ಶಿಕ್ಷಕಿಯರ ವರ್ಗಾವಣೆ ವಿರೋಧಿಸಿ ಪ್ರತಿಭಟನೆ : ದೇವಶ್ಯ ಮೂಡುರಿನಲ್ಲಿ ಘಟನೆ : ಪಾಲಕರಿಂದ ಶಿಕ್ಷಣಾಧಿಕಾರಿಗೆ ಮನವಿ

New Project (1)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ದೇವಶ್ಯ ಮೂಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಅವರನ್ನು ಹೆಚ್ಚುವರಿ ಶಿಕ್ಷಕಿಯಯಾಗಿ ವರ್ಗಾವಣೆಗೊಳಿಸುವಿಕೆ ಹಾಗೂ ಲಭ್ಯ ನಾಲ್ಕು ಶಿಕ್ಷಕರ ಪೈಕಿ ಓರ್ವರನ್ನು ಪುಣ್ಕೆದಡಿ ಶಾಲೆಗೆ ನಿಯೋಜನೆಗೊಳಿಸಿದ್ದನ್ನು ವಿರೋಧಿಸಿ ಪಾಲಕರು ಶಾಲೆಯ ವಠಾರದಲ್ಲಿ ಪ್ರತಿಭಟಿಸಿದರು.

ನಾಲ್ವರು ಶಿಕ್ಷಕಿಯರ ಪೈಕಿ ಇಬ್ಬರನ್ನು ಬೇರೆಡೆಗೆ ನಿಯೋಜಿಸಿದರೆ ಶಾಲೆ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಅಡಚಣೆಯಾಗುತ್ತದೆ. ಈ ಕುರಿತು ಕ್ರಮಕೈಗೊಳ್ಳುವಂತೆ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹಾಗೂ ಮಾಜಿ ಸಚಿವ ರಮಾನಾಥ ರೈ ಅವರ ಸೂಚನೆಗೂ ಬಗ್ಗದ ಶಿಕ್ಷಣ ಇಲಾಖೆ ವರ್ಗಾವಣೆ ಪ್ರಕ್ರಿಯೆ ಮುಂದುವರಿಸಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಮುದಿಮಾರ ಆರೋಪಿಸಿದರು.

ಸ್ಥಳಕ್ಕಾಗಮಿಸಿದ ಜಿಪಂ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಪಾಲಕರ ಅಹವಾಲು ಸ್ವೀಕರಿಸಿ ಬಳಿಕ ಬಂಟ್ವಾಳ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನೋಣಯ್ಯ ನಾಯ್ಕರ ಜತೆಗೆ ಮಾತುಕತೆ ನಡೆಸಿದರು. ಬಳಿಕ ಜಿಲ್ಲಾ ಉಪನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಕುರಿತು ಮನವರಿಕೆ ಮಾಡಲಾಯಿತು.

ಹಳೇ ವಿದ್ಯಾರ್ಥಿಗಳ ಸಂಘ ಅಧ್ಯಕ್ಷ ಯಶವಂತ್ ಕಾಂದ್ರೋಡಿ, ಪ್ರಮುಖರಾದ ರಾಮಕೃಷ್ಣ ಮಯ್ಯ, ಸುದರ್ಶನ್ ಬಜ, ಮೋನಪ್ಪ ಪೂಜಾರಿ ವಾರಂಬು , ಪಾಲಕರು ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net