More

    ಪರಮಾಣು ಪರೀಕ್ಷೆಗೆ ಸಜ್ಜಾಗುತ್ತಿದೆಯೇ ಅಮೆರಿಕ?

    ನವದೆಹಲಿ: ಅಮೆರಿಕ ಮೂರು ದಶಕಗಳ ಬಳಿಕ ಮತ್ತೊಂದು ಪರಮಾಣು ಪರೀಕ್ಷೆಗೆ ಸಜ್ಜಾಗಿದೆ…!
    ಮೂರು ದಶಕಗಳ ಬಳಿಕ ಮತ್ತೊಮ್ಮೆ ಪರಮಾಣು ಪರೀಕ್ಷೆ ನಡೆಸಲು ಹಿರಿಯ ಅಧಿಕಾರಿಗಳೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕಳೆದ ವಾರ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ರಕ್ಷಣಾ ಇಲಾಖೆ ಅಧಿಕಾರಿ ಹಾಗೂ ಇಬ್ಬರು ಮಾಜಿ ಅಧಿಕಾರಿಗಳು ಇಂಥದ್ದೊಂದು ಚರ್ಚೆ ನಡೆದಿರುವುದನ್ನು ಖಚಿತಪಡಿಸಿದ್ದಾರೆ.

    ಇಷ್ಟಕ್ಕೂ, ಅಮೆರಿಕ ತಲೆಯಲ್ಲಿ ಪರಮಾಣು ಪರೀಕ್ಷೆಯ ಹುಳು ಹೊಕ್ಕಿದ್ದಾದರೂ ಏಕೆ ಗೊತ್ತಾ? ಚೀನಾ ಹಾಗೂ ರಷ್ಯಾಗಳು ಕಡಿಮೆ ತೀವ್ರತೆಯ ಪರಮಾಣು ಪರೀಕ್ಷೆ ನಡೆಸಲಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಹೀಗಾಗಿ ಅಮೆರಿಕ ಕೂಡ ಈ ನಿಟ್ಟಿನಲ್ಲಿ ಹಿಂದುಳಿಯಲು ಬಯಸುತ್ತಿಲ್ಲ. ಅದಲ್ಲದೇ, ಇದೇ ನವೆಂಬರ್​ಗೆ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿವೆ. ಹೀಗಾಗಿ ಇದೊಂದು ಚುನಾವಣಾ ವಿಷಯವಾದರೂ ಅಚ್ಚರಿಯಿಲ್ಲ.

    ಇದನ್ನೂ ಓದಿ; ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರ ಬದಲಾಯಿಸಿಕೊಳ್ಳಲು ಮೇ 29 ಕೊನೇ ದಿನಾಂಕ, ಇಲ್ಲಿದೆ ವಿಧಾನ, ಸಹಾಯವಾಣಿ

    ಅಮೆರಿಕ ಈ ಮೊದಲು 1992ರಲ್ಲಿ ಪರಮಾಣು ಪರೀಕ್ಷೆ ನಡೆಸಿತ್ತು. ರಾಷ್ಟ್ರೀಯ ಭದ್ರತಾ ಏಜೆನ್ಸಿಗಳ ಹಿರಿಯ ಅಧಿಕಾರಿಗಳು, ಮಾಜಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಪರಮಾಣು ಪರೀಕ್ಷೆ ಕ್ಷಿಪ್ರ ಪರೀಕ್ಷೆ ಅಮೆರಿಕಕ್ಕೆ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಬಲ್ಲುದು ಎಂಬ ಬಗ್ಗೆ ಅಧ್ಯಕ್ಷರೊಂದಿಗೆ ಚರ್ಚೆ ನಡೆಸಿದ್ದಾರೆ.

    ಅಣುಶಕ್ತಿ ಹೊಂದಿರುವ ರಾಷ್ಟ್ರಗಳ ಶಸ್ತ್ರಾಸ್ತ್ರ ನಿಯಂತ್ರಣಕ್ಕಾಗಿ ಅಮೆರಿಕ ತ್ರಿಪಕ್ಷೀಯ ಒಪ್ಪಂದವನ್ನು ಬಯಸುತ್ತಿದೆ. ಒಮ್ಮೆ ಪರಮಾಣು ಸ್ಫೋಟ ನಡೆಸಿದಲ್ಲಿ ಅಮೆರಿಕದ ಸಂಧಾನ ಶಕ್ತಿಗೆ ಬಲ ಬರಲಿದೆ ಎಂಬ ವಿಚಾರ ಚರ್ಚೆಯಾಗಿದೆ. ಆದರೆ, ಅಂತಿಮವಾಗಿ ಪರಮಾಣು ಪರೀಕ್ಷೆಗೆ ಸಮ್ಮತಿ ವ್ಯಕ್ತವಾಗಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಹೇಳಲಾಗಿದೆ.

    ಇದನ್ನೂ ಓದಿ; ಗೋರಖನಾಥ್​ ದೇಗುಲದ ಆಸ್ತಿ ಧ್ವಂಸಕ್ಕೆ ಆದೇಶಿಸಿದ ಯುಪಿ ಸಿಎಂ

    ಅಂತಿಮವಾಗಿ ರಷ್ಯಾ ಹಾಗೂ ಚೀನಾದಿಂದ ಎದುರಾಗಬಹುದಾದ ಅಪಾಯವನ್ನು ಪರಿಗಣಿಸಿ ಕೈಗೊಳ್ಳುವ ಕ್ರಮದ ಭಾಗವಾಗಿ ಪರಮಾಣು ಸ್ಫೋಟ ನಡೆಸುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಶ್ಲೇಷಿಸಲಾಗಿದೆ.

    ಮತ್ತೊಂದು ಸುತ್ತಿನ ಸೀಲ್​ ​ಡೌನ್​ ಬರುತ್ತಾ? ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ಪಾಲಿಸಿದರೆ ಏಳು ರಾಜ್ಯಗಳು ಸಂಪೂರ್ಣ ಬಂದ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts