More

    ಹಿಜಾಬ್​ಗಾಗಿ ಪಿಯುಸಿ ಪರೀಕ್ಷೆಯನ್ನೇ ಬಹಿಷ್ಕರಿಸಿದ ಆರು ವಿದ್ಯಾರ್ಥಿನಿಯರು!

    ಯಾದಗಿರಿ: ಉಡುಪಿನ ವಿಚಾರಕ್ಕೆ ಉಡುಪಿಯಲ್ಲಿ ತಕರಾರು ತೆಗೆದಿದ್ದ ಆರು ವಿದ್ಯಾರ್ಥಿನಿಯರ ಸಾಲಿಗೆ ಮತ್ತೆ ಆರು ವಿದ್ಯಾರ್ಥಿನಿಯರು ಸೇರಿಕೊಂಡಿದ್ದಾರೆ. ಅಂದರೆ ರಾಜ್ಯದ ಇನ್ನೊಂದು ಕಡೆಯಲ್ಲೂ ಆರು ವಿದ್ಯಾರ್ಥಿನಿಯರು ಹಿಜಾಬ್​ಗಾಗಿ ಪಿಯುಸಿ ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ.

    ತರಗತಿಯಲ್ಲಿ ಹಿಜಾಬ್ ಧರಿಸಿ ಕುಳಿತುಕೊಳ್ಳಲು ಅವಕಾಶ ಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ಆರು ವಿದ್ಯಾರ್ಥಿನಿಯರು ಪ್ರತಿಭಟಿಸಿದ ದಾರಿಯಲ್ಲೇ ಈ ಆರು ವಿದ್ಯಾರ್ಥಿನಿಯರು ಸಾಗಿದ್ದು, ಇವರು ಪಿಯುಸಿ ಪರೀಕ್ಷೆಗೂ ಹಿಜಾಬ್​ ಧರಿಸಿ ಹಾಜರಾಗಲು ಅವಕಾಶ ನೀಡಬೇಕು ಎಂದು ಕೇಳಿದ್ದಾರೆ.

    ಯಾದಗಿರಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಪಿಯುಸಿ ಕಲಾ ವಿಭಾಗದ ಈ ವಿದ್ಯಾರ್ಥಿನಿಯರು ಇಂದು ಅರ್ಥಶಾಸ್ತ್ರದ ಪರೀಕ್ಷೆ ಬರೆಯಬೇಕಿತ್ತು. ಆದರೆ ಹಿಜಾಬ್​ ಧರಿಸಿ ಪರೀಕ್ಷೆಗೆ ಹಾಜರಾಗಲು ಮೇಲ್ವಿಚಾರಕರು ಅವಕಾಶ ನೀಡದ್ದಕ್ಕೆ ಈ ಆರು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ವಾಪಸ್ ಆಗಿದ್ದಾರೆ.

    ಎಫ್​ಡಿಎನಲ್ಲೂ ಡೀಲ್! ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ರಹಸ್ಯ ಬಯಲು

    ‘ನಾನು ನಿಮ್ಮ ಓಲ್ಡ್ ಸ್ಟುಡೆಂಟ್..’ ಎಂದು ಹೇಳಿ ಶಿಕ್ಷಕಿಗೇ ಮೋಸ ಮಾಡಿದ ವಂಚಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts