

ಉಳ್ಳಾಲ: ಪಜೀರ್ ಗ್ರಾಪಂ ವ್ಯಾಪ್ತಿಯ ಬಳಿಕ ಎಂಬಲ್ಲಿ ಸೋಮವಾರ ರಾತ್ರಿ ಸುರಿದ ಮಳೆಯಿಂದ ತಡೆಗೋಡೆ ಕುಸಿದು ಬಿದ್ದು ಇಸ್ಮಾಯಿಲ್ ಎಂಬುವರ ಮನೆ ಸಂಪೂರ್ಣ ಹಾನಿಗೊಂಡಿದೆ.
ಘಟನೆ ಸಂದರ್ಭ ಮನೆಯಲ್ಲಿ ಇಸ್ಮಾಯಿಲ್ ಅವರ ಸೊಸೆ ಮತ್ತು ಮಗು ಇದ್ದರೂ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆ ಸಂಪೂರ್ಣ ಹಾನಿಯಾಗಿರುವುದರಿಂದ ಮನೆಯವರನ್ನು ಸ್ಥಳಾಂತರಿಸಲಾಗಿದೆ. ತಹಸೀಲ್ದಾರ್ ಪುಟ್ಟರಾಜು, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಫೀಕ್, ಕುರ್ನಾಡು ಗ್ರಾಮ ಪಂಚಾಯಿತಿ ಗ್ರಾಮಕರಣಿಕ ತೌಫೀಕ್ ಮತ್ತಿತರರು ಭೇಟಿ ನೀಡಿದರು.