ಗುರುಪುರ: ದೇಶದ ಇತಿಹಾಸದಲ್ಲಿ ಶಾಂತಿಯುತ ಹೋರಾಟಕ್ಕೆ ಒಂದು ಗೌರವದ ಸ್ಥಾನವಿದೆ. ಈ ದೇಶದ ಅಸ್ತಿತ್ವದಲ್ಲೂ ಹೋರಾಟ, ಧರಣಿಗಳು ಮಹತ್ವದ ಪಾತ್ರ ವಹಿಸಿವೆ. ಅಂತಹ ಹೋರಾಟ ಹತ್ತಿಕ್ಕಲು ಮುಂದಾಗಿರುವ ಮಂಗಳೂರು ಪೊಲೀಸ್ ಆಯುಕ್ತರು ಒಂದು ಬಾರಿ ಈ ಜಿಲ್ಲೆಯ ಹೋರಾಟದ ಇತಿಹಾಸ ಗಮನಿಸಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ ಹೇಳಿದರು.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅವರ ವರ್ಗಾವಣೆ ಆಗ್ರಹಿಸಿ ಸಿಪಿಎಂ ಗುರುಪುರ ವಲಯ ಸಮಿತಿ ವತಿಯಿಂದ ಸೋಮವಾರ ಗುರುಪುರ ಕೈಕಂಬದ ಜಂಕ್ಷನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿಪಿಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್ ಮಾತನಾಡಿ, ಅವ್ಯವಹಾರಗಳ ಕಾನೂನುಬಾಹಿರತೆ ಪ್ರಶ್ನಿಸದ ಅಗರ್ವಾಲ್‌ರಿಗೆ ಜನರು ನಿತ್ಯ ಅನುಭವಿಸುತ್ತಿರುವ ಜಟಿಲ ಸಮಸ್ಯೆ ಅರ್ಥವಾಗುವುದು ಹೇಗೆ?. ಇಂತಹ ಭ್ರಷ್ಟ ಅಧಿಕಾರಿಗಳ ಅಗತ್ಯ ದಕ್ಷಿಣ ಕನ್ನಡ ಜಿಲ್ಲೆಗಿಲ್ಲ ಎಂದು ಗುಡುಗಿದರು.
ಪ್ರತಿಭಟನೆಯಲ್ಲಿ ಸಿಪಿಐಎಂನ ಜಿಲ್ಲಾ ಮುಖಂಡ ಮನೋಜ್ ವಾಮಂಜೂರು, ವಸಂತಿ ಕುಪ್ಪೆಪದವು, ವಲಯ ಸಮಿತಿ ಸದಸ್ಯರಾದ ಅಶೋಕ್ ಬಂಗೇರ, ನೋಣಯ್ಯ ಗೌಡ, ಬಾಬು ಸಾಲ್ಯಾನ್(ಇಸ್ತ್ರಿ), ವಾರಿಜಾ ಕುಪ್ಪೆಪದವು, ಗೋಪಾಲ ಮಳಲಿ ಮತ್ತಿತರರಿದ್ದರು.
ಸಾಂಸ್ಕೃತಿಕ ಪರಂಪರೆಯನ್ನು ಸಂಸ್ಕರಿಸುವ ಉದ್ದೇಶ : ರಕ್ಷಿತ್ ಶಿವರಾಂ ಅನಿಸಿಕೆ