

ವಿಜಯವಾಣಿ ಸುದ್ದಿಜಾಲ ಕಡಬ
ರಾಜ್ಯ ಕಾಂಗ್ರೆಸ್ ಸರ್ಕಾರ ಅನ್ಯಮತೀಯರ ದುಷ್ಕೃತ್ಯಗಳಿಗೆ ಬಹಿರಂಗ ಬೆಂಬಲ ನೀಡುತ್ತಿರುವುದರಿಂದ ಹಿಂದುಗಳ ಮೇಲೆ ಅನ್ಯಕೋಮಿನವರಿಂದ ನಿರಂತರ ದಾಳಿಗಳು ನಡೆಯುತ್ತಲೇ ಇವೆ. ಮದ್ದೂರು ಘಟನೆಯಿಂದ ಹಿಂದುಗಳ ಭಾವನೆಗೆ ಘಾಸಿಯಾಗಿದೆ ಎಂದು ಹಿಂದು ಮುಖಂಡ ಡಾ.ಸುರೇಶ್ ಕುಮಾರ್ ಕೂಡೂರು ಅಸಮಾಧಾನ ಹೊರಹಾಕಿದರು.
ಮದ್ದೂರು ಗಣೇಶೋತ್ಸವದ ಮೆರವಣಿಗೆಯಲ್ಲಿ ಕಲ್ಲು ತೂರಾಟ ಹಾಗು ಗಣಪತಿ ಮೂರ್ತಿ ಮೇಲೆ ಎಂಜಲು ಉಗಿದ ಪ್ರಕರಣ ಖಂಡಿಸಿ ವಿಶ್ವ ಹಿಂದು ಪರಿಷತ್ ಕಡಬ ಪ್ರಖಂಡ ನೇತೃತ್ವದಿಂದ ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪುಲಸ್ತ್ಯಾ ರೈ ಮಾತನಾಡಿದರು. ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು, ಗೌರವಾಧ್ಯಕ್ಷ ಕಡ್ಯ ವಾಸುದೇವ ಭಟ್, ಕಾರ್ಯದರ್ಶಿ ಪ್ರಮೀಳಾ ಲೋಕೇಶ್, ವಿಹಂಪ ಜಿಲ್ಲಾ ಸಹಸಂಚಾಲಕ ಪ್ರಮೋದ್ ನಂದಗುರಿ, ಕಡಬ ಪಟ್ಟಣ ಪಂಚಾಯಿತಿ ಸದಸ್ಯರಾದ ಕುಸುಮ ಅಂಗಡಿಮನೆ, ಅಕ್ಷತಾ ಕೋಡಿಂಬಾಳ, ದಯಾನಂದ ಪಿಜಕಳ , ಮುಖಂಡರಾದ ಅಜಿತ್ ಆರ್ತಿಲ, ಸತೀಶ್ ಕರ್ಮೆನ, ಜಯಂತ ಕಲ್ಲುಗುಡ್ಡೆ, ಎ.ಬಿ ಮನೋಹರ ರೈ, ದೇವಿಪ್ರಸಾದ್ ಮರ್ದಾಳ, ಸತ್ಯನಾರಾಯಣ ಹೆಗ್ಡೆ ನಡುಮಜಲು, ಪುರುಷೋತ್ತಮ ಕೊಂಬಾರು, ಮೋಕ್ಷಿತ ಕೊಂಬಾರು, ಚೇತನ್ ಬೇರಿಕೆ, ರಘುರಾಮ ನಾಕ್ , ಸತೀಶ್ ನಾಕ್, ಮೋಹನ್ ಕೆರೆಕೋಡಿ, ಮೇದಪ್ಪ ಡೆಪ್ಪುಣಿ, ದಯಾನಂದ ಉಂಡಿಲ, ದಯಾನಂದ ಆರಿಗ, ಕೃಷ್ಣ ಕಾರಂತ್, ಗಿರೀಶ ಎ.ಪಿ, ಕರುಣಾಕರ ಗೋಗಟೆೆ, ಸಂತೋಷ್ ಕೋಡಿಬೈಲು, ಸಂತೋಷ್ ಅಡ್ಡಹೊಳೆ, ಪ್ರೇಮಾ ವಿದ್ಯಾನಗರ, ವೀಣಾ ಕೊಲ್ಲೆಸಾಗು, ರವಿರಾಜ್ ಶೆಟ್ಟಿ, ಕಾರ್ತಿಕ್ ಪಿಜಕಳ, ವಿಶ್ವನಾಥ ರೈ ಪೆರಿಯಡ್ಕ, ಕಿಶನ್ ರೈ, ಪವಿತ್ರಾ ಸಿರಿಬಾಗಿಲು ಪಾಲ್ಗೊಂಡಿದ್ದರು. ಉಮೇಶ್ ಶೆಟ್ಟಿ ಸಾಯಿರಾಂ ಸ್ವಾಗತಿಸಿದರು. ರಾಧಾಕೃಷ್ಣ ಕೊಲ್ಪೆ ವಂದಿಸಿದರು.