ಧಾರ್ಮಿಕ ಆಚರಣೆಗಳಿಗೆ ವಿರೋಧ ಸಲ್ಲ : ಪ್ರತಿಭಟನೆಯಲ್ಲಿ ವೆಂಕಟ್ ವಳಲಂಬೆ ಆಗ್ರಹ

protest
Published on

ಸುಳ್ಯ: ದಶಕಗಳಿಂದ ನಡೆದು ಬರುತ್ತಿರುವ ಹಿಂದುಗಳ ಧಾರ್ಮಿಕ ಹಬ್ಬಗಳಾದ ಗಣೇಶೋತ್ಸವ, ಶಾರದೋತ್ಸವ, ಮೊಸರು ಕುಡಿಕೆ ಮುಂತಾದವುಗಳನ್ನು ಶಿಕ್ಷಣ ಸಂಸ್ಥೆಗಳ ಮೈದಾನ, ಆವರಣಗಳಲ್ಲಿ ಆಚರಿಸುವುದನ್ನು ನಿರ್ಬಂಧಿಸುವ ಸರ್ಕಾರಿ ಆದೇಶ ವಿರುದ್ಧ ಬಿಜೆಪಿ ಯುವ ಮೋರ್ಚಾ, ಸುಳ್ಯ ಮಂಡಲ ಸಮಿತಿ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ ಹಿಂದಿನಿಂದಲೂ ಈ ಧಾರ್ಮಿಕ ಆಚರಣೆ ನಡೆಯುತ್ತಿದ್ದು, ಇದಕ್ಕೀಗ ಕಾಂಗ್ರೆಸ್ ಸರ್ಕಾರ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಹಿರಿಯರು ಸಾಮರಸ್ಯದಿಂದ ಯಾವುದೇ ಫಲಾಪೇಕ್ಷೆವಿಲ್ಲದೆ ಶಾಲೆಗಳ ನಿರ್ಮಾಣಕ್ಕೆ ಕೈ ಜೊಡಿಸಿದ್ದಾರೆ. ಇದೀಗ ಕಾಂಗ್ರೆಸ್ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುತ್ತಿದೆ. ಅಧಿವೇಶನ ಮುಕ್ತಾಯಕ್ಕೆ ಮುನ್ನ ಈ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ಹಾಗೂ ಇತರ ಮುಖಂಡರಾದ ವಿನಯಕುಮಾರ್ ಮುಳುಗಾಡು, ಎ.ವಿ.ತೀರ್ಥರಾಮ ಪ್ರತಿಭಟನ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಸರ್ಕಾರ ಆದೇಶದ ವಿರುದ್ಧ ಕಿಡಿಕಾರಿದರು. ಪ್ರತಿಭಟನೆ ಬಳಿಕ ಸುತ್ತೋಲೆ ಹಿಂಪಡೆಯಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ರಾಜೇಶ್ ರೈ ಕೆಡೆಂಜಿ, ಸುಬೋಧ್ ಶೆಟ್ಟಿ ಮೇನಾಲ, ವಿನಯಕುಮಾರ್ ಮುಳುಗಾಡು, ಎ.ಟಿ.ಕುಸುಮಾಧರ, ಸುನೀಲ್ ಕೇರ್ಪಳ, ಶಿವಾನಂದ ಕುಕ್ಕುಂಬಳ, ಮಹೇಶ್ ರೈ ಮೇನಾಲ, ಬೂಡು ರಾಧಾಕೃಷ್ಣ ರೈ ವಿಕ್ರಂ.ಎ.ವಿ., ಮನುದೇವ್ ಪರಮಲೆ, ನಾರಾಯಣ ಶಾಂತಿನಗರ, ನಿಕೇಶ್, ಬುದ್ದ ನಾಯ್ಕ, ಶಶಿಕಲಾ ನೀರಬಿದಿರೆ, ಗುಣವತಿ ಕೊಲ್ಲಂತಡ್ಕ, ಪುಷ್ಪಾ ಮೇದಪ್ಪ, ಸರೋಜಿನಿ, ಕಿಶೋರಿ ಶೇಟ್, ಸುದರ್ಶನ, ಶಿವನಾಥ್ ರಾವ್, ಶೀನಪ್ಪ ಬಯಂಬು, ಸುಪ್ರೀತ್ ಮೋಂಟಡ್ಕ, ಅಶೋಕ್, ಹೇಮಂತ, ಪ್ರಬೋದ್ ಮೇನಾಲ, ಸುನಿಲ್ ಮೇನಾಲ, ಗೋವಿಂದ ಅಳವುಪಾರೆ, ಕೇಶವ ಮಾಸ್ತ ಹೊಸಗದ್ದೆ ಶಿವರಾಮ ಕೇರ್ಪಳ, ರಾಜೇಶ್ ಉಪಸ್ಥಿತರಿದ್ದರು. ಪ್ರದೀಪ್ ಕೊಲ್ಲರಮೂಲೆ ಮನವಿ ಓದಿದರು. ಜಗನ್ನಾಥ ಜಯನಗರ ವಂದಿಸಿದರು. ಲತೀಶ್ ನಿರೂಪಿಸಿದರು.ಶಾಲಾ ಮೈದಾನದಲ್ಲಿ ಹಿಂದುಗಳ ಧಾರ್ಮಿಕ ಹಬ್ಬ ಆಚರಣೆಗೆ ಸರ್ಕಾರದ ವಿರೋಧ ವಿರೋಧಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ರಾಜೇಶ್ ರೈ ಕೆಡೆಂಜಿ, ಸುಬೋಧ್ ಶೆಟ್ಟಿ ಮೇನಾಲ, ವಿನಯಕುಮಾರ್ ಮುಳುಗಾಡು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net