ಮುಸ್ಲಿಂ ಯೂತ್ ಲೀಗ್‌ನಿಂದ ಪ್ರತಿಭಟನೆ : ಎಡರಂಗ ಸರ್ಕಾರದ ದುರಾಡಳಿತ ಖಂಡನೆ

New Project (26)
Published on

ಕಾಸರಗೋಡು: ಎಡರಂಗ ಸರ್ಕಾರದ ದುರಾಡಳಿತ ಹಾಗೂ ಆರೋಗ್ಯ ಕ್ಷೇತ್ರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಮುಸ್ಲಿಂ ಯೂತ್ ಲೀಗ್ ಕಾಸರಗೋಡು ಜಿಲ್ಲಾ ಸಮಿತಿಯ ನೇತತ್ವದಲ್ಲಿ ಕಾಞಂಗಾಡ್‌ನ ಜಿಲ್ಲಾ ವೈದ್ಯಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಆರಂಗಡಿ ಬಳಿಯಿದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಡಿಎಂಒ ಕಚೇರಿ ಬಳಿ ತಲುಪುತ್ತಿದ್ದಂತೆ ಪೊಲೀಸರು ತಡೆಯೊಡ್ಡಿದರು. ಈ ಸಂದರ್ಭ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಪೊಲೀಸರು ಜಲಫಿರಂಗಿ ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದರು.

ಯೂತ್‌ಲೀಗ್ ರಾಜ್ಯ ಸಮಿತಿ ಉಪಾಧ್ಯಕ್ಷ ಅಶ್ರಫ್ ಎಡನೀರ್ ಧರಣಿ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಅಜೀಜ್ ಕಳತ್ತೂರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ವಕೀಲೆ ಫಾತಿಮಾ ತಹ್ಲಿಯಾ ಮುಖ್ಯ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಕೆ.ಕೆ. ಬದ್ರುದ್ದೀನ್, ಎಂ.ಎ.ನಜೀಬ್, ಶಂಸುದ್ದೀನ್ ಆವಿಯಿಲ್, ರಹಮಾನ್ ಗೋಲ್ಡನ್, ನೌಶಾದ್ ಎಂ.ಪಿ., ಎ.ಹಮೀದ್ ಹಾಜಿ, ಮುಬಾರಕ್ ಹಸೈನಾರ್ ಹಾಜಿ ಇದ್ದರು. ಪ್ರಧಾನ ಕಾರ್ಯದರ್ಶಿ ಜಹೀರ್ ಆಸಿಫ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net