ವಿದ್ಯುತ್ ದರ ಏರಿಕೆ ವಿರುದ್ಧ ಪ್ರತಿಭಟನೆ

New Project (2)
Published on

ಬದಿಯಡ್ಕ: ವಿದ್ಯುತ್ ದರ ಏರಿಕೆಯ ವಿರುದ್ಧ ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ವತಿಯಿಂದ ಬುಧವಾರ ಸಂಜೆ ಬದಿಯಡ್ಕದಲ್ಲಿ ಪಂಜಿನ ಮೆರವಣಿಗೆ ನಡೆಯಿತು.

ಬಿಜೆಪಿ ಮುಖಂಡ ಮೈರ್ಕಳ ನಾರಾಯಣ ಭಟ್ ವಾತನಾಡಿ, ವಿದ್ಯುತ್ ದರ ಏರಿಸುವ ಮೂಲಕ ರಾಜ್ಯ ಸರ್ಕಾರ ಜನತೆಯ ಜೇಬಿಗೆ ಕತ್ತರಿ ಹಾಕುವ ಕಾರ್ಯ ವಾಡುತ್ತಿದೆ. ಪಿಣರಾಯಿ ನೇತೃತ್ವದ ಎಡರಂಗ ಸರ್ಕಾರದ ವಂಚನೆಯ ಆಡಳಿತ ಕೊನೆಗಾಣಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಅವಿನಾಶ್ ರೈ, ಬಾಲಕೃಷ್ಣ ಶೆಟ್ಟಿ, ಶರತ್ ವಳಮಲೆ, ರವಿ ಬಿ.ಎಂ.ಎಸ್., ವಕೀಲ ಗಣೇಶ್, ಈಶ್ವರ ಪೆರಡಾಲ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net