2021ರಲ್ಲಿ 269 ದಿನವಷ್ಟೇ ಸರ್ಕಾರಿ ಕಚೇರಿ! - ಸರ್ಕಾರಿ ನೌಕರರಿಗೆ 19 ಪರಿಮಿತ ರಜೆ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

Public holidays in karnataka
Published on

ಬೆಂಗಳೂರು : ಸದ್ಯ ಕರೊನಾದಿಂದಾಗಿ ಬಣಗುಟ್ಟುತ್ತಿರುವ ರಾಜ್ಯದ ಸರ್ಕಾರಿ ಕಚೇರಿಗಳು 2021ನೇ ಸಾಲಿನಲ್ಲೂ 269 ದಿನಗಳಷ್ಟೇ ನಡೆಯಲಿವೆ! ರಾಜ್ಯ ಸರ್ಕಾರ 2021ನೇ ಸಾಲಿನ ಸರ್ಕಾರಿ ರಜೆಗಳನ್ನು ಘೂಷಣೆ ಮಾಡಿ ಶನಿವಾರ ಆದೇಶ ಹೊರಡಿಸಿದ್ದು, ಒಟ್ಟು 20 ಸಾರ್ವತ್ರಿಕ ರಜೆ, 52 ಭಾನುವಾರ, 2 ಮತ್ತು 4ನೇ ಶನಿವಾರದ ರಜೆ ಜತೆಗೆ 19 ಪರಿಮಿತ ರಜೆಗಳನ್ನೂ ಘೋಷಿಸಲಾಗಿದೆ.

ಸಾರ್ವತ್ರಿಕ ರಜೆಗಳು  ಜ.14 ಮಕರ ಸಂಕ್ರಾಂತಿ ಜ.26 ಗಣರಾಜ್ಯೋತ್ಸವ ಮಾ.11 ಮಹಾಶಿವರಾತ್ರಿ ಏ.4 ಗುಡ್​ಫ್ರೈಡೇ ಏ.13 ಯುಗಾದಿ ಏ.14 ಅಂಬೇಡ್ಕರ್ ಜಯಂತಿ ಮೇ 1 ಕಾರ್ವಿುಕರ ದಿನಾಚರಣೆ ಮೇ 14 ಬಸವ ಜಯಂತಿ ಜು.21 ಬಕ್ರಿದ್ ಆ. 20 ಮೊಹರಂ ಕಡೆದಿನ ಸೆ.10 ವಿನಾಯಕ ಚತುರ್ಥಿ ಅ. 2 ಗಾಂಧಿ ಜಯಂತಿ ಅ.6 ಮಹಾಲಯ ಅಮಾವಾಸ್ಯೆ ಅ.14 ಆಯುಧ ಪೂಜೆ ಅ.15 ವಿಜಯದಶಮಿ ಅ.20 ವಾಲ್ಮೀಕಿ ಜಯಂತಿ ನ.1 ಕನ್ನಡ ರಾಜ್ಯೋತ್ಸವ ನ.3 ನರಕ ಚತುರ್ದಶಿ ನ.5 ಬಲಿಪಾಡ್ಯಮಿ ನ.22 ಕನಕದಾಸ ಜಯಂತಿ

ಸರಣಿ ರಜೆ ಹೆಚ್ಚು: ಗುಡ್ ಫ್ರೈಡೇ, ಬಸವ ಜಯಂತಿ, ಮೊಹರಂ ಕಡೆಯ ದಿನ, ಗಣೇಶ ಚತುರ್ಥಿ, ವಿಜಯ ದಶಮಿ ಹಾಗೂ ಬಲಿ ಪಾಡ್ಯಮಿ ಶುಕ್ರವಾರ ಬಂದಿವೆ. ಇವುಗಳ ಜತೆಗೆ ಶನಿವಾರ ರಜೆ ಹಾಕಿಕೊಂಡರೆ ಮೂರು ದಿನದ ರಜೆ ಪಡೆಯಲು ಅವಕಾಶ ಇದೆ. ಕಾರ್ವಿುಕ ದಿನಾಚರಣೆ, ಗಾಂಧಿ ಜಯಂತಿ ಶನಿವಾರ ಇವೆ. ಕನಕ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಸೋಮವಾರ ಇರುವುದರಿಂದ ಭಾನುವಾರ ಸೇರಿ ಎರಡು ದಿನ ರಜೆ ಬರಲಿವೆ.

ರಜೆ ಪಟ್ಟಿಗೆ ಸೇರದ್ದು : ಮಹಾವೀರ ಜಯಂತಿ (ಏ.25), ಸ್ವಾತಂತ್ರ್ಯ ದಿನಾಚರಣೆ (ಆ.15.) ಭಾನುವಾರ ಬಂದರೆ, ಕ್ರಿಸ್​ವುಸ್(ಡಿ.25.) 2ನೇ ಶನಿವಾರ ಬರುತ್ತದೆ. ಆದ್ದರಿಂದ ಅವು ರಜೆ ದಿನ ಒಳಗೊಂಡಿರುವುದಿಲ್ಲ. ಮಧ್ವ ನವಮಿ (ಫೆ.21), ಹೋಳಿ ಹಬ್ಬ(ಮಾ.28), ಶ್ರೀರಾಮಾಜಾಚಾರ್ಯ ಜಯಂತಿ(ಏ.18) ಯಜುರ್ ಉಪಾಕರ್ಮ(ಆ.22.) ಶ್ರೀಕೃಷ್ಣ ಜನ್ಮಾಷ್ಠಮಿ(ಆ.29) ಅನಂತ ಪದ್ಮನಾಭ ವ್ರತ (ಸೆ.19) ಭಾನುವಾರ ಬರುವುದಿಂದ ರಜೆ ಪಟ್ಟಿಯಲ್ಲಿ ಸೇರಿಸಿಲ್ಲ. ಸೌರಮಾನ ಯುಗಾದಿ(ಏ.14) ಬುಧವಾರ ಡಾ. ಅಂಬೇಡ್ಕರ್ ಜಯಂತಿ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜೆ ದಿವಸ ಬರುವುದರಿಂದ ಅದನ್ನು ಕೂಡ ರಜೆ ಪಟ್ಟಿಯಲ್ಲಿ ಸೇರಿಸಿಲ್ಲ.

ನಿರ್ಬಂಧಿತ ರಜಾದಿನ : ಜ.1 ನೂತನ ವರ್ಷಾರಂಭ, ಮಾ.30 ಷಬ್-ಎ-ಬರಾತ್, ಏ.3 ಹೋಳಿ ಶನಿವಾರ, ಏ.17 ದೇವರ ದಾಸಿಮಯ್ಯ ಜಯಂತಿ, ಏ.21 ಶ್ರೀರಾಮನವಮಿ, ಮೇ 7 ಜುಮಾತ್-ಉಲ್-ವಿದಾ, ಮೇ 10 ಷಬ್-ಎ-ಖದರ್, ಮೇ 17 ಶಂಕರಾಚಾರ್ಯ ಜಯಂತಿ, ಮೇ 26 ಬುದ್ದ ಪೂರ್ಣಿಮೆ, ಆ. 20 ವರಮಹಾಲಕ್ಷ್ಮಿ ವ್ರತ, ಆ. 21 ಓಣಂ, ಆ. 23 ಬ್ರರ್ಹಶ್ರೀ ನಾರಾಯಣಗುರು ಜಯಂತಿ, ಸೆ.9 ಸ್ವರ್ಣಗೌರಿ ವ್ರತ, ಸೆ.17 ವಿಶ್ವಕರ್ಮ ಜಯಂತಿ, ಅ.18 ತುಲಾ ಸಂಕ್ರಮಣ, ನ.19 ಗುರುನಾನಕ್ ಜಯಂತಿ, ನ.20 ಪುತರಿ ಹಬ್ಬ, ಡಿ.24 ಕ್ರಿಸ್​ವುಸ್ ಈವ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net