VIDEO| ವೈರಲ್​ ಆಗ್ತಿದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ರ್ಯಾಂಪ್​ ವಾಕ್​ ವಿಡಿಯೋ..

collage (30)
Published on

ಮಾಡೆಲಿಂಗ್​ ಮತ್ತು ಕಿರುತೆರೆ ಹಿನ್ನೆಲೆಯಿಂದ ಬಂದ ಸ್ಮೃತಿ ಇರಾನಿ ಸದ್ಯ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಇದೇ ಪ್ರಭಾವಿ ರಾಜಕಾರಣಿಯ 22 ವರ್ಷದ ಹಿಂದಿನ ವಿಡಿಯೋ ತುಣುಕೊಂದು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

1998ರಲ್ಲಿ ಮಿಸ್​ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ, ರ್ಯಾಂಪ್​ ವಾಕ್​ ಮಾಡಿ ಸೂಜಿಗಲ್ಲಿನಂತೆ ಸೆಳೆದಿದ್ದ ಸ್ಮೃತಿ, ಸ್ಪರ್ಧೆಯಲ್ಲಿ ವಿಜೇತಯಾಗದಿದ್ದರೂ ಎಲ್ಲರ ಗಮನ ಸೆಳೆದಿದ್ದರು. ಆವತ್ತೇ ರಾಜಕೀಯದಲ್ಲಿನ ಆಸಕ್ತಿ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಆವತ್ತು ನುಡಿದಂತೆ ಕೇಂದ್ರ ಸರ್ಕಾರದಲ್ಲಿ ಜವಳಿ ಸಚಿವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಂದಹಾಗೆ, ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ನಿರ್ಮಾಣ ಮಾಡಿದ ಏಕ್ತಾ ಕಪೂರ್​, ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಸ್ನೇಹಿತೆಯ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಡೆಲಿಂಗ್​ನಲ್ಲಿ ಮೈಮಾಟ ಪ್ರದರ್ಶಿಸಿ, ಕಿರುತೆರೆ ಮೂಲಕ ಮನೆಮಾತಾಗಿ, ಇದೀಗ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಸ್ಥಾನ ಅಲಂಕರಿಸಿದ್ದಾರೆ’ ಎಂದು ಸ್ನೇಹಿತೆಯನ್ನು ನೆನಪು ಮಾಡಿಕೊಂಡಿದ್ದಾರೆ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net