

ಬೆಳ್ತಂಗಡಿ: ಮಲೆನಾಡು ಜನಹಿತ ರಕ್ಷಣಾ ವೇದಿಕೆ ಬೆಳ್ತಂಗಡಿ ತಾಲೂಕು ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿಯ ವಿರುದ್ಧ ಬೃಹತ್ ಪ್ರತಿಭಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯಲಿದೆ. ಇದರ ಪೂರ್ವಭಾವಿ ಸಭೆ ಬುಧವಾರ ಉಜಿರೆಯ ಶಾರದಾ ಮಂಟಪದಲ್ಲಿ ನಡೆಯಿತು.
ಹೋರಾಟಗಾರ ಕಿಶೋರ್ ಶಿರಾಡಿ ವಾತನಾಡಿ, ಮುಂದಿನ ತಾಲೂಕುಮಟ್ಟದ ಮತ್ತು ಗ್ರಾಮಮಟ್ಟದ ಹೋರಾಟದ ಬಗ್ಗೆ ವಾಹಿತಿ ನೀಡಿದರು. ನ.11ರಂದು ಬೆಳ್ತಂಗಡಿ ತಾಲೂಕು ಕಚೇರಿ ಎದುರು ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ತೀರ್ವಾನಿಸಲಾಯಿತು. ತಾಲೂಕು ಕಚೇರಿಯಲ್ಲಿ ಪ್ರತಿಭಟಿಸುವ ಮುನ್ನ ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಭಟಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ವಾಡಲು ತೀರ್ವಾನಿಸಲಾಯಿತು.
ಸಭೆಯಲ್ಲಿ ಮಲೆನಾಡು ಹಿತರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್, ಜಿ.ಪಂ. ವಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ, ವಾಜಿ ಸದಸ್ಯರಾದ ಕೊರಗಪ್ಪ ಗೌಡ, ಬಾಬು ಗೌಡ, ನಾವೂರ ಗ್ರಾ.ಪಂ. ವಾಜಿ ಅಧ್ಯಕ್ಷರಾದ ಗಣೇಶ್ ನಾವೂರ, ಜಯಂತ್ ಹೆಗ್ಡೆ ದಿಡುಪೆ, ವಾಧವ ಶಿರ್ಲಾಲು ಉಪಸ್ಥಿತರಿದ್ದರು. ಕರುಣಾಕರ್ ಶಿಶಿಲ ಸ್ವಾಗತಿಸಿ, ನವೀನ್ ರೆಖ್ಯ ವಂದಿಸಿದರು.