

ಕಾರ್ಕಳ: ಈಗಿನಿಂದಲೇ ನೀರಿನ ಸದ್ಬಳಕೆ ಮಾಡದಿದ್ದರೆ ಭವಿಷ್ಯದಲ್ಲಿ ನೀರಿಗಾಗಿ ಬಡಿದಾಡುವ ಪರಿಸ್ಥಿತಿ ಎದುರಾಗುವುದರಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬರೂ ತಮ್ಮ ಜಮೀನಿನಲ್ಲಿ ನೀರು ಇಂಗಿಸುವ ವ್ಯವಸ್ಥೆ ಹೊಂದಿರಬೇಕು ಎಂದು ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಯತೀಶ್ ಕೋಟ್ಯಾನ್ ಹೇಳಿದರು.
ಕೇಂದ್ರ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಮೈ ಭಾರತ್ ನೆಹರು ಯುವ ಕೇಂದ್ರ ಉಡುಪಿ, ಚೈತನ್ಯ ಮಿತ್ರ ಮಂಡಳಿ ಚೈತನ್ಯ ಮಹಿಳಾ ಮತ್ತು ಯುವತಿ ಮಂಡಳಿ ಕಲ್ಯಾ ಸಹಯೋಗದಲ್ಲಿ ಚೈತನ್ಯ ಮಿತ್ರ ಮಂಡಳಿ ಆವರಣದಲ್ಲಿ ವಿಶ್ವಜಲ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುದರ್ಶನ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು. ಚೈತನ್ಯ ಮಿತ್ರ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ರವಿರಾಜ್ ನಾಯ್ಕ ಉಪಸ್ಥಿತರಿದ್ದರು. ಧೀರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.