ಪ್ಲಾಸ್ಟಿಕ್​ ಸರ್ಜರಿ ಮಾಡಿಸಲೋಗಿ ಪಿಗ್ಗಿ ಮೂಗಿನ ಆಕಾರ ಕೆಟ್ಟಿತ್ತಾ?; 20 ವರ್ಷಗಳ ಹಳೆಯ ಕಥೆ ಬಿಚ್ಚಿಟ್ಟ ಖ್ಯಾತ ನಿರ್ದೇಶಕ | Priyanka Chopra

Untitled design - 2024-12-20T182703.520
Published on

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಯಾರಿಗೆ ಗೊತ್ತಿಲ್ಲ ಹೇಳಿ. 2000 ಇಸವಿಯಲ್ಲಿ ಮಿಸ್​ ವರ್ಲ್ಡ್​​ ಪಟ್ಟವನ್ನು ಪಡೆದು ಬಾಲಿವುಡ್​, ಟಾಲಿವುಡ್​ ಮತ್ತು ಹಾಲಿವುಡ್​ಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಇಂದಿನ ಟಾಪ್​​ನಟಿಯ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಒಂದು ಸಮಯದಲ್ಲಿ ಸಿನಿಮಾರಂಗ ಬಿಟ್ಟು ಹೋಗಲು ನಿರ್ಧರಿಸಿದ್ದರು ಎಂಬುದು ನಿಮಗೆ ಗೊತ್ತೆ. ಈ ವಿಷಯವನ್ನು ಬಹಿರಂಗಪಡಿಸಿರುವ ಖ್ಯಾತ ಬಾಲಿವುಡ್​ ನಿರ್ದೇಶಕರೊಬ್ಬರು ಅದಕ್ಕೆ ಕಾರಣ ಏನೆಂಬುದನ್ನು ತಿಳಿಸಿದ್ದಾರೆ.

ಪ್ರಿಯಾಂಕಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮುಂಬೈ ತೊರೆದು ಮನೆಗೆ ಮರಳಲು ತೀರ್ಮಾನಿಸಿದ್ದರು. ಪ್ರಿಯಾಂಕಾ ತನ್ನ ಮೂಗಿನ ಶಸ್ತ್ರಚಿಕಿತ್ಸೆಯನ್ನು ಮಾಡಿದ ಸಮಯದಲ್ಲಿ ಈ ನಿರ್ಧಾರ ಕೈಗೊಂಡಿದ್ದರು. ಈ ನಿರ್ಧಾರ ತಪ್ಪೆಂದು ತಿಳಿಸಿ ಕೆಲಸ ಕೊಟ್ಟು ಇಲ್ಲಿಯೇ ಗದರ್ ಚಿತ್ರದ ನಿರ್ದೇಶಕ ಅನಿಲ್ ಶರ್ಮಾ ಉಳಿಸಿಕೊಂಡಿದ್ದಾಗಿ ಹೇಳಲಾಗುತ್ತದೆ.

ಪ್ರಿಯಾಂಕಾ ಅವರ ಮೂಗಿನ ಶಸ್ತ್ರಚಿಕಿತ್ಸೆ ಕುರಿತು ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿಡುವ ಅನಿಲ್​ ಶರ್ಮಾ ಅವರು, ಪ್ರಿಯಾಂಕಾ ಜೂಲಿಯಾ ರಾಬರ್ಟ್ಸ್‌ನಂತೆ ಕಾಣಲು ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾಳೆ ಎಂದು ನಾನು ಎಲ್ಲೋ ಓದಿದ್ದೇ ಆದ್ದರಿಂದ ನಾನು ಬೈದಿದ್ದೆ. ಆದರೆ ಅದು ಹಾಗಾಗಲಿಲ್ಲ ಎಂಬ ಸತ್ಯ ಬಳಿಕ ತಿಳಿಯಿತು ಎಂದಿದ್ದಾರೆ. ಅವರಿಗೆ ಮೂಗಿಗೆ ಸಮಸ್ಯೆ ಇದಿದ್ದರಿಂದ ಮೆಡಿಕಲ್ ಆಪರೇಷನ್ ಆಗಿದ್ದು ಆ ವೇಳೆ ತಪ್ಪಾಯಿತು ಎಂದು ತಿಳಿಯಿತು. ಹಾಗಾಗಿ ಅದರಲ್ಲಿ ಅವರ ತಪ್ಪಿರಲಿಲ್ಲ. ಈ ಶಸ್ತ್ರಚಿಕಿತ್ಸೆಯ ಪರಿಣಾಮವಾಗಿ ಪ್ರಿಯಾಂಕಾಳನ್ನು ಹಲವು ಸಿನಿಮಾಗಳಿಂದ ತೆಗೆದುಹಾಕಲಾಗಿದೆ ಎಂದು ನೆನಪಿಸಿಕೊಂಡರು.

ಆ ಒಂದು ಶಸ್ತ್ರಚಿಕಿತ್ಸೆಯಿಂದ ಪ್ರಿಯಾಂಕಾ ಚೋಪ್ರಾರನ್ನು ಹಲವು ಸಿನಿಮಾಗಳಿಂದ ತೆಗೆಯಲಾಯಿತು. ಆ ಸಮಯದಲ್ಲಿ ಆಕೆ ಪಡೆದಿದ್ದ ಟೋಕನ್​ ಮೊತ್ತವನ್ನು ಹಿಂದಿರುಗಿಸುವ ಪ್ರಕ್ರಿಯೆಯಲ್ಲಿದ್ದಳು ಮತ್ತು ಬರೇಲಿಗೆ ಹಿಂತಿರುಗಲು ಸುಮಾರು ಒಂದು ವರ್ಷದಿಂದ ಮುಂಬೈನಿಂದ ಹೊರಡಲು ಯೋಜಿಸಿದ್ದಳು. ಆಕೆಯ ಆಸಕ್ತಿ ಮತ್ತು ನಟನಾ ಸಾಮರ್ಥ್ಯ ತಿಳಿದಿದ್ದರಿಂದ ಅನಿಲ್ ಶರ್ಮಾ ಪ್ರಿಯಾಂಕಾರ ತೀರ್ಮಾನವನ್ನು ವಿರೋಧಿಸಿ ಆಕೆಯೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದಾರೆ.

ನಾನು ಪ್ರಿಯಾಂಕಾಗೆ ಆ ಸಮಯದಲ್ಲಿ 5 ಲಕ್ಷ ರೂಪಾಯಿ ಟೋಕನ್ ನೀಡಿದ್ದೆ. ನನಗೆ ಹಿಂದುರಿಗಿಸಲು ಚೆಕ್ ತಂದಿದ್ದಳು. ನನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದೆ, ಈಗ ನಾನು ಮತ್ತೆ ಬರೇಲಿಗೆ ಹೋಗುತ್ತಿದ್ದೇನೆ, ಹಣವನ್ನು ವಾಪಸ್ ಕೊಡಲು ಕಾಯುತ್ತಿದ್ದೇವು ಎಂದು ಹೇಳಿದರು. ಅದಕ್ಕೆ ನಾನು, ನೀವು ಹಣ ಇಟ್ಟುಕೊಳ್ಳಿ ಎಂದು ಸ್ವಲ್ಪ ಗದರಿಸಿದೆ. ಆಗ ಅವರ ಮೂಗಿಗೆ ನಿಜವಾಗಿ ಏನಾಯಿತು ಎಂದು ಹೇಳಿದ್ದರು. ಬಳಿಕ ನಾನು ಅನುಭವಿ ಮೇಕಪ್ ಆರ್ಟಿಸ್ಟ್‌ಗೆ ಕರೆ ಮಾಡಿ ಪ್ರಿಯಾಂಕಾ ಚೋಪ್ರಾ ಅವರ ಮೂಗಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದೇನೆ ಎಂದು ಅನಿಲ್ ಶರ್ಮಾ ಹೇಳಿದ್ದಾರೆ.

ಕೆಲಸ ಮುಗಿದ ನಂತರ ಆಕೆಗೆ ಮೇಕಪ್​ ಮಾಡಿ ​ಸ್ಕ್ರೀನ್ ಟೆಸ್ಟ್ ತೆಗೆದುಕೊಂಡೆ. ನಂತರ ನಾನು ಆ ಸಿಡಿಯನ್ನು ಕಳುಹಿಸಿದೆ. ಎಲ್ಲರೂ, ಈ ಹುಡುಗಿ ಯಾರು? ಎಂದು ಕೇಳುತ್ತಿದ್ದರು. ಇದು ಆಕೆಯ ಅದೃಷ್ಟವಾಗಿತ್ತು. ಅವಳ ಮೂಗಿಗೆ ಮಾಡಿದ ಶಸ್ತ್ರಚಿಕಿತ್ಸೆ ರಿಸಲ್ಟ್ ತಪ್ಪಾಗಿತ್ತು. ಅದು ಅವಳ ತಪ್ಪಲ್ಲ ಮತ್ತು ನಾವು ಅದನ್ನು ಸರಿಪಡಿಸಲು ಸಾಧ್ಯವಾದರೆ, ನಾವೇಕೆ ಮಾಡಬಾರದು? ಎಂದುಕೊಂಡೆ ಎಂದಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ಅನಿಲ್ ಶರ್ಮಾ ಅವರ ದಿ ಹೀರೋ - ಲವ್ ಸ್ಟೋರಿ ಆಫ್ ಎ ಸ್ಪೈ ಚಿತ್ರದಲ್ಲಿ ಕೆಲಸ ಮಾಡಿದರು. ಇದರಲ್ಲಿ ಸನ್ನಿ ಡಿಯೋಲ್ ಮತ್ತು ಪ್ರೀತಿ ಜಿಂಟಾ ಕೂಡ ನಟಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net