ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರ ಬದಲಾಯಿಸಿಕೊಳ್ಳಲು ಮೇ 29 ಕೊನೇ ದಿನಾಂಕ, ಇಲ್ಲಿದೆ ವಿಧಾನ, ಸಹಾಯವಾಣಿ

sslc new
Published on

ಬೆಂಗಳೂರು: ಎಸ್​ಎಸ್​ಎಲ್​ಸಿ ಪರೀಕ್ಷೆ ಜೂನ್​ 25ರಿಂದ ಜುಲೈ 4ರವರೆಗೆ ನಡೆಯಲಿವೆ. ಆದರೆ, ಈಗಾಗಲೇ ಸರ್ಕಾರಿ, ಖಾಸಗಿ ಹಾಸ್ಟೆಲ್​ ಅಥವಾ ವಸತಿ ಶಾಲೆಗಳಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಸ್ವಗ್ರಾಮಗಳಿಗೆ ತೆರಳಿದ್ದಾರೆ. ಅಲ್ಲದೇ. ವಲಸೆ ಕಾರ್ಮಿಕ ಕುಟುಂಬಗಳು ಕೂಡ ನಗರ ಪ್ರದೇಶಗಳನ್ನು ಬಿಟ್ಟು ಊರುಗಳಿಗೆ ತೆರಳಿವೆ. ಸದ್ಯ ಹಾಸ್ಟೆಲ್​ ಹಾಗೂ ವಸತಿ ಶಾಲೆಗಳನ್ನು ಕ್ವಾರಂಟೇನ್​ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮರಳಲು ಅವಕಾಶವಿಲ್ಲ. ಈ ಎಲ್ಲ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ತಾವಿರುವ ಊರಿನಲ್ಲೇ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ.

ಈ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳುವುದು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪರೀಕ್ಷಾ ಕೇಂದ್ರ ಬದಲಾಯಿಸಿಕೊಳ್ಳಲು ಮೇ 29 ಕೊನೆಯ ದಿನಾಂಕವಾಗಿದೆ.

* ವಿದ್ಯಾರ್ಥಿಗಳು ಮೂಲಕ ಕೇಂದ್ರದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದಿದ್ದಲ್ಲಿ, ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ, ತಮಗೆ ಹತ್ತಿರವಿರುವ ಪರೀಕ್ಷಾ ಕೇಂದ್ರಕ್ಕೆ ಮುಖ್ಯ ಶಿಕ್ಷಕರ ಲಾಗಿನ್​ ಮೂಲಕ ಬದಲಾಯಿಸಿಕೊಳ್ಳುವುದು.

* ಪರೀಕ್ಷಾ ಕೇಂದ್ರ ಬದಲಾವಣೆಗೆ ಮೇ 29 ಕೊನೆಯ ದಿನವಾಗಿದೆ. ಈ ವೇಳೆಗೆ ಪರೀಕ್ಷಾ ಕೇಂದ್ರ ಬದಲಾವಣೆ ಸಾಧ್ಯವಾಗದಿದ್ದಲ್ಲಿ ಮೂಲ ಕೇಂದ್ರದಿಂದಲೇ ಬರೆಯುವುದು ಕಡ್ಡಾಯ.

* ತಾಲೂಕಿನ ಒಳಗೆ ಪರೀಕ್ಷಾ ಕೇಂದ್ರ ಬದಲಾವಣೆ ಅವಕಾಶವಿಲ್ಲ

* ಪರೀಕ್ಷಾ ಕೇಂದ್ರ ಬದಲಾಯಿಸಿಕೊಂಡರೂ ಹಳೇ ನೋಂದಣಿ ಸಂಖ್ಯೆಯೇ ಮುಂದುವರಿಯುವುದು

* ಒಮ್ಮೆ ಪರೀಕ್ಷಾ ಕೇಂದ್ರ ಬದಲಾಯಿಸಿಕೊಂಡ ಬಳಿಕ ಮೂಲ ಕೇಂದ್ರದಿಂದ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ.

ಪರೀಕ್ಷಾ ಕೇಂದ್ರ ಬದಲಾವಣೆ ಬಳಿಕ ಪ್ರವೇಶ ಪತ್ರ ಪಡೆಯಲು ಹೀಗೆ ಮಾಡಿ.....

* ಪ್ರಸ್ತುತ ಓದುತ್ತಿರುವ ಶಾಲೆ ಮುಖ್ಯಸ್ಥರಿಂದ ವಾಟ್ಸ್​ಆ್ಯಪ್​ ಮೂಲಕ ಪ್ರವೇಶ ಪತ್ರ ತರಿಸಿಕೊಳ್ಳಿ.

* ಬದಲಾಯಿಸಿಕೊಂಡಿರುವ ಶಾಲೆಯ ಮಖ್ಯಸ್ಥರಿಂದಲೂ ಪಡೆಯಬಹುದು.

* ತಾಲೂಕು ಶಿಕ್ಷಣಾಧಿಕಾರಿಗಳ ಕಚೇರಿಯಿಂದಲೂ ನೋಂದಣಿ ಸಂಖ್ಯೆ ತಿಳಿಸುವ ಮೂಲಕ ಪ್ರವೇಶ ಪತ್ರ ಪಡೆಯಬಹುದು.

ಈ ಕುರಿತು ಯಾವುದೇ ಗೊಂದಲಗಳಿದ್ದರೆ 080-23310075, 23310076, ಮೊ: 9739131393 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net