. ಯಾವುದೇ ಅಡ್ಡಿ ಎದುರಾದರೂ ಆ ಕ್ಷಣದಲ್ಲಿಯೇ ಪರಿಹಾರ ಕಾಣಲಿದೆ.

    ಇದನ್ನೂ ಓದಿ; ಗೋರಖನಾಥ್​ ದೇಗುಲದ ಆಸ್ತಿ ಧ್ವಂಸಕ್ಕೆ ಆದೇಶಿಸಿದ ಯುಪಿ ಸಿಎಂ

    ಲಸಿಕೆ ತಯಾರಿಗೆ ಎಲ್ಲ ಸಿದ್ಧತೆ: ಕಾನೂನಾತ್ಮಕವಾಗಿ ಎಲ್ಲ ಅನುಮತಿಗಳನ್ನು ಪಡೆದ ಬಳಿಕವೇ ಇಲ್ಲಿ ಲಸಿಕೆ ಉತ್ಪಾದನೆ ಆರಂಭವಾಗಲಿದೆ. ಲಸಿಕೆಗೆ ಬೇಕಾಗುವ ಗಾಜಿನ ನಳಿಕೆಗಳು, ರಾಸಾಯನಿಕ ಮೊದಲಾದವುಗಳನ್ನು ಭಾರಿ ಪ್ರಮಾಣದಲ್ಲಿ ಇಲ್ಲಿ ದಾಸ್ತಾನಿದೆ. ಕನಿಷ್ಠ ಎರಡು ವರ್ಷಗಳಿಗಾಗುವಷ್ಟು ಸಂಗ್ರಹ ನಮ್ಮಲ್ಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಅದಾರ್​ ಪೂನಾವಾಲಾ ಹೇಳುತ್ತಾರೆ.

    ಲಸಿಕೆ ತಯಾರಿಕೆಗಾಗಿ ಸಂಸ್ಥೆಯು ತಜ್ಞರು, ಔಷಧ ಉತ್ಪಾದಕರು ಹಾಗೂ ಸಂಬಂಧಿಸಿದವರೊಂದಿಗೆ ಸದಾ ಸಂಪರ್ಕದಲ್ಲಿದೆ. ಇಲ್ಲಿ ಯಾರೂ ಮುಖ್ಯರಲ್ಲ, ಇಡೀ ಜಗತ್ತೇ ಕರೊನಾ ವಿರುದ್ಧದ ಹೋರಾಟದಲ್ಲಿದೆ. ಹೀಗಾಗಿ ನಮ್ಮಲ್ಲಿ ಭಾರಿ ವೇಗದಲ್ಲಿ ಕೆಲಸಗಳು ನಡೆದಿವೆ ಎನ್ನುತ್ತಾರೆ ಪೂನಾವಾಲಾ.

    ಮತ್ತೊಂದು ಸುತ್ತಿನ ಸೀಲ್​ ​ಡೌನ್​ ಬರುತ್ತಾ? ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ಪಾಲಿಸಿದರೆ ಏಳು ರಾಜ್ಯಗಳು ಸಂಪೂರ್ಣ ಬಂದ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts