ಗುಂಡ್ಯಡ್ಕ ಫಾಲ್ಸ್ ಸಾರ್ವಜನಿಕ ವೀಕ್ಷಣೆಗೆ ನಿಷೇಧ

New Project (16)
Published on

ಮೂಡುಬಿದಿರೆ: ಮಳೆಗಾಲದಲ್ಲಿ ಅಪಾಯಕಾರಿಯಾಗಿರುವ ಗುಂಡ್ಯಡ್ಕ ಫಾಲ್ಸ್‌ನ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ವೀಕ್ಷಣೆಯನ್ನು ನಿಷೇಧಿಸಿದ್ದು, ತಪ್ಪಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಪುತ್ತಿಗೆ ಗ್ರಾಮ ಪಂಚಾಯಿತಿ ವತಿಯಿಂದ ಎಚ್ಚರಿಕೆಯ ಬ್ಯಾನರನ್ನು ಫಾಲ್ಸ್ ಬಳಿ ಅಳವಡಿಸಲಾಗಿದೆ.

ತಾಲೂಕು ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ, ಪಿಡಿಒ ಭೀಮ ಬಿ.ನಾಯಕ್, ವಿ.ಎ. ಗಾಯತ್ರಿ ಉಪಸ್ಥಿತಿಯಲ್ಲಿ ಬ್ಯಾನರ್ ಅಳವಡಿಸಲಾಯಿತು. ಭಾನುವಾರದಂದು ಮಂಗಳೂರಿನ ಕಡೆಯಿಂದ ಕೆಲವು ಯುವಕರು ಫಾಲ್ಸ್‌ಗೆಂದು ಬಂದು ಎರುಗುಂಡಿಗೆ ಇಳಿದು ನೀರಿನ ರಭಸಕ್ಕೆ ಸಿಲುಕಿಕೊಂಡಿದ್ದು, ಅವರನ್ನು ಸ್ಥಳೀಯರು ರಕ್ಷಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net