ಜಿಲ್ಲಾಮಟ್ಟದ ನೆಟ್‌ಬಾಲ್ ಪಂದ್ಯಾಟ

ball
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ನೆಟ್‌ಬಾಲ್ ಪಂದ್ಯಾಟದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಕ್ರೀಡಾ ನಿಯಮ ವಿವರಿಸಿದರು.
Published on

ಬೈಂದೂರು: ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಜಿಲ್ಲಾಮಟ್ಟದ ಬಾಲಕ-ಬಾಲಕಿಯರ ನೆಟ್‌ಬಾಲ್ ಟೂರ್ನಿ ಸೋಮವಾರ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

ಪ್ರಾಂಶುಪಾಲ ಗೋಪಾಲಕೃಷ್ಣ ಜಿ.ಬಿ. ಅಧ್ಯಕ್ಷತೆ ವಹಿಸಿದ್ದರು. ಮಿಲಾಗ್ರಿಸ್ ಪಪೂ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ಸುಮನ್, ಜನತಾ ಪಪೂ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಪ್ರಣಯ ಕುಮಾರ್ ಶೆಟ್ಟಿ, ಗಂಗೊಳ್ಳಿ ಎಸ್.ವಿ. ಪಪೂ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕ ದೀಕ್ಷಿತ್ ಮೇಸ್ತ, ಪ್ರಥಮ ದರ್ಜೆ ಸಹಾಯಕ ದಿನಕರ ಶೆಟ್ಟಿ ಹರ್ಕಡಿ, ಕಚೇರಿ ಸಹಾಯಕ ಯತೀಶ್ ನೆಂಪು, ಬಾಲಕರ ವಸತಿ ನಿಲಯ ಮೇಲ್ವಿಚಾರಕ ಅರುಣ್ ಕೊಠಾರಿ, ರಾಜ್ಯಮಟ್ಟದ ನೆಟ್‌ಬಾಲ್ ತೀರ್ಪುಗಾರ ಅವಿನಾಶ್ ಆಚಾರ್ಯ, ರಾಷ್ಟ್ರಮಟ್ಟದ ನೆಟ್‌ಬಾಲ್ ಆಟಗಾರರಾದ ಗಣೇಶ್ ಕೊಠಾರಿ, ಪೃಥ್ವಿನ್ ಗಾಣಿಗ, ಕೀರ್ತನ್, ಕಿರಣ್ ಆಚಾರ್ಯ, ರಾಜ್ಯಮಟ್ಟದ ನೆಟ್‌ಬಾಲ್ ಆಟಗಾರರಾದ ವಿನಾಯಕ ಆಚಾರ್ಯ, ವಿನಾಯಕ ಜೋಗಿ ಇದ್ದರು.

ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ ಶೆಟ್ಟಿ ಹುಂಚನಿ ಪ್ರಾಸ್ತಾವಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ನಾಗರಾಜ ಅಡಿಗ ನೀಲಾವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net