ಅತಿವೃಷ್ಟಿ ಪರಿಹಾರ ಆಗ್ರಹಿಸಿ ಪ್ರತಿಭಟನೆ

raitha
ಕೋಟದ ರೈತ ಧ್ವನಿ ಸಂಘದಿಂದ ಮುಂದಿನ ಹೋರಾಟಗಳ ಬಗ್ಗೆ ಚರ್ಚೆ, ಬೆಂಬಲ ಬೆಲೆ ಆಗ್ರಹಿಸಿ ಮನವಿ ಕುರಿತು ಸಭೆ ನಡೆಸಿತು
Published on

ಕೋಟ: ಕೋಟ ಸಿ.ಎ ಬ್ಯಾಂಕ್ ಬಿ.ಸಿ.ಹೊಳ್ಳ ಸಹಕಾರ ಸಭಾಭವನದಲ್ಲಿ ಕೋಟದ ರೈತಧ್ವನಿ ಸಂಘಟನೆ ವಿಶೇಷ ಸಭೆ ಜರುಗಿತು.
ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ ಸಂಘಟನೆ ಇತ್ತೀಚೆಗೆ ನಡೆಸಿದ ರೈತ ಉಪವಾಸ ನಿರಾಶನದ ಲೆಕ್ಕಪತ್ರ ಸಭೆಯಲ್ಲಿ ಮಂಡಿಸಿದರು.

ಪ್ರಸ್ತುತ ರೈತರು ಬೆಳೆದ ಭತ್ತಕ್ಕೆ ಪ್ರತಿ ಕೆ.ಜಿ.ಗೆ ಕೇವಲ ರೂ 22.ರೂ ದರ ರೈಸ್‌ಮಿಲ್ ಮಾಲೀಕರು ನಿಗದಿ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ತೀರಾ ಕನಿಷ್ಠ ಬೆಲೆಯಾಗಿದೆ. ಇದು ರೈತರನ್ನು ಶೋಷಣೆಗೀಡು ಮಾಡಿದ್ದು, ಈ ಬಗ್ಗೆ ಶೀಘ್ರದಲ್ಲಿ ರೈತರ ನಿಯೋಗದೊಂದಿಗೆ ಉಡುಪಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಮಿಲ್ ಮಾಲೀಕರು ಮತ್ತು ಕೃಷಿ ಅಧಿಕಾರಿಗಳ ಸಭೆ ಕರೆದು ರೈತರ ಭತ್ತಕ್ಕೆ ನ್ಯಾಯಯುತ ದರ ನಿಗದಿ ಮಾಡಲು ಒತ್ತಾಯಿಸುವುದು. ಈ ಬಗ್ಗೆ ಮುಂದೆ ಹೋರಾಟ, ಸೂಲಡ್ಪು-ಮಡಿವಾಳಸಾಲು ಹೊಳೆ ಹೂಳೆತ್ತುವ ಕಾಮಗಾರಿಗೆ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದ್ದು, ಅಕ್ಟೋಬರ್ 15ರ ಬಳಿಕ ರೈತರ ನಿಯೋಗರಾಜ್ಯದ ಉಪಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಲು ಹಾಗೂ ಮಣೂರು ಗ್ರಾಮದ ಕಾಂಡ್ಲ ವನ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು.ರೈತ ಧ್ವನಿ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net