PSI ಹುದ್ದೆ ಅಕ್ರಮ: ಪೊಲೀಸಪ್ಪನ ಮನೆಯಲ್ಲಿತ್ತು ಒಂದೂವರೆ ಕೋಟಿ ರೂ. ನಗದು!

PSI
Published on

ಬೆಂಗಳೂರು: ಪಿಎಸ್​ಐ ಹುದ್ದೆ ನೇಮಕಾತಿ ಹಗರಣ ಪ್ರಕರಣ ಸಂಬಂಧ ಕಳೆದ ಶುಕ್ರವಾರ ಸಿಐಡಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆರೋಪಿ ಶ್ರೀಧರ್​ ಮನೆಯಲ್ಲಿ ಒಂದೂವರೆ ಕೋಟಿ ರೂಪಾಯಿ ನಗದು ಸಿಕ್ಕಿದೆ!

ನೇಮಕಾತಿ ವಿಭಾಗದ AHC ಆಗಿ ಕೆಲಸ ಮಾಡುತ್ತಿದ್ದ ಶ್ರೀಧರ್, ಡಿವೈಎಸ್ಪಿ ಶಾಂತಕುಮಾರ್ ಅಣತಿಯಂತೆ ಕೆಲಸ ಮಾಡಿದ್ದ. ಈ ಪ್ರಕರಣದ ಬೆನ್ನುಹತ್ತಿದ ಸಿಐಡಿ, ಶ್ರೀಧರ್​ ಮನೆ ಮೇಲೆ ದಾಳಿ ನಡೆಸಿತ್ತು. ದಾಳಿಯ ದಿನ 16 ಲಕ್ಷ ಹಣ ಪತ್ತೆಯಾಗಿತ್ತು. ಮತ್ತೊಂದು ಮನೆಯ ಮೇಲೆ ದಾಳಿ ನಡೆಸಿದಾಗ ಶ್ರೀಧರ್​ನ ಕೋಣೆಯಲ್ಲಿ 1.55 ಕೋಟಿ ರೂ. ನಗದು ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net