ಎಂದಿನಂತೆ ಸಾರಿಗೆ ಸಂಚಾರ ಆರಂಭ; ಬಸ್​ ತಡೆದು ಕನ್ನಡಪರ ಸಂಘಟನೆಗಳು ಆಕ್ರೋಶ | Karnataka Bandh

Karnataka Bandh: ಇತ್ತೀಚೆಗೆ ಮಹಾರಾಷ್ಟ್ರ ಮರಾಠಿ ಪುಂಡರು ಕನ್ನಡಿಗರ ಮೇಲೆ ನಡೆಸಿದ ಅಟ್ಟಹಾಸ, ದಬ್ಬಾಳಿಕೆಯನ್ನು ತೀವ್ರ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​, ಇಂದು ರಾಜ್ಯಾದ್ಯಂತ ಬಂದ್​ಗೆ ಕರೆ ನೀಡಿದ್ದಾರೆ. ಬಂದ್​ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ನೈತಿಕ, ನೇರ ಬಂಬಲ ಕೊಟ್ಟಿಲ್ಲ. ಸದ್ಯ ಇದೇ ಬಂದ್​ ಬಿಸಿಯನ್ನು ಕೊಂಚ ಮಟ್ಟಿಗೆ ಇಳಿಸಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಕಮಾಲ್, ಕಿಯಾರಾ ಮಾಲಾಮಾಲ್ ! : ಪ್ಯಾನ್ ವರ್ಲ್ಡ್ ಚಿತ್ರಕ್ಕೆ 15 ಕೋಟಿ ಸಂಭಾವನೆ ಪಡೆದ ಬಾಲಿವುಡ್ ನಟಿ

ಬಂದ್ ಹಿನ್ನೆಲೆ ಸಾರಿಗೆ ಬಸ್​ಗಳ ಸಂಚಾರ, ಆಟೋ, ಟ್ಯಾಕ್ಸಿ ಇರಲಿದೆಯೇ ಎಂಬ ಅನುಮಾನ ಜನರಲ್ಲಿ ಮೂಡಿತ್ತು. ಆದರೆ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಎಂದಿನಂತೆ ಸಾರಿಗೆ ಸಂಚಾರ ಆರಂಭಗೊಂಡಿದೆ. ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ರಸ್ತೆಗಿಳಿದಿವೆ. ಒಂದೆಡೆ ಬಸ್​ಗಳ ಸಂಚಾರ ಆರಂಭಗೊಂಡಿದ್ದೇ ತಡ ಕೆಲವು ಕನ್ನಡ ಪರ ಸಂಘಟನೆಗಳು ಬಸ್​ ತಡೆದು ಪ್ರತಿಭಟನೆ ನಡೆಸುತ್ತಿವೆ.

ಬಸ್​ ನಿಲ್ದಾಣ ಸೇರಿದಂತೆ ರಸ್ತೆಗಳಲ್ಲಿ ಸಾರಿಗೆ ಬಸ್​ಗಳನ್ನು ತಡೆದು ನಿಲ್ಲಿಸಿ, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಮಂಡ್ಯ, ಮೈಸೂರು, ಕೊಪ್ಪಳ, ಹಾವೇರಿಯಲ್ಲಿ ಪ್ರತಿಭಟನಾನಿರತ ಹೋರಾಟಗಾರರು ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

CSK-RCB ಮಧ್ಯೆ ಇದೊಂದೇ ದೊಡ್ಡ ವ್ಯತ್ಯಾಸ! 5 ಬಾರಿ ಚಾಂಪಿಯನ್ಸ್ ಬಗ್ಗೆ ಮಾಜಿ ಕ್ರಿಕೆಟಿಗ ಗುಣಗಾನ​ | IPL 2025

Share This Article

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…